ಕೊಟ್ಟಿಯೂರು ದೇವಸ್ಥಾನದಲ್ಲಿ ಕರ್ನಾಟಕ ಭಕ್ತರ ಮೇಲೆ ದುರ್ವರ್ತನೆ – ನೂಕುನುಗ್ಗಲು, ಭಾರೀ ಅವ್ಯವಸ್ಥೆ

(ನ್ಯೂಸ್ ಕಡಬ) newskadaba.com ಜೂ. 08. ಕೇರಳದ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ದೇವಸ್ಥಾನದವೈಶಾಖ ಮಹೋತ್ಸವದಲ್ಲಿ ಭಕ್ತರ ನಿಯಂತ್ರಣ ತಪ್ಪಿ ನೂಕುನುಗ್ಗಲು ಉಂಟಾಗಿದ್ದು, ಕರ್ನಾಟಕದ ಭಕ್ತರನ್ನು ತಳ್ಳುವುದು ಹಾಗೂ ಭದ್ರತಾ ಸಿಬ್ಬಂದಿ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿವೆ.

1,000 ರೂ. ವಿಶೇಷ ಟಿಕೆಟ್ ಪಡೆದರೂ ಸೂಕ್ತ ದರ್ಶನ ನೀಡುತ್ತಿಲ್ಲ ಮತ್ತು ಕನ್ನಡಿಗರಿಗೆ ಗೌರವ ಸಿಗುತ್ತಿಲ್ಲ ಎಂದು ಭಕ್ತರು ಕಿಡಿಕಾರಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಧೋರಣೆಯಿಂದ ಬೇಸತ್ತಿರುವ ಕನ್ನಡಿಗರು, “ಕರ್ನಾಟಕದ ಭಕ್ತರು ಸದ್ಯಕ್ಕೆ ಯಾರೂ ಇಲ್ಲಿಗೆ ಬರಬೇಡಿಎಂದು ಮನವಿ ಮಾಡುತ್ತಿದ್ದಾರೆ.

Scroll to Top