ಇಂದು ಮಧ್ಯಾಹ್ನವೇ ಹೊರಬೀಳಲಿದೆ ಯುಜಿ-ಸಿಇಟಿ ರಿಸಲ್ಟ್..!



(ನ್ಯೂಸ್‌ ಕಡಬ) newskadaba.com ಜೂ. 06. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (UG-CET) ಫಲಿತಾಂಶವು ಇಂದು (ಶನಿವಾರ) ಪ್ರಕಟಗೊಳ್ಳಲಿದೆ.







ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರು ಇಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತ ಪತ್ರಿಕಾಗೋಷ್ಠಿ ನಡೆಸಲಿದ್ದು, ಸಿಇಟಿ ಫಲಿತಾಂಶದ ಸಂಪೂರ್ಣ ವಿವರಗಳು ಹಾಗೂ ಟಾಪರ್ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






ಮಧ್ಯಾಹ್ನ 2ರಿಂದ ಆನ್ಲೈನ್ನಲ್ಲಿ ಲಭ್ಯ: ಪತ್ರಿಕಾಗೋಷ್ಠಿಯ ನಂತರ, ಮಧ್ಯಾಹ್ನ 2:00 ಗಂಟೆಯಿಂದ ವಿದ್ಯಾರ್ಥಿಗಳು ಕೆಇಎ ಅಧಿಕೃತ ವೆಬ್ಸೈಟ್ಗಳಲ್ಲಿ ತಮ್ಮ ರಿಜಿಸ್ಟರ್ ನಂಬರ್ ನಮೂದಿಸಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

error: Content is protected !!
Scroll to Top