ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ| ತೈಲ ಬೆಲೆ ಹೆಚ್ಚಳದಿಂದ ಇಳಿಯುತ್ತಿರುವ ಚಿನ್ನದ ಬೆಲೆ



(ನ್ಯೂಸ್‌ ಕಡಬ) newskadaba.com,  ಜೂ.05: : ಅಮೆರಿಕ- ಇರಾನ್ ನಡುವೆ ಮುಂದುವರಿದ ಮಾತುಕತೆ, ಇತ್ತ ತೈಲ ಬೆಲೆ ಏರಿಕೆಯಿಮದಾಗಿ ಚಿನ್ನದ ಮೇಲೆ ನಿರಂತರವಾಗಿ ಒತ್ತಡ ಸೃಷ್ಟಿಯಾಗಿದ್ದು ಬೆಲೆ ಇಳಿಕೆಗೆ ಕಾರಣವಾಗಿದೆ. ಸತತ ಕಳೆದ 10 ದಿನದಿಂದಲೂ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಬಂದಿದೆ.







ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಜೂನ್ 5 2026 ಶುಕ್ರವಾರದಂದು, ಗ್ರಾಂ ಬೆಲೆಯಲ್ಲಿ 38 ರೂ ಕಡಿತವಾಗಿ, 15,573 ರೂ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ 380 ರೂ ಕಡಿತಗೊಂಡು, 1,55,730 ರೂಪಾಯಿ ದಾಖಲಾಗಿದೆ.






22 ಕ್ಯಾರೆಟ್ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆಯಾಗಿದೆ. 1 ಗ್ರಾಂ ಬೆಲೆಯಲ್ಲಿ 35 ರೂ ಇಳಿಕೆಯಾಗಿ, 14,275 ರೂ ಆಗಿದ್ದು 10 ಗ್ರಾಂ ಬೆಲೆಯಲ್ಲಿ 350 ರೂ ಇಳಿಕೆಯಾಗಿ 142750 ರೂಪಾಯಿಗೆ ತಲುಪಿದೆ.

ಬೆಳ್ಳಿ ಬೆಲೆ ಇಳಿಕೆ
ಬೆಳ್ಳಿ ಬೆಲೆ ಇಂದು 5 ಸಾವಿರ ರೂ ಇಳಿಕೆಯಾಗಿದೆ. ಗ್ರಾಂ ಬೆಲೆ 275 ರೂ ಆಗಿದ್ದು,, 2,75,000 ರೂ ದಾಖಲಾಗಿದೆ. ಬೆಳ್ಳಿ ಬೆಲೆ ಕಳೆದ 4 ದಿನಗಳಿಂದ ತಟಸ್ಥವಾಗಿತ್ತು.

error: Content is protected !!
Scroll to Top