“One Leader, One Nation”: ನಾಯಕತ್ವ ಕುರಿತ ಟ್ರಂಪ್ ಹೇಳಿಕೆಗೆ ತಿರುಗೇಟು ಕೊಟ್ಟ ಇರಾನ್!



(ನ್ಯೂಸ್‌ ಕಡಬ) newskadaba.com,  .24: ನಾಯಕ ಯಾರೆಂದು ನಿರ್ಧರಿಸಲು ಇರಾನ್ ಹೆಣಗಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಇದಕ್ಕೆ ಇರಾನ್ ನಾಯಕರು ತಿರುಗೇಟು ನೀಡಿದ್ದು, ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.







ತಮ್ಮ ರಾಷ್ಟ್ರ ಮತ್ತು ಅದರ ಸಂಸ್ಥೆಗಳಲ್ಲಿ ಏಕತೆ ಇದೆ ಎಂದು ಪ್ರತಿಪಾದಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರೆದಿರುವಂತೆಯೇ ಟ್ರಂಪ್ ಈ ರೀತಿಯ ಹೇಳಿಕೆ ನೀಡಿದ್ದರು. ಆದರೆ ಇರಾನ್ ಅಧಿಕಾರಿಗಳು ವಿಭಜನೆ ಮತ್ತು ಆಂತರಿಕ ಹೋರಾಟಗಳ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ.






ಇರಾನ್‌ಗೆ ಕಷ್ಟದ ಸಮಯ‘: ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಇರಾನ್ ತನ್ನ ನಾಯಕನನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಪ್ರತಿಸ್ಪರ್ಧಿಗಳ ನಡುವೆ ಆಂತರಿಕ ಒಳಜಗಳವನ್ನು ಎದುರಿಸಿದೆ ಎಂದು ಹೇಳಿದ್ದರು.

ತೈಲ ಮತ್ತು ಎಲ್ ಪಿಜಿಗಾಗಿ ಪ್ರಮುಖ ಜಾಗತಿಕ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆ ಎಂದು ಮತ್ತೆ ಹೇಳಿದ ಟ್ರಂಪ್, ಇರಾನ್ ಒಪ್ಪಂದಕ್ಕೆ ಬಗ್ಗುವವರೆಗೂ ದಿಗ್ಬಂಧನವನ್ನು ತೆಗೆದುಹಾಕಲಾಗುವುದಿಲ್ಲ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಟ್ರಂಪ್ ಹೇಳಿಕೆಯನ್ನು ಇರಾನ್ ನಾಯಕರು ತಳ್ಳಿಹಾಕಿದ್ದಾರೆ. ಸರ್ಕಾರದ ಎಲ್ಲಾ ಬ್ರಾಂಚ್ ಗಳಲ್ಲಿ ಏಕತೆಯಿದೆ ಎಂದು ಪ್ರತಿಪಾದಿಸಿದ್ದಾರೆ. ಒಂದೇ ದೇವರು, ಒಬ್ಬ ನಾಯಕ, ಒಂದು ರಾಷ್ಟ್ರ ಮತ್ತು ಒಂದೇ ಮಾರ್ಗ – ನಮ್ಮ ಪ್ರೀತಿಯ ಇರಾನ್‌ನ ವಿಜಯೋತ್ಸವದ ಹಾದಿ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿದ್ದಾರೆ.

ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಕೂಡಾ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದು, ಇರಾನ್ ನಲ್ಲಿ ಮತಾಂಧರು ಇಲ್ಲ ಎಂದಿದ್ದಾರೆ.

ಇರಾನ್‌ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ, ದೇಶದೊಳಗಿನ ವಿಭಜನೆ ಹೇಳಿಕೆ ತಳ್ಳಿಹಾಕಿದ್ದಾರೆ. ಇರಾನ್ ಮಿಲಿಟರಿ ಮತ್ತು ರಾಜತಾಂತ್ರಿಕ ರಂಗಗಳಲ್ಲಿ ಒಗ್ಗಟ್ಟಿನಿಂದ ಇರುವುದಾಗಿ ಹೇಳಿದ್ದಾರೆ.

error: Content is protected !!
Scroll to Top