(ನ್ಯೂಸ್ ಕಡಬ) newskadaba.com, ಎ.23: ಭಾರತದ ಬಂದರಿಗೆ ಬರುತ್ತಿದ್ದ ಹಡಗನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.
ಇಂದು ಒಟ್ಟು ಎರಡು ಹಡಗನ್ನು ಐಆರ್‌ಜಿಸಿ ವಶ ಪಡಿಸಿಕೊಂಡಿದೆ. ಈ ಹಡಗುಗಳು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿವೆ, ಅಗತ್ಯ ಅನುಮತಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಮತ್ತು ಸಂಚಾರಿ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿ ಕಡಲ ಭದ್ರತೆಗೆ ಅಪಾಯ ತಂದಿವೆ ಎಂದು ಐಆರ್‌ಜಿಸಿ ತಿಳಿಸಿದೆ.
ಎಪಾಮಿನೋಂಡಾಸ್ ಲೈಬೀರಿಯಾ ಧ್ವಜ ಹೊಂದಿರುವ ಈ ಕಂಟೇನರ್ ಹಡಗು ದುಬೈನ ಜೆಬೆಲ್ ಅಲಿಯಿಂದ ಗುಜರಾತ್‌ಗೆ ಬರುತ್ತಿತ್ತು. ಪನಾಮಾ ಧ್ವಜ ಹೊಂದಿದ್ದ ಎಂಎಸ್‌ಸಿ ಫ್ರಾನ್ಸೆಸ್ಕಾ ಹಡಗನ್ನು ಇಸ್ರೇಲ್‌ನೊಂದಿಗೆ ಸಂಬಂಧ ಹೊಂದಿದೆ ಎಂಬ ಕಾರಣ ನೀಡಿ ಐಆರ್‌ಜಿಸಿ ವಶ ಪಡಿಸಿಕೊಂಡಿದೆ.
ಐಆರ್‌ಜಿಸಿ ಪಡೆಗಳು ಮೊದಲು ಹಡಗುಗಳಿಗೆ ಎಚ್ಚರಿಕೆ ನೀಡಿ ನಂತರ ಗುಂಡಿನ ದಾಳಿ ನಡೆಸುವ ಮೂಲಕ ಅವುಗಳನ್ನು ಇರಾನ್ ಕರಾವಳಿಗೆ ಎಳೆದೊಯ್ದಿವೆ. ಈ ಘಟನೆಯಲ್ಲಿ ಮತ್ತೊಂದು ಹಡಗು ‘ಯುಫೋರಿಯಾ’ ಕೂಡ ದಾಳಿಗೆ ಒಳಗಾಗಿದೆ ಎಂದು ಹೇಳಲಾಗಿದೆ.








