(ನ್ಯೂಸ್ ಕಡಬ) newskadaba.com ಮಾ. 15. ಫಾಸ್ಟ್ಯಾಗ್ ವಾರ್ಷಿಕ ಪಾಸ್ ಬೆಲೆ ಶೇ.2.5ರಷ್ಟು ಹೆಚ್ಚಳವಾಗಿದ್ದು, ಪರಿಷ್ಕೃತ ದರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಖಾಸಗಿ ವಾಹನಗಳಿಗೆ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಬೆಲೆ ಏಪ್ರಿಲ್ 1ರಿಂದ ಶೇ. 2.5 ರಷ್ಟು ಹೆಚ್ಚಾಗಿ 3,075 ರೂ.ಗಳಿಗೆ ತಲುಪಲಿದೆ. ಪ್ರಸ್ತುತ, ವಾರ್ಷಿಕ ಪಾಸ್ನ ಬೆಲೆ 3,000 ರೂ.ಗಳಾಗಿದೆ. ಈ ಪಾಸ್ ಬಳಸಿದರೆ ಕಾರುಗಳು 200 ಟೋಲ್ ಪ್ಲಾಜಾಗಳನ್ನು ದಾಟುವವರೆಗೆ ಪ್ರತ್ಯೇಕವಾಗಿ ಟೋಲ್ ಪಾವತಿಸಬೇಕಿಲ್ಲ.
ಮಾಹಿತಿಯ ಪ್ರಕಾರ ದೇಶದಲ್ಲಿ ಈಗಾಗಲೇ 50 ಲಕ್ಷಕ್ಕೂ ಹೆಚ್ಚು ವಾಹನ ಮಾಲಕರು ವಾರ್ಷಿಕ ಪಾಸ್ ಬಳಸುತ್ತಿದ್ದಾರೆ. ಹೆದ್ದಾರಿಗಳಲ್ಲಿ ಸಂಚಾರ ಸುಗಮವಾಗಲು ಮತ್ತು ಟೋಲ್ ಪಾವತಿಯನ್ನು ವೇಗಗೊಳಿಸಲು ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳನ್ನು ಪ್ರತಿ ವರ್ಷವೂ ಪರಿಷ್ಕರಿಸಲಾಗುತ್ತದೆ. ಇದೇ ನಿಯಮದ ಪ್ರಕಾರ ಈ ಬಾರಿ ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರದಲ್ಲೂ ಹೆಚ್ಚಳ ಮಾಡಲಾಗಿದೆ .









