ದೇಶಾದ್ಯಂತ LPG ಕೊರತೆ ಹಿನ್ನೆಲೆ- ಸೀಮೆಎಣ್ಣೆ ಬಳಕೆಗೆ ಕೇಂದ್ರ ಗ್ರೀನ್ ಸಿಗ್ನಲ್



(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 14. ದೇಶಾದ್ಯಂತ ಎಲ್ ಪಿಜಿ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವನ್ನು ನಿವಾರಿಸಲು ಕೇಂದ್ರ ಸರಕಾರ ಹಲವು ತುರ್ತು ಕ್ರಮಗಳನ್ನು ಕೈಗೊಂಡಿದ್ದು, ಪ್ರಮುಖವಾಗಿ ಪಡಿತರ ವ್ಯವಸ್ಥೆಯ ಮೂಲಕ ನೀಡಲಾಗುವು ಸೀಮೆಎಣ್ಣೆ ಪ್ರಮಾಣವನ್ನು ಹೆಚ್ಚಿಸಲಾಗಿದೆ.





ಈ ಹಿನ್ನೆಲೆ ರಾಜ್ಯಗಳಿಗೆ ನೀಡಲಾಗುವ 1 ಲಕ್ಷ ಕಿಲೋ ಲೀಟರ್ ನಿಯಮಿತ ಕೋಟಾದ ಜೊತೆಗೆ, ಹೆಚ್ಚುವರಿಯಾಗಿ 48,000 ಕಿಲೋಲೀಟರ್ ಸೀಮೆಎಣ್ಣೆಯನ್ನು ಬಿಡುಗಡೆ ಮಾಡಲು ಕೇಂದ್ರ ಆದೇಶಿಸಿದೆ.






ಇದು ಪ್ರಾಥಮಿಕವಾಗಿ ಬಡ ಕುಟುಂಬಗಳಿಗೆ ಅಡುಗೆ ತಯಾರಿಸಲು ನೆರವಾಗಲಿದೆ. ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ಕಾಳಸಂತೆ ತಡೆಯಲು ಮತ್ತು ಸಮರ್ಪಕ ಹಂಚಿಕೆಗಾಗಿ ಬುಕ್ಕಿಂಗ್ ಅವಧಿಯನ್ನು ವಿಸ್ತರಿಸಲಾಗಿದೆ. ಈ ಮೊದಲು 25 ದಿನಕ್ಕೊಮ್ಮೆ ಸಿಲಿಂಡರ್ ಪಡೆಯಬಹುದಾಗಿತ್ತು. ಇದೀಗ ಬದಲಾದ ಹೊಸ ನಿಯಮದಂತೆ, ಗ್ರಾಮೀಣ ಗ್ರಾಹಕರು 45 ದಿನಗಳಿಗೊಮ್ಮೆ ಮಾತ್ರ ಸಿಲಿಂಡರ್ ಬುಕ್ ಮಾಡಲು ಅವಕಾಶ ನೀಡಲಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಬಳಕೆಯನ್ನು ಕಡಿಮೆ ಮಾಡಲು ಹೋಟೆಲ್‌ಗಳಿಗೆ ಪರ್ಯಾಯ ಇಂಧನ ಬಳಸಲು ಅನುಮತಿ ನೀಡಲಾಗಿದೆ. ಒಂದು ತಿಂಗಳ ಕಾಲ ಬಯೋಮಾಸ್, ಕಲ್ಲಿದ್ದಲು ಮತ್ತು ಆರ್‌ಡಿಎಫ್ ಪೆಲೆಟ್‌ಗಳನ್ನು ಬಳಸಲು ಪರಿಸರ ಸಂಸ್ಥೆಗಳು ಒಪ್ಪಿಗೆ ನೀಡಿವೆ.

 

error: Content is protected !!
Scroll to Top