(ನ್ಯೂಸ್ ಕಡಬ) newskadaba.com, ಫೆ.11: ವಿಮಾನವು ಮೊಗದಿಶುನಿಂದ ಗಾಲ್ಕಾಯೋ ನಗರಕ್ಕೆ ಹೊರಟಿತ್ತು. ಟೇಕ್ ಆಫ್ ಆದ ಸುಮಾರು 15 ನಿಮಿಷಗಳಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲಟ್ ತುರ್ತು ಲ್ಯಾಂಡಿಂಗ್ಗಾಗಿ ವಾಪಸ್ ಬಂದಿದ್ದರು. ರನ್ವೇ ಮೇಲೆ ಲ್ಯಾಂಡ್ ಆಗುವ ಸಮಯದಲ್ಲಿ ವಿಮಾನದ ವೇಗ ನಿಯಂತ್ರಿಸಲಾಗದೆ, ಅದು ರನ್ವೇಯಿಂದ ಜಾರಿ ಪಕ್ಕದಲ್ಲೇ ಇದ್ದ ಹಿಂದೂ ಮಹಾಸಾಗರದ ಬೀಚ್ಗೆ ನುಗ್ಗಿದೆ.
ವಿಮಾನವು ಸಮುದ್ರದ ಆಳವಿಲ್ಲದ ನೀರಿನ ಭಾಗಕ್ಕೆ ಬಿದ್ದರೂ, ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ 55 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನೀರಿನ ರಭಸಕ್ಕೆ ವಿಮಾನದ ಒಂದು ರೆಕ್ಕೆ ಮುರಿದು ಬಿದ್ದಿದ್ದು, ವಿಮಾನಕ್ಕೆ ತೀವ್ರ ಹಾನಿಯಾಗಿದೆ.
ವಿಮಾನ ಅಪ್ಪಳಿಸುವ ಮುನ್ನವೇ ಪೈಲಟ್ ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಿದ್ದರಿಂದ ದೊಡ್ಡ ಮಟ್ಟದ ಪ್ರಾಣಹಾನಿ ತಪ್ಪಿದೆ ಎಂದು ವಿಮಾನಯಾನ ಸಂಸ್ಥೆ ಶ್ಲಾಘಿಸಿದೆ..






