ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ



(ನ್ಯೂಸ್ಕಡಬ) newskadaba.com,.29   ನವದೆಹಲಿ: ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯ ನಾಗಲೋಟ ಮುಂದುವರೆದಿದ್ದು ಬುಧವಾರ ಚೆನ್ನೈ ಮತ್ತು ಹೈದರಾಬಾದ್‌ ಮಾರುಕಟ್ಟೆಯಲ್ಲಿ 1 ಕೇಜಿ ಬೆಳ್ಳಿ ಬೆಲೆಯು 4 ಲಕ್ಷ ರು.ಗೆ ತಲುಪಿದೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಬೆಳ್ಳಿ ದರ ಒಂದೇ ದಿನ 10,000 ರು. ಏರಿಕೆಯಾಗಿ 3.80 ಲಕ್ಷ ರು.ಗೆ ತಲುಪಿದೆ. ದೆಹಲಿಯಲ್ಲಿ ಕೂಡಾ 15,000 ರು. ಜಿಗಿದು 3.85 ಲಕ್ಷ ರು.ಗೆ ನೆಗೆದಿದೆ. ಇದು ಬೆಳ್ಳಿಯ ಸಾರ್ವಕಾಲಿಕ ಗರಿಷ್ಠ ದರವಾಗಿದೆ.





ಕಳೆದ ಮೇ ತಿಂಗಳ ಅಂತ್ಯದ ವೇಳೆಗೆ ಪ್ರತಿ ಕೆಜಿ ಬೆಳ್ಳಿ ಬೆಲೆ ಕೇವಲ 1 ಲಕ್ಷ ರು.ನಷ್ಟಿತ್ತು. ಅಂದರೆ ಕೇವಲ 8 ತಿಂಗಳ ಅವಧಿಯಲ್ಲಿ ಬೆಳ್ಳಿ ಬೆಲೆಯಲ್ಲಿ ಭಾರೀ ಎನ್ನಬಹುದಾದ 3 ಲಕ್ಷ ರು.ನಷ್ಟು ಏರಿಕೆ ದಾಖಲಾಗಿದೆ…ಬೆಂಗಳೂರಿನಲ್ಲಿ 22 ಕ್ಯಾರಟ್‌ ಚಿನ್ನವು 4700 ರು. ಏರಿಕೆಯಾಗಿ 1,53,150 ರು.ಗೆ ಹಾಗೂ 24 ಕ್ಯಾರಟ್‌ ಚಿನ್ನ 5130 ರು. ಜಗಿದು 1,67,080 ರು.ಗೆ ತಲುಪಿದೆ..






error: Content is protected !!
Scroll to Top