ನವೆಂಬರ್ 28ರಂದು, ಗೋವಾದಲ್ಲಿ ವಿಶ್ವದ ಅತ್ಯಂತ ಎತ್ತರದ ಶ್ರೀರಾಮಚಂದ್ರನ ಪ್ರತಿಮೆ ಅನಾವರಣ



(ನ್ಯೂಸ್‌ ಕಡಬ) newskadaba.com,  ನ.27 ಗೋವಾ: ಅಯೋಧ್ಯೆ ಶ್ರೀರಾಮ ಮಂದಿರದ ಸ್ವರ್ಣ ಶಿಖರದ ಮೇಲೆ ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ರಾಮಭಕ್ತರನ್ನು ಪುಳಕಿತಗೊಳಿಸಿದ ನಡುವೆ, ಗೋವಾ ಕೂಡ ರಾಮಭಕ್ತಿಯ ವೈಭವಕ್ಕೆ ಸಜ್ಜಾಗಿದೆ..







ಈ ಪ್ರತಿಮೆ ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪಾರ್ಥಗಲಿ ಜೀವೋತ್ತಮ ಮಠದಲ್ಲಿ ಸ್ಥಾಪಿಸಲಾಗಿದ್ದು, ಮಠದ 550ನೇ ಸಂಸ್ಥಾಪನಾ ವಾರ್ಷಿಕೋತ್ಸವದ 11 ದಿನಗಳ ಆಚರಣೆಯ ಭಾಗವಾಗಿ ಪ್ರಧಾನಿ ಉದ್ಘಾಟಿಸಲಿದ್ದಾರೆ. ಮಠದ 550 ವರ್ಷಗಳ ಸಂಪ್ರದಾಯವನ್ನು ಗುರುತಿಸಲು ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.






ಇದೇ ರೀತಿ, ಋಷಿ ವಿಶ್ವಾಮಿತ್ರರ ವಂಶಸ್ಥರು ಗೋವಾದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕೌಶಿಕ ಗೋತ್ರಕ್ಕೆ ಸೇರಿದ ಕುಶಸ್ಥಲಿ ಮತ್ತು ಕೆಲೋಶಿ ಗ್ರಾಮಗಳಲ್ಲಿ ನೆಲೆಸಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಕೊಂಕಣ ಮರಾಠರ ಗುರುತಿನೊಂದಿಗೆ ಇವರ ವೈಭವವು ಗೋವಾದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತದೆ.

 

 

error: Content is protected !!
Scroll to Top