ಡಿಜಿಟಲ್ ಗೋಲ್ಡ್ನಲ್ಲಿ ಹೂಡಿಕೆ ಅಪಾಯಕಾರಿ- ಸೆಬಿ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,  ನ.11, ಮಾರುಕಟ್ಟೆ ನಿಯಂತ್ರಕ ಸೆಬಿ ಇತ್ತೀಚೆಗೆ ಹೊರಡಿಸಿದ ಪ್ರಕಟಣೆಯಲ್ಲಿ, ಡಿಜಿಟಲ್‌ ಗೋಲ್ಡ್‌ನಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಎಂದು ಜನರಿಗೆ ಎಚ್ಚರಿಕೆ ಕೊಟ್ಟಿದೆ. ಡಿಜಿಟಲ್‌ ಗೋಲ್ಡ್‌ ಪ್ರಾಡಕ್ಟ್‌ ಗಳು ಸೆಬಿಯ (SEBI) ನಿಯಂತ್ರಣದಲ್ಲಿ ಇರುವುದಿಲ್ಲ. ಅವುಗಳನ್ನು ಕಮಾಡಿಟಿ ಡಿರೈವಟೀಸ್‌ ಎಂದು ಸೆಬಿ ನಿಯಂತ್ರಿಸುತ್ತಿಲ್ಲ. ಆದ್ದರಿಂದ ಹೂಡಿಕೆದಾರರು ಇದರಲ್ಲಿ ವಂಚನೆಗೆ ಗುರಿಯಾಗುವ ಅಪಾಯ ಇದೆ ಎಂದು ಸೆಬಿ ಎಚ್ಚರಿಸಿದೆ.

ಸೆಬಿಯ ನಿಯಂತ್ರಣದಲ್ಲಿ ಇಲ್ಲ ಎಂದರೆ ಅರ್ಥವೇನು?

ಅಂದರೆ ಡಿಜಿಟಲ್‌ ಗೋಲ್ಡ್‌ ಮೇಲೆ ಸೆಬಿ ಯಾವುದೇ ನಿಗಾ ವಹಿಸುವುದಿಲ್ಲ. ಆದ್ದರಿಂದ ಅಲ್ಲಿ ಏನಾದರೂ ವಂಚನೆ ಆದರೆ ಸೆಬಿಯ ಬಳಿ ಬಂದು ಕೇಳಿದರೆ, ಅದು ತನ್ನ ವ್ಯಾಪ್ತಿಯಲ್ಲಿ ಇಲ್ಲ ಎಂದು ಹೇಳಲಿದೆ. ಆ ಅಪಾಯ ಇದ್ದೇ ಇರುತ್ತದೆ. ಹಾಗಾದ್ರೆ ಏನಿದು ಡಿಜಿಟಲ್‌ ಗೋಲ್ಡ್?‌ ಇದು ಫಿನ್‌ ಟೆಕ್‌ ಪ್ರಾಡಕ್ಟ್‌ ಆಗಿದ್ದು, ಮೊಬೈಲ್‌ ನಲ್ಲಿ ಸುಲಭವಾಗಿ ಯುಪಿಐ ಮೂಲಕ ಖರೀದಿಸಬಹುದು. ಪೇಟಿಎಂ, ಗೂಗಲ್‌ ಪೇ, ಫೋನ್‌ ಪೇ ಮೂಲಕ ಸುಲಭವಾಗಿ ಖರೀದಿಸಬಹುದು. ಯುಪಿಐನ ವ್ಯಾಲೆಟ್‌ಗಳಲ್ಲಿ ಡಿಜಿಟಲ್‌ ಗೋಲ್ಡ್‌ ಇಡಲಾಗುತ್ತದೆ. ಯಾವಾಗ ಏಕಾದರೂ ಅದನ್ನು ಮಾರಬಹುದು ಅಥವಾ ಭೌತಿಕ ಚಿನ್ನವನ್ನು ಬಳಿಕ ತರಿಸಿಕೊಳ್ಳಬಹುದು. ಇದು ಅನುಕೂಲಕರ ಎಂದು ಅನ್ನಿಸಬಹುದು. 2024ರಲ್ಲಿ ಜನರು 13,888 ಕೋಟಿ ರುಪಾಯಿಗಳನ್ನು ಡಿಜಿಟಲ್‌ ಗೋಲ್ಡ್‌ ನಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಹೆಚ್ಚುತ್ತಿದೆ. ಆದರೆ ಸೆಬಿಯ ಈ ಎಚ್ಚರಿಕೆಯನ್ನು ಗಮನಿಸಬೇಕು.

ಹೀಗಿದ್ದರೂ ಗೋಲ್ಡ್‌ ಇಟಿಎಫ್‌ಗಳು ಹೂಡಿಕೆಗೆ ಉತ್ತಮ. ಏಕೆಂದರೆ ಇವುಗಳು ಸೆಬಿಯ ನಿಯಂತ್ರಣದಲ್ಲಿ ಇರುತ್ತವೆ. ಗೋಲ್ಡ್‌ ಇಟಿಎಫ್‌ಗಳು ಎನ್‌ ಎಸ್‌ ಇ ಮತ್ತು ಬಿಎಎಸ್‌ ಇ ಸ್ಟಾಕ್‌ ಎಕ್ಸ್‌ ಚೇಂಜ್‌ ಮೂಲಕ ನಡೆಯುತ್ತವೆ. ಅದು ಸೇಫ್.‌ ಇಟಿಎಫ್‌ಗಳನ್ನುಅಸೆಟ್‌ ಮ್ಯಾನೇಜ್‌ ಮೆಂಟ್‌ ಕಂಪನಿಗಳು ನಡೆಸುತ್ತವೆ. ಹಲವಾರು ಮ್ಯೂಚುವಲ್‌ ಫಂಡ್‌ ಕಂಪನಿಗಳೂ ಗೋಲ್ಡ್‌ ಇಟಿಎಫ್‌ ಗಳನ್ನು ನೀಡುತ್ತವೆ.

Scroll to Top