ಗೂಗಲ್‌ನಲ್ಲಿ ಭಾರತದ ಮೊದಲ ಪ್ರಧಾನಿಯಾಗಿ ನರೇಂದ್ರ ಮೋದಿಯ ಫೋಟೋ ► ಹೊಸತೊಂದು ಪ್ರಮಾದ ಕಂಡುಹಿಡಿದ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ

(ನ್ಯೂಸ್ ಕಡಬ) newskadaba.com ನವದೆಹಲಿ, ಎ.27. ಭಾರತದ ಮೊದಲ ಪ್ರಧಾನಿ ಎಂದು ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ ಜವಾಹರಲಾಲ್‌ ನೆಹರೂ ಬದಲು ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಕಂಡು ಬಂದಿದ್ದು, ಗೂಗಲ್‌ನ ಹೊಸ ಪ್ರಮಾದವೊಂದನ್ನು ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಕಂಡು ಹಿಡಿದಿದ್ದಾರೆ.

ಗೂಗಲ್‌ ಸರ್ಚ್‌ ಇಂಜಿನ್‌‌ನಲ್ಲಿ ‘India first pm’ ಎಂದು ಟೈಪ್‌ ಮಾಡಿದಾಗ ಜವಾಹರಲಾಲ್‌ ನೆಹರೂ ಅವರ ಹೆಸರು ಲಿಂಕ್‌ ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಕಾಣಿಸಿಕೊಂಡಿದೆ. ಈ ಫೋಟೋವನ್ನು ಗೂಗಲ್ ಮತ್ತು ಗೂಗಲ್ ಇಂಡಿಯಾ ಜತೆ ಟ್ಯಾಗ್ ಮಾಡಿರುವ ರಮ್ಯಾ, ನಿಮ್ಮ ಸಂಗ್ರಹದಲ್ಲಿ ಬರೀ ಕಸ ತುಂಬಿದೆ. ಈ ಕೂಡಲೇ ಇದನ್ನು ಸರಿಪಡಿಸಿ ಎಂದು ಟ್ವೀಟ್‌ ಮಾಡಿದ್ದಾರೆ.

Also Read  ಲೈಂಗಿಕ ದೌರ್ಜನ್ಯದ ಅಪರಾಧಿಗಳಿಗೆ 5 ವರ್ಷ ನಿಷೇಧ- ದಕ್ಷಿಣ ಭಾರತೀಯ ಕಲಾವಿದರ ಸಂಘ

error: Content is protected !!
Scroll to Top