ಸರ್ದಾರ್ ಪಟೇಲ್ 150ನೇ ಜಯಂತಿ- ವಿವಿಧ ಕಾರ್ಯಕ್ರಮಗಳು



(ನ್ಯೂಸ್ಕಡಬ) newskadaba.com  ಅ. 14. ಸರ್ದಾರ್ ವಲ್ಲಭಾಯ್ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸಂಭ್ರಮದ ಭಾಗವಾಗಿ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮೇರಾ ಯುವ ಭಾರತ್ (MY Bharat) ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಭಾರತದ ರಾಜಕೀಯ ಏಕೀಕರಣದ ಮೂಲಕ ಏಕೀಕೃತ ಭಾರತವನ್ನು ನಿರ್ಮಿಸುವಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಪಾತ್ರವನ್ನು ಯುವಜನರಿಗೆ ತಿಳಿಯಪಡಿಸುವುದು ಮತ್ತು ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ಕಾಪಾಡುವಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಖಚಿತಪಡಿಸುವುದು ಈ ಕಾರ್ಯಕ್ರಮಗಳ ಉದ್ದೇಶವಾಗಿದೆ.







ಪ್ರಮುಖ ಕಾರ್ಯಕ್ರಮಗಳು
ಐಕ್ಯತಾ ಮಾರ್ಚ್: ಅಕ್ಟೋಬರ್ 31 ರಿಂದ ನವೆಂಬರ್ 16 ರವರೆಗೆ ಎಲ್ಲ ಜಿಲ್ಲೆಗಳಲ್ಲಿ “ಏಕ ಭಾರತ, ಶ್ರೇಷ್ಠ ಭಾರತ” ಎಂಬ ಸಂದೇಶದೊಂದಿಗೆ ಪಾದಯಾತ್ರೆಗಳನ್ನು ಆಯೋಜಿಸಲಾಗುತ್ತದೆ. ಸರ್ದಾರ್ ಪಟೇಲ್ ಅವರ ಚಿಂತನೆಗಳನ್ನು ಯುವ ಮನಸ್ಸುಗಳಿಗೆ ತಲುಪಿಸುವುದು ಈ ಪಾದಯಾತ್ರೆಗಳ ಗುರಿಯಾಗಿದೆ.
ಡಿಜಿಟಲ್ ಚಟುವಟಿಕೆಗಳು: ಸಾಮಾಜಿಕ ಮಾಧ್ಯಮ ರೀಲ್ ಸ್ಪರ್ಧೆಗಳು, ಪ್ರಬಂಧ ರಚನೆ ಸರ್ದಾರ್ @ 150 ಯಂಗ್ ಲೀಡರ್ಸ್ ಕ್ವಿಜ್






ರಾಷ್ಟ್ರೀಯ ಪಾದಯಾತ್ರೆ: ನವೆಂಬರ್ 26 (ಸಂವಿಧಾನ ದಿನ) ರಿಂದ ಡಿಸೆಂಬರ್ 6 ರವರೆಗೆ, ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಜನ್ಮಸ್ಥಳವಾದ ಕರಂಸದ್‍ ನಿಂದ ಆರಂಭವಾಗಿ ಕೆವಾಡಿಯಾದ ಏಕತಾ ಪ್ರತಿಮೆಯಲ್ಲಿ ಕೊನೆಗೊಳ್ಳುವುದು.

ಹೆಚ್ಚಿನ ಮಾಹಿತಿಗೆ ಅಥವಾ ನೋಂದಣಿಗೆ https://mybharat.gov.in/pages/unity_march ಎಂಬ ಮೈ ಭಾರತ್ ಪೋರ್ಟಲ್ ವೀಕ್ಷಿಸಬಹುದು ಎಂದು ಮೈ ಭಾರತ್ ಯುವ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top