ಈ ದೀಪಾವಳಿಗೆ ದೇಶದ ಜನತೆಗೆ ದೊಡ್ಡ ಗಿಫ್ಟ್‌ ನೀಡುತ್ತೇವೆ: ಪ್ರಧಾನಿ ಮೋದಿ

(ನ್ಯೂಸ್‌ ಕಡಬ) newskadaba.com, ಆ.15: ದೀಪಾವಳಿಗೆ ದೇಶದ ಜನತೆಗೆ ದೊಡ್ಡ ಉಡುಗೊರೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ.

79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ವರ್ಷ ಜಿಎಸ್ಟಿ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ತಿಳಿಸಿದರು.

ದೀಪಾವಳಿಯ ವೇಳೆಗೆ ಸಾಮಾನ್ಯ ಜನರಿಗೆ ಜೀವನವನ್ನು ಸುಲಭಗೊಳಿಸುವ ಹಾಗೂ ನಮ್ಮ ಆರ್ಥಿಕತೆಯನ್ನು ಬಲಪಡಿಸುವ ಹೊಸ ಸರಳೀಕೃತ ಜಿಎಸ್ಟಿ ರಚನೆಯನ್ನು ನೀವು ಕಾಣುತ್ತೀರಿ. ಬದಲಾವಣೆಗಳು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

ಕಳೆದ 8 ವರ್ಷಗಳಲ್ಲಿ ನಾವು ಜಿಎಸ್ಟಿ ಮೂಲಕ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿದ್ದೇವೆ. ಎಂಟು ವರ್ಷಗಳ ಬಳಿಕ, ನಾವು ಅದನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಅದನ್ನು ನಾವು ಪರಿಶೀಲಿಸಿದ್ದೇವೆ. ರಾಜ್ಯಗಳೊಂದಿಗೆ ಮಾತನಾಡಿದ್ದೇವೆ ಎಂದು ಹೇಳಿದ್ದಾರೆ.

Scroll to Top