ರೈತರಿಗೆ ಪಶುಪಾಲನಾ ಚಟುವಟಿಕೆಗಳ ತರಬೇತಿ

(ನ್ಯೂಸ್ ಕಡಬ) newskadaba.com ಜು. 04. ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಚಟುವಟಿಕೆಗಳ ಬಗ್ಗೆ ವಿವಿಧ ತರಬೇತಿಯನ್ನು ಕೊಡಿಯಾಲ್‍ ಬೈಲ್ ಜೈಲ್ ರಸ್ತೆಯಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ರೈತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜುಲೈ 15 ರಿಂದ ಜುಲೈ 16 ರವರೆಗೆ, ಹಂದಿ ಸಾಕಾಣಿಕೆ ತರಬೇತಿ ಜುಲೈ 22 ರಿಂದ ಜುಲೈ 23 ರ ವರೆಗೆ ನಡೆಯಲಿದೆ. ಆಸಕ್ತ ರೈತ ಬಾಂಧವರು ತಮ್ಮ ತಾಲೂಕಿನ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಾವಣೆ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಮಂಗಳೂರು ತಾಲೂಕು – 9243306956/ 0824-2950369, ಉಳ್ಳಾಲ ತಾಲೂಕು – 9880424077, ಮುಲ್ಕಿ ತಾಲೂಕು – 8971024282, ಮೂಡಬಿದ್ರೆ ತಾಲೂಕು – 7204271943, ಬಂಟ್ವಾಳ ತಾಲೂಕು – 9481445365, ಬೆಳ್ತಂಗಡಿ ತಾಲೂಕು – 9481963820, ಪುತ್ತೂರು ತಾಲೂಕು – 94839 20208, ಕಡಬ ತಾಲೂಕು – 9483922594, ಸುಳ್ಯ ತಾಲೂಕು – 9844995078 ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top