(ನ್ಯೂಸ್ ಕಡಬ) newskadaba.com ಮಂಗಳೂರು, ಜು. 03. ಇಂದಿನಿಂದ ಮಂಗಳೂರು ವಿಭಾಗದ ಎರಡನೇ ಘಟಕದಿಂದ ಮಂಗಳೂರು- ಧರ್ಮಸ್ಥಳ ಮಾರ್ಗವಾಗಿ ಕೆಎಸ್ಸಾರ್ಟಿಸಿಯ ರಾಜಹಂಸ ಬಸ್ ಸಾರಿಗೆಯನ್ನು ಪರಿಚಯಿಸಲಾಗುತ್ತಿದೆ.
ಈ ಬಸ್ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬೆಳಗ್ಗೆ 6.30, 7, 8.30, 9 11.15 ಗಂಟೆಗೆ ಮಧ್ಯಾಹ್ನ 12.15, 2.30, 3.30, 5.30, 6.30ಕ್ಕೆ ಸಂಚರಿಸಲಿದೆ. ಅದೇರೀತಿ ಧರ್ಮಸ್ಥಳದಿಂದ ಮಂಗಳೂರಿಗೆ ಬೆಳಗ್ಗೆ 6.30, 7, 9, 9.15, 11.30 ಮತ್ತು ಮಧ್ಯಾಹ್ನ 12 ಗಂಟೆ, 2.45 ಗಂಟೆ, 3.30 ಗಂಟೆ, 4.30 ಮತ್ತು 5.30ಕ್ಕೆ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅಲ್ಲದೇ ಈ ಬಸ್ ಗಳು ಬಿಸಿ ರೊಡ್,ಬಂಟ್ವಾಳ, ಕಾರಿಂಜ ಕ್ರಾಸ್, ಪೂಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಮಾರ್ಗವಾಗಿ ಸಂಚರಿಸಲಿದೆ.









