ಭೂತ ಬಿಡಿಸುವ ನೆಪದಲ್ಲಿ ಗರ್ಭಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ..!



(ನ್ಯೂಸ್ ಕಡಬ) newskadaba.com ಜು. 02. ಭೂತ ಬಿಡಿಸುವ ನೆಪದಲ್ಲಿ 4 ತಿಂಗಳ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬಿಹಾರದ ಮುಜಾಫರ್​ ಪುರದಲ್ಲಿ ನಡೆದಿದೆ.





 

ವರದಿಯ ಪ್ರಕಾರ, ಗರ್ಭಿಣಿಯಾದಾಗಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಯುವತಿಯನ್ನು ಆಕೆಯ ಮಾವ ಶಿವೈಪಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮಧೇರಾ ಗ್ರಾಮದಲ್ಲಿರುವ ಮಾಂತ್ರಿಕನ ಬಳಿಗೆ ಭೂತ ಬಿಡಿಸಲು ಕರೆದೊಯ್ದಿದ್ದರು. ಆ ಮಾಂತ್ರಿಕ ಆಕೆಯ ಕುಟುಂಬಸ್ತರನ್ನು ಹೊರಗಡೆ ಕೂರುವಂತೆ ಸೂಚಿಸಿ ಆಕೆಯನ್ನು ಒಳಗೆ ಕರೆದುಕೊಂಡು ಹೋಗಿ ಸಹಚರರೊಂದಿಗೆ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.






 

ಮಹಿಳೆ ಭಯದಿಂದ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ಮತ್ತೊಮ್ಮೆ ಕೂಡ ಹೀಗೆ ಮಾಡಿದ್ದ, ಮೂರನೇ ಬಾರಿಗೆ ಕರೆದೊಯ್ದಾಗಲೂ ಆರೋಪಿ ಇದೇ ಕೆಲಸವನ್ನು ಮತ್ತೆ ಮಾಡಿದಾಗ ಆಕೆ ಸುಮ್ಮನಿರಲಾರದೆ ಕುಟುಂಬದವರ ಬಳಿ ಹೇಳಿಕೊಂಡಿದ್ದಾಳೆ. ಈ ಕುರಿತು ಶಿವಾಯಿಪಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

error: Content is protected !!
Scroll to Top