(ನ್ಯೂಸ್ ಕಡಬ) newskadaba.com ಬಿಳಿನೆಲೆ, ಜು. 02. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ಒಕ್ಕೂಟದ ಮಾಸಿಕ ಸಭೆಯು ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನ ಸಭಾ ಭವನದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು, ಬಿಳಿನೆಲೆ ವಲಯದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆಯವರು ಸಭೆಯಲ್ಲಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಸದಸ್ಶರುಗಳು ತಾವು ಪಡೆದಿರುವ ಪ್ರಗತಿನಿಧಿ ಸಾಲಕ್ಕೆ ಬದ್ರತೆಗಾಗಿ ಪ್ರಗತಿ ರಕ್ಷಾ ಕವಚ ವಿಮೆಯನ್ನು ಮಾಡಿಸುತ್ತಿದ್ದು, 2025-26ನೇ ಸಾಲಿನ ಪ್ರಗತಿರಕ್ಷಾ ಕವಚದ ಪಾಲುದಾರರಾದ ಸಾಲದ ವಿನಿಯೋಗದಾರರ ಬದಲಾವಣೆಗೆ ಪ್ರಸ್ತುತ ತಿಂಗಳು ಅವಕಾಶವಿದ್ದು ಅಗತ್ಯವಿದ್ದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬಹುದು.
ಪ್ರಗತಿಬಂಧು ಸಂಘಗಳನ್ನು ಸ್ವ-ಸಹಾಯ ಸಂಘಗಳಾಗಿ ಪರಿವರ್ತಿಸಲು ಪ್ರಸ್ತುತ ಬ್ಶಾಂಕ್ ಆದೇಶದಂತೆ ಸಂಘಗಳಿಗೆ ಕನಿಷ್ಟ ಹತ್ತು ಸದಸ್ಶರುಗಳ ಅವಶ್ಶಕತೆ ಇದ್ದು ಒಕ್ಕೂಟದ ಪಧಾದಿಕಾರಿಗಳು ಯೋಜನೆ ಕಾರ್ಯಕ್ರಮಗಳನ್ನು ಸಮುದಾಯಕ್ಕೆ ತಲುಪಿಸುವಲ್ಲಿ ಯೋಜನಾ ಸಿಬ್ಬಂದಿಗಳಿಗೆ ಸಹಕಾರ ನೀಡಿ ತಿಂಗಳೊಳಗಾಗಿ ಹೊಸ ಸದಸ್ಶರುಗಳ ಸೇರ್ಪಡೆ ಅಥವಾ ಸ್ಥಳೀಯ ಸಂಘದೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಒಕ್ಕೂಟದ ತಿಂಗಳ ಸಭೆಯನ್ನು ಮುಂದಿನ ಅವಧಿಯಲ್ಲಿ ಮೂರು ತಿಂಗಳಿಗೊಮ್ಮೆ ನಡೆಸಲು ವಲಯ ಒಕ್ಕೂಟದ ಅಧ್ಯಕ್ಷರುಗಳ ಸಭೆಯಲ್ಲಿ ತಿರ್ಮಾನಿಸಲಾಗಿದ್ದು, ಸಂಘದ ಮೂರು ಜನ ಪ್ರತಿನಿಧಿಗಳು ಮೂರು ತಿಂಗಳ ಸಭೆಗೆ ಹಾಗೂ ವಾರ್ಷಿಕ ಒಂದು ಬಾರಿ ಸರ್ವ ಸದಸ್ಶರ ಸಭೆ ನಡೆಸಲು ಅವಕಾಶ ಇದ್ದು ಈ ಸಭೆಯಲ್ಲಿ ಸಂಘದ ಎಲ್ಲಾ ಸದಸ್ಯರುಗಳೂ ಭಾಗವಹಿಸಿ ಮಾಹಿತಿ ಪಡೆದುಕೊಳ್ಳುವುದು. ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಡೆಸಿ ಒಕ್ಕೂಟದಲ್ಲಿ ಸಾಧಕರನ್ನು ಗುರುತಿಸಿ ಪುರಸ್ಕರಿಸುವ ಕೆಲಸವಾಗಬೇಕು ಎಂದರು.
ಸಭೆಯ ಅಧ್ಶಕ್ಷತೆಯನ್ನು ಒಕ್ಕೂಟದ ಅಧ್ಶಕ್ಷರಾದ ರಾಜೇಶ್ ಒಗ್ಗು ವಹಿಸದ್ದರು. ಸಭೆಯಲ್ಲಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸತೀಶ್ ಆಜನ ಉಪಸ್ಥಿತರಿದ್ದು ಮಾಹಿತಿ ನೀಡಿದರು. ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿˌ ಕಾರ್ಯದರ್ಶಿ ಶ್ರೀಮತಿ ಸ್ಮಿತಾ, ಜೊತೆಕಾರ್ಯದರ್ಶಿ ಲಕ್ಷ್ಮಣ ಎಸ್, ಕೋಶಾಧಿಕಾರಿ ಲಕ್ಷ್ಮಣ ಬೈಲು ಉಪಸ್ಥಿತರಿದ್ದರು.
ಸಭೆಯಲ್ಲಿ ದುರ್ಗಾಂಬಿಕಾ ಜವಾಭ್ಧಾರಿ ಸಂಘದ ಸದಸ್ಶೆ ಗಿರಿಜಾರವರು ಸ್ವಾಗತಿಸಿ, ಶ್ರೀಮತಿ ಸುಜಾತ ಕುಂದರ್ ವಂದಿಸಿದರು. ಒಕ್ಕೂಟದ ಸಭೆಯಲ್ಲಿ ಸಂಘದ ಪ್ರಭಂಧಕˌ ಸಂಯೋಜಕ ಹಾಗೂ ಕೋಶಾಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ಪಡೆದುಕೊಂಡರು.









