ವಿಮಾನ ಅಪಘಾತದ ನಂತರ ಪಾರ್ಟಿ ಮಾಡಿದ ಏರ್ ಇಂಡಿಯಾ ಸಿಬ್ಬಂದಿ ವಜಾ !



(ನ್ಯೂಸ್‌ ಕಡಬ) newskadaba.com ಜೂ.28: ಇತ್ತಿಚೇಗೆ ನಡೆದ ಏರ್ ಇಂಡಿಯಾದ ವಿಮಾನ ಪತನ ಈ ಸುದ್ದಿಗೆ ಜಗತ್ತಿನ ಅನೇಕ ರಾಷ್ಟ್ರಗಳು ಸಂತಾಪ ಹಾಗೂ ದುಃಖವನ್ನು ವ್ಯಕ್ತಪಡಿಸಿತ್ತು. ಭಾರತಕ್ಕೆ ಇದೊಂದು ಕರಾಳ ದಿನ ಕೂಡ ಹೌದು, 259 ಜನರನ್ನು ಈ ವಿಮಾನ ಬಲಿ ತೆಗೆದುಕೊಂಡಿತ್ತು.







ಆದರೆ ಈ ಘಟನೆ ನಡೆದು ಇನ್ನು ಒಂದು ತಿಂಗಳು ಕಳೆದಿಲ್ಲ. ದುಃಖದಿಂದ ಹಾಗೂ ನೆನಪಿನಿಂದ ಯಾರು ಹೊರಬಂದಿಲ್ಲ. ಈ ಸಮಯದಲ್ಲಿ ಏರ್ ಇಂಡಿಯಾದ ವಿಮಾನ ನಿಲ್ದಾಣ ಸಿಬ್ಬಂದಿಗಳು ಪಾರ್ಟಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್​ ಆಗಿದೆ.






ಈ ವಿಡಿಯೋಗೆ ಸಂಬಂಧಿಸಿದಂತೆ ಏರ್ ಇಂಡಿಯಾದ ವಿಮಾನ ನಿಲ್ದಾಣದ ಗೇಟ್‌ವೇ ಸೇವಾ ಪೂರೈಕೆದಾರ AISATSನ ನಾಲ್ವರು ಹಿರಿಯ ಉದ್ಯೋಗಿಗಳನ್ನು ವಜಾ ಮಾಡುವಂತೆ ಆದೇಶ ನೀಡಲಾಗಿದೆ. ನೌಕರರು ಕೆಲಸದ ಸ್ಥಳದಲ್ಲಿ ಪಾರ್ಟಿ ಮಾಡುತ್ತಿರುವ ವಿಡಿಯೋಗೆ ಸಾರ್ವಜನಿಕ ವಲಯದಿಂದ ಭಾರೀ ಅಕ್ರೋಶ ವ್ಯಕ್ತವಾಗಿತ್ತು. ಈ ಕಾರಣದಿಂದ, ಈ ಪಾರ್ಟಿಯಲ್ಲಿ ಭಾಗಿವಹಿಸಿದ ನಾಲ್ವರು ಹಿರಿಯ ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ.

ಅಹಮದಾಬಾದ್‌ನಲ್ಲಿ 259 ಜನರನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಅಪಘಾತದ ಕೆಲವೇ ದಿನಗಳ ನಂತರ ಗುರುಗ್ರಾಮ್‌ನ AISATS ಕಚೇರಿಯಲ್ಲಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. AI 171 ವಿಮಾನದ ದುರಂತದಿಂದ ಬಾಧಿತರಾದ ಕುಟುಂಬಗಳೊಂದಿಗೆ ಕಂಪನಿಯು ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು AISATS ವಕ್ತಾರರು ತಿಳಿಸಿದ್ದರು.

ಆದರೆ ಈ ವಿಡಿಯೋ ನೋಡಿದ ನಂತರ ಅನೇಕರು ಏರ್​​ ಇಂಡಿಯಾದ ವಿರೋಧ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಸಂಭ್ರಮಿಸುವ ಕ್ಷಣ ಅಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. AI 171 ರ ದುರಂತ ನಷ್ಟದಿಂದ ಬಾಧಿತರಾದ ಕುಟುಂಬಗಳೊಂದಿಗೆ AISATS ಒಗ್ಗಟ್ಟಿನಿಂದ ನಿಲ್ಲುತ್ತೇವೆ ಮತ್ತು ಈ ವಿಡಿಯೋದ ಬಗ್ಗೆ ನಾವು ಬೇಸರ ವ್ಯಕ್ತಪಡಿಸುತ್ತೇವೆ ಎಂದು AISATS ವಕ್ತಾರರು ಹೇಳಿದ್ದಾರೆ.

error: Content is protected !!
Scroll to Top