(ನ್ಯೂಸ್ ಕಡಬ) newskadaba.com ಜೂ. 27. ಭದ್ರತಾ ಮಾಹಿತಿಯನ್ನು ಪಾಕಿಸ್ತಾನಕ್ಕೆ ತಲುಪಿಸುತ್ತಿದ್ದ ಭಾರತೀಯ ನೌಕಾಪಡೆ ಸಿಬಂದಿಯೊಬ್ಬನನ್ನು ಬಂಧಿಸಿರುವ ಕುರಿತು ವರದಿಯಾಗಿದೆ.
ಬಂಧಿತನನ್ನು ನೌಕಾಪಡೆಯ ಗುಮಾಸ್ತನಾದ ವಿಶಾಲ್ ಯಾದವ್ ಎಂದು ಗುರುತಿಸಲಾಗಿದೆ.
ಈತ ಭಾರತೀಯ ಮಹಿಳೆಯ ಸೋಗಿನಲ್ಲಿದ್ದ ಪಾಕಿಸ್ತಾನಿ ವ್ಯಕ್ತಿಯಿಂದ ಆಪರೇಷನ್ ಸಿಂಧೂರ ಮಾಹಿತಿಗೆ 50,000 ರೂ. ಸೇರಿದಂತೆ, ವಿವಿಧ ಭದ್ರತಾ ಗುಟ್ಟುಗಳನ್ನು ಬಿಟ್ಟುಕೊಟ್ಟದ್ದಕ್ಕಾಗಿ ಈವರೆಗೆ 2 ಲಕ್ಷ ರೂ. ಹಣವನ್ನು ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.









