ಜುಲೈ 1 ರಿಂದ ಮನೆ ಮನೆಗೆ ಇ-ಖಾತ- ಡಿಕೆಶಿ



(ನ್ಯೂಸ್ ಕಡಬ) newsksdaba.com ಮಂಗಳೂರು, ಜೂ. 19.  ರಾಜ್ಯ ಸರ್ಕಾರ ಮೊದಲೇ ಭರವಸೆ ನೀಡಿದಂತೆ ಇನ್ನುಮುಂದೆ ಆಸ್ತಿ ಮಾಲೀಕರಿಗೆ ಮನೆ ಬಾಗಿಲಿಗೆ ಈ ಖಾತೆಗಳನ್ನು ತಲುಪಿಸಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.







ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ-ಖಾತಾ ವಿತರಣೆ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 1 ರಿಂದ 25,000 ಇ-ಖಾತಾಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸಲಾಗುವುದು ಎಂದು ಹೇಳಿದರು.






ನಗರದಲ್ಲಿ ಆಸ್ತಿಗಳ ಇ – ಖಾತಾ ದಾಖಲೆ ವಿತರಣೆ ಆಂದೋಲನ ನಡೆಸಲಾಗುವುದು. ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿದ್ದು, ಈ ಪೈಕಿ 5 ಲಕ್ಷ ಆಸ್ತಿಗಳ ಮಾಲೀಕರಷ್ಟೇ ಅಂತಿಮ ಇ-ಖಾತಾಗೆ ಅರ್ಜಿ ಸಲ್ಲಿಸಿದ್ದಾರೆ. ಆಸ್ತಿ ಮಾಲೀಕರು ಜಾಗೃತರಾಗಿ ದಾಖಲೆಗಳನ್ನು ಒದಗಿಸಿ ಇ-ಖಾತಾ ಪಡೆದುಕೊಳ್ಳಬೇಕು. ಒಂದು ತಿಂಗಳ ಕಾಲ ಇ-ಖಾತಾ ವಿತರಣೆ ಆಂದೋಲನ ಹಮ್ಮಿಕೊಳ್ಳಲಾಗುವುದು. ಈ ಕುರಿತು ಮನೆ ಮನೆ ಪ್ರಚಾರ ಹಾಗೂ ಜಾಹೀರಾತಿನ ಮೂಲಕ ಪ್ರಚಾರ ಮಾಡಲಾಗುವುದು ಎಂದು ತಿಳಿಸಿದರು.

error: Content is protected !!
Scroll to Top