ಇನ್ಮುಂದೆ ಕೆಲವು ಪಾಸ್‌ಪೋರ್ಟ್ ಗಳಿಗೆ ಪೊಲೀಸ್ ವೆರಿಫಿಕೇಶನ್ ಬೇಕಿಲ್ಲ ► ಯಾವುದಕ್ಕೆಂದು ತಿಳಿಯಬೇಕೇ…?

(ನ್ಯೂಸ್ ಕಡಬ) newskadaba.com ನವದೆಹಲಿ, ಎ.06. ಪಾಸ್‌ಪೋರ್ಟನ್ನು ಸಾರ್ವಜನಿಕರಿಗೆ ಅತೀ ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಹಾಗೂ ಪಾಸ್‌ಪೋರ್ಟ್ ಪರಿಶೀಲನೆ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿ ಸಚಿವಾಲಯಕ್ಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪೊಲೀಸ್ ಪರಿಶೀಲನೆ ಪ್ರಕ್ರಿಯೆಯನ್ನು ಕೈಬಿಡಲು ತೀರ್ಮಾಸಿದೆ.‌

ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿಗಳು, ಅರ್ಜಿದಾರರ 12 ದಾಖಲೆಗಳ ಪೈಕಿ ಕೆಲವನ್ನು ಪರಿಶೀಲನೆ ನಡೆಸಲಿದ್ದಾರೆ. ಆ ಬಳಿಕವೇ ಅರ್ಜಿ ವಿಲೇವಾರಿ ಮಾಡಲಿದ್ದಾರೆ. ಅರ್ಜಿದಾರರ ದಾಖಲೆಗಳಲ್ಲಿ ಏನಾದರೂ ಲೋಪ ಕಂಡು ಬಂದರೆ ಮಾತ್ರ ಪೊಲೀಸ್‌ ಪರಿಶೀಲನೆಗೆ ಕಳುಹಿಸಲಿದ್ದಾರೆ. ಪೊಲೀಸರು ತ್ವರಿತವಾಗಿ ಪರಿಶೀಲನೆ ನಡೆಸುತ್ತಿಲ್ಲ. ಇದರಿಂದ ಪಾಸ್‌ಪೋರ್ಟ್‌ ಕೈ ಸೇರುವುದು ತಡವಾಗುತ್ತಿದೆ ಎಂದು ಹಲವರು ದೂರಿದ್ದ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಸಚಿವಾಲಯವು, ‘ಔಟ್‌ ಆಫ್‌ ಟರ್ನ್‌’ ಎಂಬ ಯೋಜನೆ ರೂಪಿಸಿದೆ. ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ, ಈ ಯೋಜನೆಯಡಿ ಸೌಲಭ್ಯ ಸಿಗಲಿದ್ದು, ಅವರ‍್ಯಾರೂ ಪೊಲೀಸರ ಪರಿಶೀಲನಾ ಪ್ರಮಾಣ ಪತ್ರ ನೀಡುವ ಅಗತ್ಯವಿರುವುದಿಲ್ಲ.

Also Read  ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಕುಸಿದು ಬಿದ್ದು ಪೇದೆ ಮೃತ್ಯು!!     

ಚುನಾವಣಾ ಗುರುತಿನ ಚೀಟಿ, ಎಸ್ಸಿ/ಎಸ್ಟಿ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರಮಾಣಪತ್ರ, ರಾಜ್ಯ, ಕೇಂದ್ರ ಸರ್ಕಾರ ಹಾಗೂ ಖಾಸಗಿ ವಲಯದ ಕಂಪನಿಗಳು ನೀಡುವ ಗುರುತಿನ ಪತ್ರ, ಶಸ್ತ್ರಾಸ್ತ್ರ ಪರವಾನಗಿ, ಪಿಂಚಣಿ ದಾಖಲೆಗಳು, ಪ್ಯಾನ್ ಕಾರ್ಡ್‌, ಬ್ಯಾಂಕ್‌, ಕಿಸಾನ್ ಹಾಗೂ ಅಂಚೆ ಕಚೇರಿ ಪಾಸ್‌ ಬುಕ್, ಶಿಕ್ಷಣ ಸಂಸ್ಥೆಗಳು ನೀಡಿದ ವಿದ್ಯಾರ್ಥಿ ಗುರುತಿನ ಪತ್ರ, ಚಾಲನಾ ಪರವಾನಗಿ ಪತ್ರ, ಜನನ ಪ್ರಮಾಣಪತ್ರ, ಪಡಿತರ ಚೀಟಿಗಳನ್ನು ಬಳಸಿ ಪಾಸ್‌ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.

Also Read  ಮುಂಬೈ: ರೆಡ್ ಅಲರ್ಟ್ ಘೋಷಣೆ ➤ಮಹಾರಾಷ್ಟ್ರ ದ ಜನರನ್ನು ಆತಂಕಕ್ಕೆ ನೂಕಿರುವ ವರ್ಷಧಾರೆ

error: Content is protected !!
Scroll to Top