ಐಪಿಎಲ್: ‘ಈ ಸಲ‌ ಕಪ್ ನಮ್ದೇ’- ಚೊಚ್ಚಲ ಪ್ರಶಸ್ತಿ ಎತ್ತಿದ ಆರ್ ಸಿಬಿ

(ನ್ಯೂಸ್ ಕಡಬ) newskadaba.com ಅಹಮದಾಬಾದ್, ಜೂ. 03. ಕಪ್‌ಗಾಗಿ ಆರ್‌ಸಿಬಿಯ 18 ವರ್ಷದ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದ್ದು, 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿ ಹೊರ ಹೊಮ್ಮಿದೆ‌. ಇದರಿಂದ ಕೋಟ್ಯಾಂತರ ಅಭಿಮಾನಿಗಳ ಮುಗಿಲು ಮುಟ್ಟಿದ ಸಂಭ್ರಮದ ನಡುವೆ ರಜತ್ ಪಾಟಿದಾರ್ ಬಳಗ ಪ್ರಥಮ ಬಾರಿಗೆ ಪ್ರಶಸ್ತಿ ಜಯಿಸಿ ನೂತನ ದಾಖಲೆ ನಿರ್ಮಿಸಿದೆ.

ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳ ಅಂತರದಲ್ಲಿ ಪರಾಭವಗೊಳಿಸಿದ ಆರ್‌ಸಿಬಿ ಮೊದಲ ಬಾರಿಗೆ ಕಪ್ ತನ್ನದಾಗಿಸಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ 190 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಇದರ ಗುರಿ ಬೆನ್ನಟ್ಟಿದ ಪಂಜಾಬ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ಚಾಂಪಿಯನ್ ಆಗುವ ಪಂಜಾಬ್ ಕನಸು ನುಚ್ಚು ನೂರಾಯಿತು.

error: Content is protected !!
Scroll to Top