uttar pradesh

ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನಲ್ಲಿ ಬೆಂಕಿ ಅನಾಹುತ

(ನ್ಯೂಸ್‌ ಕಡಬ) newskadaba.com,  ನ.06 ಲಖನೌ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನ ಖ್ಯಾತಿಗೆ ಕಳಂಕ ತರುವ ಮತ್ತೊಂದು ಪ್ರಯತ್ನ ನಡೆದಿದೆ. ತಾಜ್‌ನ ಮುಖ್ಯ ಗುಮ್ಮಟದಿಂದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಮೇಲೇರುತ್ತಿರುವುದನ್ನು ತೋರಿಸುವ 33 ಸೆಕೆಂಡುಗಳ ವೀಡಿಯೊ ವೈರಲ್ ಆಗುತ್ತಿದೆ. ಈ Al- ರಚಿತ ವೀಡಿಯೊವನ್ನು ಆಸ್ಟ್ರೇಲಿಯಾದ ನಟ ಆಡ್ರಿಯನ್ ಜೀ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಆದರೆ ಈಗ ಅದನ್ನು ವಿರೂಪಗೊಳಿಸಿ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಸೆಪ್ಟೆಂಬರ್ 29 ರಂದು […]

ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನಲ್ಲಿ ಬೆಂಕಿ ಅನಾಹುತ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬುಲ್ಡೋಜರ್ ಕ್ರಮಕ್ಕೆ ಸುಪ್ರೀಂಕೋರ್ಟ್ ತಡೆ- ಅ.23ಕ್ಕೆ ವಿಚಾರಣೆ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಅ. 22. ಕೋಮು ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳ ಮನೆಗಳನ್ನು ಜೆಸಿಬಿ ಮೂಲಕ ಧ್ವಂಸಗೊಳಿಸುವ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿದ್ದು, ವಿಚಾರಣೆಯನ್ನು ಅ.23ಕ್ಕೆ ಮುಂದೂಡಿರುವುದಾಗಿ ವರದಿಯಾಗಿದೆ. ಆರೋಪಿಗಳ ಮನೆಯನ್ನು ಒಡೆಯುವ ನೋಟಿಸ್ ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್, ಇದು ರಾಜ್ಯ ಸರ್ಕಾರದ ಆಯ್ಕೆಗೆ ಬಿಟ್ಟ ವಿಚಾರವಾಗಿದೆ. ಒಂದು ವೇಳೆ ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸಲು ಬಯಸುವುದಾದರೆ ಆಯ್ಕೆ ನಿಮ್ಮದು ಎಂದು ಎಚ್ಚರಿಸಿದೆ. ಅರ್ಜಿ

ಬುಲ್ಡೋಜರ್ ಕ್ರಮಕ್ಕೆ ಸುಪ್ರೀಂಕೋರ್ಟ್ ತಡೆ- ಅ.23ಕ್ಕೆ ವಿಚಾರಣೆ ಮುಂದೂಡಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಂದೇ ಭಾರತ್​ ರೈಲಿ​ಗೆ ಕಲ್ಲೆಸೆದ ಕಿಡಿಗೇಡಿಗಳು – ಕಿಟಕಿ ಗಾಜುಗಳಿಗೆ ಹಾನಿ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಜು.27. ಆಗ್ರಾ ರೈಲ್ವೇ ವಿಭಾಗದ ಭೋಪಾಲ್‌ನಿಂದ ದೆಹಲಿಯ ನಿಜಾಮುದ್ದೀನ್ ನಿಲ್ದಾಣಕ್ಕೆ ಸಂಚರಿಸುತ್ತಿದ್ದ ವಂದೇ ಭಾರತ್‌ ಎಕ್ಸ್ ಪ್ರೆಸ್‌ ರೈಲಿ​ಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ ಎನ್ನಲಾಗಿದೆ. ರೈಲು ಕೋಚ್‌ನ ಗಾಜುಗಳು ಒಡೆದಿದ್ದು, ರೈಲ್ವೇ ಮೂಲಗಳು ನೀಡಿದ ಮಾಹಿತಿ ಪ್ರಕಾರ, ಆಗ್ರಾದ ಮಾನಿಯಾ ಮತ್ತು ಜಜೌ ನಿಲ್ದಾಣಗಳ ನಡುವೆ ರೈಲು ಸಂಚರಿಸುತ್ತಿದ್ದಾಗ ಕಲ್ಲು ತೂರಲಾಗಿದೆ. ಸಿ-7 ಕೋಚ್‌ನ ಸೀಟ್ ಸಂಖ್ಯೆ 13-14ರ ಕಿಟಕಿ ಗಾಜುಗಳು ಒಡೆದಿವೆ. ರೈಲ್ವೇ ಸಿಬ್ಬಂದಿಯ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ

ವಂದೇ ಭಾರತ್​ ರೈಲಿ​ಗೆ ಕಲ್ಲೆಸೆದ ಕಿಡಿಗೇಡಿಗಳು – ಕಿಟಕಿ ಗಾಜುಗಳಿಗೆ ಹಾನಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರೈಲ್ವೇ ಪ್ಲಾಟ್‌ ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನ ಮೇಲೆ ದರ್ಪ ಮೆರೆದ ಪೊಲೀಸ್ ಅಧಿಕಾರಿ

(ನ್ಯೂಸ್ ಕಡಬ)newskadaba.com ಉತ್ತರಪ್ರದೇಶ, ಜು.18. ರೈಲು ನಿಲ್ದಾಣವೊಂದರ ಪ್ಲಾಟ್‌ ಫಾರ್ಮ್‌ ನಲ್ಲಿ ಮಲಗಿದ್ದ ಬಾಲಕನನ್ನು ರೈಲ್ವೆ ಪೊಲೀಸ್ ಪೇದೆಯೊಬ್ಬ ಕಾಲಿನಿಂದ ಒದ್ದು ಎಬ್ಬಿಸಿದ ಅಮಾನವೀಯ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್‌ ಅಧಿಕಾರಿಯ ನಡೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಉತ್ತರಪ್ರದೇಶ ಬಲ್ಲಿಯಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಾಲಕನೋರ್ವ ರೈಲು ನಿಲ್ದಾಣದ ಫ್ಲಾಟ್‌ ಫಾರ್ಮ್‌ನಲ್ಲಿ ಮಲಗಿದ್ದು, ಈತನನ್ನು ಬೂಟುಗಾಲಿನಿಂದ ಒದ್ದು ರೈಲ್ವೆ ರಕ್ಷಣಾ ಪಡೆ ಪೊಲೀಸ್ ಪೇದೆ ಎಬ್ಬಿಸಿದ್ದಾನೆ. ವೀಡಿಯೋ

ರೈಲ್ವೇ ಪ್ಲಾಟ್‌ ಫಾರ್ಮ್‌ನಲ್ಲಿ ಮಲಗಿದ್ದ ಬಾಲಕನ ಮೇಲೆ ದರ್ಪ ಮೆರೆದ ಪೊಲೀಸ್ ಅಧಿಕಾರಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದು ಹಳಿತಪ್ಪಿದ ಗೂಡ್ಸ್ ರೈಲು ➤ 6 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಜೂ. 24. ಟ್ರ್ಯಾಕ್ಟರ್​ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ಶನಿವಾರ ನಡೆದಿದೆ. ಇಂದು ಬೆಳಗ್ಗೆ ಬಂಸಿಪಹಾರ್‌ಪುರ-ರೂಪ್ ಬಾಸ್ ರೈಲು ವಿಭಾಗದಲ್ಲಿ ಗೂಡ್ಸ್ ರೈಲೊಂದು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು, ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಆರು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಿಂದ ಹೆಚ್ಚಿನ ಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದು ಹಳಿತಪ್ಪಿದ ಗೂಡ್ಸ್ ರೈಲು ➤ 6 ಮಂದಿಗೆ ಗಾಯ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಳ್ಳಾಲ: ಯುವತಿಯ ಮಾನಭಂಗಕ್ಕೆ ಯತ್ನ ➤ ಉ.ಪ್ರದೇಶದ ಕಾರ್ಮಿಕನ ಬಂಧನ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. 10. ಕೆಲಸದಿಂದ ಹಿಂತಿರುಗುತ್ತಿದ್ದ ಯುವತಿ ಮೇಲೆ ಹೊರರಾಜ್ಯದ ಕಾರ್ಮಿಕನೋರ್ವ ಮಾನಭಂಗಕ್ಕೆ ಯತ್ನಿಸಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಿನ ತಲಪಾಡಿಯಲ್ಲಿ ಸಂಭವಿಸಿದೆ. ಆರೋಪಿಯನ್ನು ಉತ್ತರಪ್ರದೇಶ ಮೂಲದ ರಾಮು ಕೆ. ಎಂದು ಗುರುತಿಸಲಾಗಿದೆ. ಯುವತಿಯೋರ್ವಳು ಮಂಗಳೂರಿಗೆ ಕೆಲಸಕ್ಕೆ ತೆರಳಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭ ದಾರಿಮಧ್ಯೆ ಆರೋಪಿಯು ಯುವತಿ ಮೇಲೆ ಲೈಂಗಿಕ ಕಿರುಕುಳ ನೀಡಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಘಟನೆಯಿಂದ ಹೆದರಿದ ಯುವತಿ ಬೊಬ್ಬಿಟ್ಟಾಗ ಸ್ಥಳೀಯರು ಓಡಿಬಂದು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ

ಉಳ್ಳಾಲ: ಯುವತಿಯ ಮಾನಭಂಗಕ್ಕೆ ಯತ್ನ ➤ ಉ.ಪ್ರದೇಶದ ಕಾರ್ಮಿಕನ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾರಿನ ಮೇಲೆ ಬೃಹತ್ ಜಾಹೀರಾತು ಫಲಕ ➤ತಾಯಿ – ಮಗಳು ಮೃತ್ಯು

(ನ್ಯೂಸ್ ಕಡಬ)newskadaba@gmail.com ಲಕ್ನೋ, ,( ಜೂ 06) ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಜಾಹೀರಾತು ಫಲಕ ಬಿದ್ದು ತಾಯಿ ಮತ್ತು ಮಗಳು ಸಾವಿಗೀಡಾದ ದಾರುಣ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.ಮೃತರನ್ನು ಪ್ರೀತಿ ಜಗ್ಗಿ(38) ಮತ್ತು ಏಂಜಲ್(15)  ಎಂದು ಗುರುತಿಸಲಾಗಿದೆ. ಕಾರಿನ ಡ್ರೈವರ್​ ಸರ್ತಾಜ್ (28) ಭೀಕರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಾಯಿ ಹಾಗೂ ಮಗಳು ಮಾಲ್‌ಗೆ ಹೋಗುತ್ತಿದ್ದಾಗ ಏಕಾನಾ ಸ್ಟೇಡಿಯಂ ಹತ್ತಿರದ ಗೇಟ್ ನಂಬರ್ ಎರಡರ ಮುಂಭಾಗದಲ್ಲಿದ್ದ ಜಾಹೀರಾತು ಫಲಕ ಏಕಾಏಕಿ ಮಹೇಂದ್ರಾ ಎಸ್​​ಯುವಿ ಮೇಲೆ

ಕಾರಿನ ಮೇಲೆ ಬೃಹತ್ ಜಾಹೀರಾತು ಫಲಕ ➤ತಾಯಿ – ಮಗಳು ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್

ಕೈದಿಯನ್ನು ಶಾಪಿಂಗ್‌ ಮಾಲ್‌ ಗೆ ಕರೆದೊಯ್ದ 4 ಪೊಲೀಸರ ಅಮಾನತು

(ನ್ಯೂಸ್ ಕಡಬ) newskadaba.com ಲಕ್ನೋ, ಮಾ. 18. ಜೈಲಿನಲ್ಲಿದ್ದ ವಿಚಾರಣಾಧೀನ ಖೈದಿಯನ್ನು ಶಾಪಿಂಗ್ ಮಾಲ್‌ ಗೆ ಕರೆದೊಯ್ದ ಆರೋಪದ ಮೇಲೆ ನಾಲ್ಕು ಜನ ಪೊಲೀಸರನ್ನು ಅಮಾನತುಗೊಳಿಸಿದ ಘಟನೆ  ಉತ್ತರಪ್ರದೇಶದಲ್ಲಿ ನಡೆದಿದೆ. ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಎಸ್‌ಐ ರಾಮ್‌ ಸೇವಕ್ ಮತ್ತು ಕಾನ್‌ಸ್ಟೆಬಲ್‌ ಗಳಾದ ಅನುಜ್ ಧಾಮ, ನಿತಿನ್ ರಾಣಾ ಮತ್ತು ರಾಮಚಂದ್ರ ಪ್ರಜಾಪತಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಲಕ್ನೋ ಪೊಲೀಸ್ ಕಮಿಷನರೇಟ್ ತಿಳಿಸಿದೆ.

ಕೈದಿಯನ್ನು ಶಾಪಿಂಗ್‌ ಮಾಲ್‌ ಗೆ ಕರೆದೊಯ್ದ 4 ಪೊಲೀಸರ ಅಮಾನತು Read More »

ರಾಷ್ಟ್ರೀಯ ನ್ಯೂಸ್

23 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ 6 ಮಕ್ಕಳ ತಂದೆ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಫೆ.06. 6 ಮಕ್ಕಳ ತಂದೆಯೊಬ್ಬ 23 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ ಘಟನೆ ನಡೆದಿದ್ದು, ಕಳೆದ ಕೆಲ ವರ್ಷಗಳಿಂದ, ಪತ್ನಿ ನಿಧನದ ಬಳಿಕ ಒಂಟಿ ಜೀವನವನ್ನು ನಡೆಸುತ್ತಿದ್ದು, ತನ್ನ 6 ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿರುವ 65 ವರ್ಷದ ನಖೇಶ್‌ ಯಾದವ್‌ ಈಗ ಎಲ್ಲರ ಸಮ್ಮುಖದಲ್ಲಿ 23 ವರ್ಷದ ನಂದಿನಿ ಯಾದವ್‌ ಎಂಬ ಯುವತಿಯನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ವೈಯಕ್ತಿಕ ಕೆಲಸದ ನಿಮಿತ್ತ ರಾಂಚಿಗೆ ಹೋಗಿದ್ದ ವೇಳೆ ಅಲ್ಲಿ ಯುವತಿಯ ಪರಿಚಯವಾಗಿ ದಿನ

23 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ 6 ಮಕ್ಕಳ ತಂದೆ Read More »

ರಾಷ್ಟ್ರೀಯ ನ್ಯೂಸ್

ಲೇಡೀಸ್ ಬೀಚ್’ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದು

(ನ್ಯೂಸ್ ಕಡಬ)newskadaba.com ಉತ್ತರ ಕನ್ನಡ, ಫೆ.03. ಉತ್ತರ ಕನ್ನಡ ಜಿಲ್ಲೆಯ ಬೈತಕೋಲ್ ಗ್ರಾಮದ ಬ್ರಿಟಿಷರ ಕಾಲದ ಲೇಡೀಸ್ ಬೀಚ್’ಗೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದಾಗಿದ್ದಾರೆಂದು ವರದಿಯಾಗಿದೆ. ಪ್ರಾಜೆಕ್ಟ್ ಸೀಬರ್ಡ್ ಬೇಸ್ ಎಂದೂ ಕರೆಯಲ್ಪಡುವ ಯೋಜನೆಯನ್ನು ಬೀಚ್ ಬಳಿ ಕೈಗೊಳ್ಳಲಾಗಿದ್ದು, ಗಡಿಯಾರ ಗೋಪುರಗಳನ್ನು ತಲುಪಲು ಕಡಲತೀರದ ಪಕ್ಕದ ಬೆಟ್ಟದ ಉದ್ದಕ್ಕೂ ರಸ್ತೆಯನ್ನು ನಿರ್ಮಾಣ ಮಾಡುವ ಕಾರ್ಯವನ್ನು ಭಾರತೀಯ ನೌಕಾಪಡೆ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬೀಚ್’ಗೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ನಿರ್ಧಾರ ಕೈಗೊಳ್ಳಲಾಗಿದೆ

ಲೇಡೀಸ್ ಬೀಚ್’ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದು Read More »

ಕರ್ನಾಟಕ
Scroll to Top