ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನಲ್ಲಿ ಬೆಂಕಿ ಅನಾಹುತ

(ನ್ಯೂಸ್‌ ಕಡಬ) newskadaba.com,  ನ.06 ಲಖನೌ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನ ಖ್ಯಾತಿಗೆ ಕಳಂಕ ತರುವ ಮತ್ತೊಂದು ಪ್ರಯತ್ನ ನಡೆದಿದೆ. ತಾಜ್‌ನ ಮುಖ್ಯ ಗುಮ್ಮಟದಿಂದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಮೇಲೇರುತ್ತಿರುವುದನ್ನು ತೋರಿಸುವ 33 ಸೆಕೆಂಡುಗಳ ವೀಡಿಯೊ ವೈರಲ್ ಆಗುತ್ತಿದೆ.

ಈ Al- ರಚಿತ ವೀಡಿಯೊವನ್ನು ಆಸ್ಟ್ರೇಲಿಯಾದ ನಟ ಆಡ್ರಿಯನ್ ಜೀ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಆದರೆ ಈಗ ಅದನ್ನು ವಿರೂಪಗೊಳಿಸಿ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ.

ಸೆಪ್ಟೆಂಬರ್ 29 ರಂದು ಪೋಸ್ಟ್ ಮಾಡಲಾದ ವೀಡಿಯೊವನ್ನುಇದು ವರೆಗೆ 8 ಸಾವಿರ ಜನರು ಹಂಚಿಕೊಂಡಿದ್ದಾರೆ, 37 ಸಾವಿರ ಜನರು ಲೈಕ್‌ ನೀಡಿದ್ದಾರೆ. 3300 ಜನರು ಕಾಮೆಂಟ್ ಮಾಡಿದ್ದಾರೆ. ತಾಜ್ ಮಹಲ್‌ನಲ್ಲಿ ಸಂಭವಿಸಿದ ಬೆಂಕಿಯನ್ನು ವೀಡಿಯೊದಲ್ಲಿ ಹಲವು ಕೋನಗಳಿಂದ ತೋರಿಸಲಾಗಿದೆ. ಮೊದಲ ನೋಟದಲ್ಲೇ ಇದು ಕುತೂಹಲ ಮೂಡಿಸುತ್ತದೆ. ಆಪ್ಯಾ ಅಪ್ಪಾ ಹಿಂದೂಸ್ತಾನ್‌ನ ತನಿಖೆಯಲ್ಲಿ, ವೀಡಿಯೊ ಕೃತಕ ಬುದ್ದಿಮತ್ತೆಯಿಂದ ರಚಿಸಿದ್ದು ಎಂದು ತಿಳಿದು ಬಂದಿದೆ.

Scroll to Top