Udupi

ಹೆಜ್ಜೇನು ದಾಳಿ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 16. ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ನೀರಿನಲ್ಲಿ ಮುಳುಗಿ ಓರ್ವ ಮೃತಪಟ್ಟರೆ, ಮತ್ತೋರ್ವನ ಸ್ಥಿತಿ ಗಂಭೀರವಾಗಿರುವ ಪ್ರಕರಣ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆ ಬೀಚ್ ಬಳಿ ನಡೆದಿದೆ. ಮೃತಪಟ್ಟವರನ್ನು ವಾಸುದೇವ ಡಿ. ಸಾಲಿಯಾನ್ (65) ಹಾಗೂ ಗಾಯಾಳುವನ್ನು ಚಂದ್ರಶೇಖರ್(65) ಎಂದು ಗುರುತಿಸಲಾಗಿದೆ. ಪಡುಬಿದ್ರೆ ಬೀಚ್ ಬಳಿ ಅಡ್ಡಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಹೆಜ್ಜೇನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ಸಲ್ಲಿಸಿದ್ದಾರೆ.

ಹೆಜ್ಜೇನು ದಾಳಿ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್
Crime

ಮಾಜಿ ನಗರಸಭೆ ಅಧ್ಯಕ್ಷೆಯ ಪತಿಗೆ ಹಲ್ಲೆ ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 15. ನಗರಸಭೆ ಮಾಜಿ ಅಧ್ಯಕ್ಷೆ ಶಾಂತಾ ನಾಯ್ಕ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಯೋರ್ವ ಅವರ ಪತಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗುರುವಾರದಂದು ಬೆಳಗ್ಗೆ ಇಂದ್ರಾಳಿ ಸಮೀಪ ನಡೆದಿದೆ. ಹಲ್ಲೆಗೊಳಗಾದವರನ್ನು ಕೃಷ್ಣನಾಯ್ಕ್ ಎಂದು ಗುರುತಿಸಲಾಗಿದೆ. ಆರೋಪಿ ಅರ್ಜುನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಅರ್ಜುನ್ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಜಿ ನಗರಸಭೆ ಅಧ್ಯಕ್ಷೆಯ ಪತಿಗೆ ಹಲ್ಲೆ ➤ ಆರೋಪಿ ಪೊಲೀಸ್ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೈಕ್ ಢಿಕ್ಕಿ ➤ಪಾದಾಚಾರಿ ಸ್ಥಳದಲ್ಲೆ ಮೃತ್ಯು….!

(ನ್ಯೂಸ್ ಕಡಬ) newskadaba.com  ಕಟಪಾಡಿ ,.ಡಿ 10. ಬೈಕ್ ಒಂದು ಢಿಕ್ಕಿ ಹೊಡೆದು ಪಾದಾಚಾರಿಯೋರ್ವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಯಲ್ಲಿಸಂಭವಿಸಿದೆ. ಮೃತಪಟ್ಟವರನ್ನುಕಟಪಾಡಿಯ ಏಣಗುಡ್ಡೆಅಗ್ರಹಾರದ ಸತೀಶ್ ಎಂದು ಗುರುತಿಸಲಾಗಿದೆ.ಸತೀಶ್ ಎಂಬುವವರು ಕಟಪಾಡಿಯಲ್ಲಿ ರಸ್ತೆ ದಾಟುತ್ತಿರುವಾಗ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಸತೀಶ್ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ .ಸ್ಥಳಕ್ಕೆ ಕಟಪಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೈಕ್ ಢಿಕ್ಕಿ ➤ಪಾದಾಚಾರಿ ಸ್ಥಳದಲ್ಲೆ ಮೃತ್ಯು….! Read More »

ಕರ್ನಾಟಕ
Theft, crime, Robbery

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ 40 ಲಕ್ಷ ರೂ. ಮೌಲ್ಯದ ಚಿನ್ನ, ಡೈಮಂಡ್ ಆಭರಣ ಕಳವು…!

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 07. ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬ್ಯಾಗ್ ನಲ್ಲಿದ್ದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಡೈಮಂಡ್ ಆಭರಣಗಳನ್ನು ಕಳ್ಳರು‌ ಕಳವು ಮಾಡಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರ ಮುಲುಂದು ವೈಶಾಲಿ ನಗರದ ದೀಪಾ ರೈ ಎಂಬವರು ಡಿ.6ರಂದು ನಡೆಯಲಿದ್ದ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಬೈ ಯ ಪನ್ವೇಲಿನಿಂದ ತಮ್ಮ ಮನೆಯಾದ ಕಟಪಾಡಿಗೆ ಡಿ.5ರಂದು ತಂದೆ-ತಾಯಿಯ ಜೊತೆ ಮತ್ಸ್ಯಗಂದ ರೈಲಿನಲ್ಲಿ ಉಡುಪಿಗೆ ಹೊರಟಿದ್ದರು. ಜೊತೆಗೆ ಮದುವೆಯಲ್ಲಿ ಧರಿಸುವುದಕ್ಕಾಗಿ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ 40 ಲಕ್ಷ ರೂ. ಮೌಲ್ಯದ ಚಿನ್ನ, ಡೈಮಂಡ್ ಆಭರಣ ಕಳವು…! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಟಯರ್ ಬ್ಲಾಸ್ಟ್ ಆಗಿ ಅಡಿಕೆ ಸಾಗಾಟದ ಟೆಂಪೋ ಪಲ್ಟಿ..! ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಾಪು, ಜ. 12. ಅಡಿಕೆ ಸಾಗಾಟದ ಟೆಂಪೋ ವಾಹನವೊಂದು ರಾ.ಹೆ 66ರ ಫ್ಲೈ ಓವರ್ ನಲ್ಲಿ ಪಲ್ಟಿಯಾಗಿರುವ ಘಟನೆ ನಡೆದಿದೆ. ಸಿದ್ದಾಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಟೆಂಪೋದ ಟಯರ್ ಬ್ಲಾಸ್ಟ್ ಆಗಿದ್ದು, ಪರಿಣಾಮ ನಿಯಂತ್ರಣ ತಪ್ಪಿದ ಟೆಂಪೋ ಮಗುಚಿಬಿದ್ದಿದೆ. ಘಟನೆಯಲ್ಲಿ ಚಾಲಕ ಹಾಗೂ ನಿರ್ವಾಹಕ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಘಟನೆಯಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಟಯರ್ ಬ್ಲಾಸ್ಟ್ ಆಗಿ ಅಡಿಕೆ ಸಾಗಾಟದ ಟೆಂಪೋ ಪಲ್ಟಿ..! ➤ ಚಾಲಕ ಅಪಾಯದಿಂದ ಪಾರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿಕೆಶಿ ಭೇಟಿ

(ನ್ಯೂಸ್ ಕಡಬ) newskadaba,ಉಚ್ಚಿಲ ಜು.06: ಸುಮಾರು 32 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಪುನರ್ ನಿರ್ಮಾಣಗೊಳ್ಳುತ್ತಿರುವ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಬಾಲಾಲಯದಲ್ಲಿಯ ಶ್ರೀ ಮಹಾಲಕ್ಷಿಗೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ ಮತ್ತು ವಿಷ್ಣುಮೂರ್ತಿ ಉಪಾಧ್ಯಾಯ ರವರು ಪೂಜೆ ಸಲ್ಲಿಸಿ ಡಿಕೆ ಶಿವಕುಮಾರ್ ರವರಿಗೆ ಪ್ರಸಾದ ವಿತರಿಸಿದರು.ದೇವಳದ ಆಡಳಿತ ಮಂಡಳಿಯ ವತಿಯಿಂದ ಡಿಕೆ ಶಿವಕುಮಾರ್‌ರವರನ್ನು

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿಕೆಶಿ ಭೇಟಿ Read More »

ಕರಾವಳಿ

ಪ್ರೇಮಿಗಾಗಿ ಗಾಂಜಾ ತಲುಪಿಸುವಾಗ ಸಿಕ್ಕಿಬಿದ್ದ ಇಂಜಿನಿಯರಿಂಗ್ ಪದವೀಧರೆ

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.16: ಪ್ರಿಯಕರನಿಗಾಗಿ ಗಾಂಜಾ ತಲುಪಿಸುತ್ತಿದ್ದ ಇಂಜಿನಿಯರಿಂಗ್ ಪದವೀಧರೆಯನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿ ಎರಡೂವರೆ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ಅಂಧ್ರಪ್ರದೇಶದಿಂದ ಬಂದು ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ರೇಣುಕಾ ಬಂಧಿತ ಆರೋಪಿ. ಚೆನ್ನೈನ ಖಾಸಗಿ‌ ಕಾಲೇಜಿನಲ್ಲಿ ಸಿದ್ದಾರ್ಥ್ ಎಂಬಾತನನ್ನು ಪ್ರೇಮಿಸಿದ್ದ ರೇಣುಕಾ, ಸಿದ್ದಾರ್ಥ್ ಕೊಡುತ್ತಿದ್ದ ಗಾಂಜಾವನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಳು.ಬೆಂಗಳೂರಿನ ಮುಖ್ಯರಸ್ತೆಗಳಲ್ಲಿರುವ ಓಯೋ ರೂಮ್ ಮಾಡುತ್ತಿದ್ದ ರೇಣುಕಾ, ಸಿದ್ದಾರ್ಥ್ ಜೊತೆ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತನಾಡಿ ಗ್ರಾಹಕರನ್ನು ರೂಮ್ ಬಳಿ ಕರೆಸಿಕೊಂಡು ಗಾಂಜಾ ಪೂರೈಸಲಾಗುತಿತ್ತು. ತಾನು

ಪ್ರೇಮಿಗಾಗಿ ಗಾಂಜಾ ತಲುಪಿಸುವಾಗ ಸಿಕ್ಕಿಬಿದ್ದ ಇಂಜಿನಿಯರಿಂಗ್ ಪದವೀಧರೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಮುಖ

(ನ್ಯೂಸ್ ಕಡಬ) newskadaba,ನವದೆಹಲಿ ಜೂ.15:ಭಾರತದಲ್ಲಿ ಕೊರೋನಾ 2ನೇ ಅಲೆಯ ತೀವ್ರತೆ ಮತ್ತಷ್ಟು ಕಡಿಮೆಯಾಗಿದೆ. ಮಂಗಳವಾರ 60,471 ಜನರಲ್ಲಿ ಸೋಂಕು ಕಂಡು ಬಂದಿದ್ದು, ಇದು 75 ದಿನಗಳಲ್ಲೇ ಕನಿಷ್ಟವಾಗಿದೆ. ಇದೇ ಅವಧಿಯಲ್ಲಿ ದೇಶದಲ್ಲಿ 2,726 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಶನಿವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,95,70,881ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,77,031ಕ್ಕೆ ಏರಿಕೆಯಾಗಿದೆ.  ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ನಡುವಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ

ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಮುಖ Read More »

ಕರಾವಳಿ

ಲಿಕ್ಕರ್ ಶಾಪ್ ಓಪನ್ ➤ ಬಾಟಲಿಗೆ ಆರತಿ ಮಾಡಿ, ಮುತ್ತಿಟ್ಟ ಮದ್ಯಪ್ರಿಯರು

(ನ್ಯೂಸ್ ಕಡಬ) newskadaba, ತಮಿಳುನಾಡು ಜೂ.15: ತಮಿಳುನಾಡಿನಲ್ಲಿ ಕೊರೋನಾ ಕೇಸುಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ ಜೂನ್ 21ರವರೆಗೆ ಮತ್ತೆ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. ಆದರೆ, ಇನ್ನು ಒಂದು ವಾರಗಳ ಕಾಲ ಲಾಕ್​ಡೌನ್ ನಿಯಮಗಳಲ್ಲಿ ಕೊಂಚ ಸಡಿಲಿಕೆಯನ್ನೂ ಮಾಡಲಾಗಿದೆ. ಅದರಂತೆ, ತಿಂಗಳುಗಳ ಬಳಿಕ ತಮಿಳುನಾಡಿನಲ್ಲಿ ಬಾರ್, ಮದ್ಯದಂಗಡಿಗಳನ್ನು ಓಪನ್ ಮಾಡಲು ಅನುಮತಿ ನೀಡಲಾಗಿದೆ. ಇದರಿಂದ ಮದ್ಯಪ್ರಿಯರು ಬಹಳ ಖುಷಿಯಾಗಿದ್ದು, ಮಧುರೈನ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಆಲ್ಕೋಹಾಲ್ ಬಾಟಲಿಗೆ ಆರತಿ ಬೆಳಗಿ, ತನ್ನ ಸಂತೋಷವನ್ನು ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ.     ಮಧುರೈನ ರಸ್ತೆಬದಿಯ

ಲಿಕ್ಕರ್ ಶಾಪ್ ಓಪನ್ ➤ ಬಾಟಲಿಗೆ ಆರತಿ ಮಾಡಿ, ಮುತ್ತಿಟ್ಟ ಮದ್ಯಪ್ರಿಯರು Read More »

ರಾಷ್ಟ್ರೀಯ ನ್ಯೂಸ್

ಉಡುಪಿ: ದ್ವಿಚಕ್ರ ವಾಹನ ಸ್ಕಿಡ್- ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಫೆ. 01. ದ್ವಿಚಕ್ರ ವಾಹನ ಸ್ಕಿಡ್ ಆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ರಾತ್ರಿ ರಾಪ್ಟ್ರೀಯ ಹೆದ್ದಾರಿ ಸಂತೆಕಟ್ಟೆ ಸೇತುವೆ ಬಳಿ ನಡೆದಿದೆ. ಮೃತ ಯುವಕನನ್ನು ಕೊಳಲಗಿರಿಯ ಆಸೀಫ್(19) ಎಂದು ಗುರುತಿಸಲಾಗಿದೆ. ಈತ ನಿನ್ನೆ ರಾತ್ರಿ ಉಡುಪಿ ಕಡೆಯಿಂದ ಕೊಳಲಗಿರಿಗೆ ಹೋಂಡಾ ಆಕ್ಟೀವಾದಲ್ಲಿ ಹೋಗುತ್ತಿದ್ದ ವೇಳೆ ಸಂತೆಕಟ್ಟೆ ಸೇತುವೆಯಲ್ಲಿ ದ್ವಿಚಕ್ರ ವಾಹನ ಸ್ಕೀಡ್ ಆಗಿದ್ದು, ಪರಿಣಾಮ ಆಸೀಫ್ ಸೇತುವೆಯ ತಡೆಗೋಡೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು

ಉಡುಪಿ: ದ್ವಿಚಕ್ರ ವಾಹನ ಸ್ಕಿಡ್- ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top