ಬೈಕ್ ಢಿಕ್ಕಿ ➤ಪಾದಾಚಾರಿ ಸ್ಥಳದಲ್ಲೆ ಮೃತ್ಯು….!

(ನ್ಯೂಸ್ ಕಡಬ) newskadaba.com  ಕಟಪಾಡಿ ,.ಡಿ 10. ಬೈಕ್ ಒಂದು ಢಿಕ್ಕಿ ಹೊಡೆದು ಪಾದಾಚಾರಿಯೋರ್ವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಯಲ್ಲಿಸಂಭವಿಸಿದೆ.

ಮೃತಪಟ್ಟವರನ್ನುಕಟಪಾಡಿಯ ಏಣಗುಡ್ಡೆಅಗ್ರಹಾರದ ಸತೀಶ್ ಎಂದು ಗುರುತಿಸಲಾಗಿದೆ.ಸತೀಶ್ ಎಂಬುವವರು ಕಟಪಾಡಿಯಲ್ಲಿ ರಸ್ತೆ ದಾಟುತ್ತಿರುವಾಗ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಸತೀಶ್ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ .ಸ್ಥಳಕ್ಕೆ ಕಟಪಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Scroll to Top