ಟಯರ್ ಬ್ಲಾಸ್ಟ್ ಆಗಿ ಅಡಿಕೆ ಸಾಗಾಟದ ಟೆಂಪೋ ಪಲ್ಟಿ..! ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಕಾಪು, ಜ. 12. ಅಡಿಕೆ ಸಾಗಾಟದ ಟೆಂಪೋ ವಾಹನವೊಂದು ರಾ.ಹೆ 66ರ ಫ್ಲೈ ಓವರ್ ನಲ್ಲಿ ಪಲ್ಟಿಯಾಗಿರುವ ಘಟನೆ ನಡೆದಿದೆ.


ಸಿದ್ದಾಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಟೆಂಪೋದ ಟಯರ್ ಬ್ಲಾಸ್ಟ್ ಆಗಿದ್ದು, ಪರಿಣಾಮ ನಿಯಂತ್ರಣ ತಪ್ಪಿದ ಟೆಂಪೋ ಮಗುಚಿಬಿದ್ದಿದೆ. ಘಟನೆಯಲ್ಲಿ ಚಾಲಕ ಹಾಗೂ ನಿರ್ವಾಹಕ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಘಟನೆಯಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Scroll to Top