newskadaba

ದಕ್ಷಿಣ ಕನ್ನಡ:ಮಂಗಳಾ ಶಾಖೆ ಯ ಉದ್ಘಾಟನಾ ಮತ್ತು ಪದಗ್ರಹಣ

 (ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ,ಜೂ.11. ಭಾರತ್ ವಿಕಾಸ್ ಪರಿಷದ್,ದಕ್ಷಿಣ ಕನ್ನಡ , ಮಂಗಳಾ ಶಾಖೆ ಯ ಉದ್ಘಾಟನಾ ಮತ್ತು ಪದಗ್ರಹಣ ಸಮಾರಂಭವು ದಿ: 06 , ಜುಲೈ 2018 ರಂದು ನಗರದ ಓಷನ್ ಪರ್ಲ್ ಹೋಟೆಲ್ ನ ಸಭಾಂಗಣ ದಲ್ಲಿ ಭಾರತ್ ವಿಕಾಸ್ ಪರಿಷದ್ ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಯಾದ ಶ್ರೀ ಸುರೇಶ ಜೈನ ರವರು ನೆರವೇರಿಸಿದರು.ಮಂಗಳಾ ಶಾಖೆ ಯ ನೂತನ ಅಧ್ಯಕ್ಷ ರಾಗಿ ಡಾ. ಸಚ್ಚಿದಾನಂದ ರೈ ರವರು ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ […]

ದಕ್ಷಿಣ ಕನ್ನಡ:ಮಂಗಳಾ ಶಾಖೆ ಯ ಉದ್ಘಾಟನಾ ಮತ್ತು ಪದಗ್ರಹಣ Read More »

ಕರಾವಳಿ

ಪ್ರತಿಯೊಬ್ಬರಲ್ಲಿ ಪರಿಸರ ಪ್ರಜ್ಞೆ ಅಗತ್ಯ – ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com,ಸುರತ್ಕಲ್.ಜೂ.11. ಇಂದು ಬೆಳಿಗ್ಗೆ 08.00 ಗಂಟೆಗೆ ಸುರತ್ಕಲ್ ಘಟಕದ ಕಛೇರಿಯಲ್ಲಿ ವನಮಹೋತ್ಸವ ಮತ್ತು ಪ್ರವಾಹ ರಕ್ಷಣಾ ನಿರತ ಗೃಹರಕ್ಷಕರಿಗೆ ರೈನ್ಕೋಟ್ ಹಾಗೂ ಬೂಟ್ ಹಸ್ತಾಂತರ ಕಾರ್ಯಕ್ರಮವನ್ನು ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರುರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು, ಬೆಳೆಸಿದರೆ ಅದೇ ಪ್ರಕೃತಿಗೆ ನಮ್ಮ ಸಣ್ಣ ಕೊಡುಗೆ ಎಂದು ನುಡಿದರು. ಗೃಹರಕ್ಷಕರು ನಿಷ್ಕಾಮ ಸೇವೆ ಸಲ್ಲಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯನ್ನು

ಪ್ರತಿಯೊಬ್ಬರಲ್ಲಿ ಪರಿಸರ ಪ್ರಜ್ಞೆ ಅಗತ್ಯ – ಡಾ|| ಚೂಂತಾರು Read More »

ಕರಾವಳಿ

ಕುಂತೂರುಪದವು- ಬಿರಂತಡ್ಕ ರಸ್ತೆ ದುರವಸ್ಥೆ

ಪುಣ್ಯ ಕ್ಷೇತ್ರ ಸಂಪರ್ಕಿಸುವ ರಸ್ತೆಯಾಗಿದ್ದರೂ ಕೇಳುವವರಿಲ್ಲ, ನೋಡುವವರಿಲ್ಲ (ನ್ಯೂಸ್ ಕಡಬ) newskadaba.com,ಕಡಬ.ಜೂ.11. ಉಪ್ಪಿನಂಗಡಿ- ಕಡಬ ಹೆದ್ದಾರಿಯ ಕುಂತೂರು ಪದವು ಎಂಬಲ್ಲಿಂದ ಟಿಸಿಲೊಡೆದ ಬೀರಂತಡ್ಕ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಕುಂತೂರು ಪದವಿನ ಮುರ ಚಡಾವು ಎಂಬಲ್ಲಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು 2.5 ಕಿ.ಮೀ.ಉದ್ದವಿದೆ. ಕುಂತೂರು ಪದವಿನಿಂದ ಜಿ.ಪಂ.ಸದಸ್ಯೆ ಆಶಾ ತಿಮ್ಮಪ್ಪ ಗೌಡರ ಮನೆ ಹಿಂದುಗಡೆಯಿಂದ ಹಾದು ಹೋಗುವ ರಸ್ತೆಯು ಕುಂಡಡ್ಕ ಎಂಬಲ್ಲಿ ಸಂಪರ್ಕಿಸುತ್ತಿದೆ. ಪೆರಾಬೆ ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಈ ರಸ್ತೆ ತೀರಾ ನಾದುರಸ್ತಿಯಲ್ಲಿದ್ದು

ಕುಂತೂರುಪದವು- ಬಿರಂತಡ್ಕ ರಸ್ತೆ ದುರವಸ್ಥೆ Read More »

ಕರಾವಳಿ

ಕಡಬ: ದನದ ಕೊಟ್ಟಿಗೆ ಕುಸಿತ- ದನ ಪಾರು

(ನ್ಯೂಸ್ ಕಡಬ) newskadaba.com ಕಡಬ,ಜೂ.11.  ದನದ ಕೊಟ್ಟಿಗೆಂಯಿಂದ ವಿಪರೀತ ಮಳೆಯಿಂದ ಕುಸಿದು ಬಿದ್ದು ದನವೊಂದು ಅದೃಷ್ಟವಶಾತ್ ಪಾರಾದ ಘಟನೆ ಮಂಗಳವಾರ ನಡೆದಿದೆ. ನೂಜಿಬಾಳ್ತಿಲ ಗ್ರಾ.ಪಂ ಗೊಳಪಟ್ಟ ರೆಂಜಿಲಾಡಿ ಗ್ರಾಮದ ಎನ್ನಾಜೆ ಕುಸುಮಾದರ ಎಂಬವರ ದನದ ಕೊಟ್ಟಿಗೆಯೊಂದು ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ವಿಪರೀತ ಮಳೆಯಿಂದಾಗಿ ಕುಸಿದು ಬಿದ್ದು ಕೊಟ್ಟಿಗೆಯೊಳಗಿದ್ದ ಹಸುವೊಂದು ಒದ್ದಾಡುತ್ತಿತ್ತು ಮನೆಯಲ್ಲಿ ಯಾರೂ ಇಲ್ಲದ ಕಾರಣ ಕೊಟ್ಟಿಗೆ ಬೀಳುವ ಶಬ್ದ ಕೇಳಿ ಹತ್ತಿರದ ಜಯರಾಮ ಎಂಬವರು ರಕ್ಷಿಸಿದ್ದಾರೆ. ನಷ್ಟದ ಬಗ್ಗೆ ಕಂದಾಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

ಕಡಬ: ದನದ ಕೊಟ್ಟಿಗೆ ಕುಸಿತ- ದನ ಪಾರು Read More »

ಕರಾವಳಿ

ವಿಶ್ವ ಜನಸಂಖ್ಯಾ ದಿನ – ಜುಲೈ 11

 (ನ್ಯೂಸ್ ಕಡಬ) newskadaba.c0m ಕಡಬ,ಜೂ.11. ಪ್ರತಿ ವರ್ಷ ಜುಲೈ 11ರಂದು ವಿಶ್ವದಾದ್ಯಂತ ವಿಶ್ವ ಜನಸಂಖ್ಯಾ ದಿನ ಎಂದು ಆಚರಿಸಲಾಗುತ್ತದೆ. ಏರುತ್ತಿರುವ ಜನಸಂಖ್ಯೆಯಿಂದಾಗುವ ಜಾಗತಿಕ ತೊಂದರೆ, ಸಮಸ್ಯೆ ಮತ್ತು ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ದಿನಾಂಕ ಜುಲೈ 11, 1989ರಿಂದ ಜಾರಿಗೆ ತರಲಾಯಿತು. ಕ್ಷಣಕ್ಷಣಕ್ಕೂ ಏರುತ್ತಿರುವ ಜನಸಂಖ್ಯೆ ಜಾಗತಿಕವಾದ ಬಹುದೊಡ್ಡ ಸಮಸ್ಯೆ ಎಂದರೂ ತಪ್ಪಲ್ಲ. ಒಂದು ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ ಪ್ರತೀ ದಿನ 3,53,000 ಶಿಶುಗಳು ಜನಿಸುತ್ತವೆ. (ಪ್ರತೀ ನಿಮಿಷಕ್ಕೆ 255 ಮತ್ತು

ವಿಶ್ವ ಜನಸಂಖ್ಯಾ ದಿನ – ಜುಲೈ 11 Read More »

ಕರಾವಳಿ

ರಾಮಕುಂಜ: ಸದೃಢ ರಾಷ್ಟ್ರ ನಿರ್ಮಾಣ ವಿದ್ಯಾಸಂಸ್ಥೆಗಳ ಗುರಿಯಾಗಬೇಕು: ವಿಶ್ವಪ್ರಸನ್ನ ಶ್ರೀ

(ನ್ಯೂಸ್ ಕಡಬ) newskadaba.com,ಕಡಬ,ಜೂ.11. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದೊಂದಿಗೆ ಜೀವನ ಮೌಲ್ಯವನ್ನು ನೀಡಿ ಭಾರತೀಯ ಸಂಸ್ಕೃತಿ ಭೋಧಿಸಿ ಸದೃಢ ರಾಷ್ಟ್ರ ನಿರ್ಮಣ ಮಾಡುವುದು ವಿದ್ಯಾಸಂಸ್ಥೆಗಳ ಗುರಿಯಾಗಬೇಕು ಎಂದು ಉಡುಪಿ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಅವರು ಭಾನುವಾರ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಪೋಷಕರ ಸಮಾವೇಶದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆಶೀರ್ವಚನ ನೀಡುತ್ತಿದ್ದರು. ಗ್ರಾಮೀಣ ಪ್ರದೇಶದ ವಿಭಿನ್ನ ಸಂಸ್ಸೃತಿಯ ವಿದ್ಯಾರ್ಥಿಗಳನ್ನು ಸೇರಿಸಕೊಂಡು ಅವರಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರವಂತರನ್ನಾಗಿಸುವ

ರಾಮಕುಂಜ: ಸದೃಢ ರಾಷ್ಟ್ರ ನಿರ್ಮಾಣ ವಿದ್ಯಾಸಂಸ್ಥೆಗಳ ಗುರಿಯಾಗಬೇಕು: ವಿಶ್ವಪ್ರಸನ್ನ ಶ್ರೀ Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಎನ್ನೆಸೆಸ್ಸ್ ಉದ್ಘಾಟನೆ

(ನ್ಯೂಸ್ ಕಡಬ) newskadaba.com ,ಕಡಬ.ಜೂ.11. ಮನುಷ್ಯ ತನ್ನ ಜೀವಿತವಾಧಿಯಲ್ಲಿ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸದರೆ ಬದುಕು ಸಾರ್ಥಕವಾಗುತ್ತದೆ ಎಂದು ಕಡಬ ಸರಸ್ವತೀ ವಿದ್ಯಾಲಯ ಸಂಚಾಲಕ ವೆಂಕಟ್ರಮಣ ಮಂಕುಡೆ ಹೇಳಿದರು. ಅವರು ಶ್ರೀ ರಾಮಕುಂಜೇಶ್ವರ ಪದವಿ ಪುರ್ವ ಕಾಲೇಜಿನ ಎನ್ನೆಸೆಸ್ಸ್ ಘಟಕದ ಪ್ರಸಕ್ತ ಸಾಲಿನ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ನಿಸ್ವಾರ್ಥ ಸೇವಾ ಮನೊಭಾವನೆ ಬೆಳೆಯಲು ಎನ್ನೆಸೆಸ್ಸ್ ಪೂರಕವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎನ್ನೆಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಶಿಸ್ತುಬದ್ದ ಅನುಸಾಸನ ಜೀವನದಿಂದ ನಮ್ಮ ವ್ಯಕ್ತಿತ್ವ ಬೆಳಗುತ್ತದೆ.

ಶ್ರೀ ರಾಮಕುಂಜೇಶ್ವರ ಎನ್ನೆಸೆಸ್ಸ್ ಉದ್ಘಾಟನೆ Read More »

ಕರಾವಳಿ

ಮಂಗಳೂರು: ಪಜೀರು ಗ್ರಾಮಸಭೆ

(ನ್ಯೂಸ್ ಕಡಬ) newskadaba.com,ಜು.06. ಬಂಟ್ವಾಳ ತಾಲೂಕು, ಪಜೀರು ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮಸಭೆ, ಜುಲೈ 16 ರಂದು ಪೂರ್ವಾಹ್ನ 10.30 ಗಂಟೆಗೆ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ(ಗ್ರಾ.ಪಂ.ಬಳಿ), ಪಜೀರು ಇಲ್ಲಿ ನಡೆಯಲಿದೆ.

ಮಂಗಳೂರು: ಪಜೀರು ಗ್ರಾಮಸಭೆ Read More »

ಕರಾವಳಿ

ಕೇಂದ್ರ ಸಚಿವರ ಪ್ರವಾಸ

(ನ್ಯೂಸ್ ಕಡಬ) newskadaba.com,ಜು.06. ಕೇಂದ್ರ ಅಂಕಿ ಅಂಶ ಸಚಿವ ಸದಾನಂದ ಗೌಡ ಅವರ ದ.ಕ ಜಿಲ್ಲಾ ಪ್ರವಾಸ ಇಂತಿವೆ. ಜುಲೈ 7 ರಂದು 7 ಗಂಟೆಗೆ ಮಂಗಳೂರಿಗೆ ಆಗಮಿಸಿ ವಾಸ್ತವ್ಯ, ಜುಲೈ 8 ರಂದು ಪೂರ್ವಾಹ್ನ 11.30 ಗಂಟೆಗೆ ಪುತ್ತೂರಿನಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಂಗಳೂರಿನಲ್ಲಿ ವಾಸ್ತವ್ಯ. ಜುಲೈ 9 ರಂದು 3 ಗಂಟೆಗೆ ಮಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ತೆರಳುವರು.

ಕೇಂದ್ರ ಸಚಿವರ ಪ್ರವಾಸ Read More »

ಕರಾವಳಿ

ದೀನ್ ದಯಾಳ್ ಸ್ಪರ್ಶ್ ಯೋಜನೆ

(ನ್ಯೂಸ್ ಕಡಬ) newskadaba.com,ಜು.06. ಅಂಚೆ ಇಲಾಖೆಯು ದೀನ್ ದಯಾಳ್ ಸ್ಪರ್ಶ್ ಯೋಜನೆಯಡಿ 6ನೇ ತರಗತಿಯಿಂದ 9ನೇ ತರಗತಿ ಓದುತ್ತಿರುವ ಶಾಲಾ ವಿದ್ಯಾರ್ಥಿಗಳಿಗೆ ಪಿಲೇಟಲಿ (ಅಂಚೆ ಸಂಗ್ರಹಣೆ) ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಕ್ವಿಜ್‍ನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳಿಗೆ ರೂ. 6000/- ನಗದು ಬಹುಮಾನವನ್ನು ಘೋಷಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಜುಲೈ 20 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರು 575002 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.    

ದೀನ್ ದಯಾಳ್ ಸ್ಪರ್ಶ್ ಯೋಜನೆ Read More »

ಕರಾವಳಿ
Scroll to Top