ಕಡಬ: ದನದ ಕೊಟ್ಟಿಗೆ ಕುಸಿತ- ದನ ಪಾರು

(ನ್ಯೂಸ್ ಕಡಬ) newskadaba.com ಕಡಬ,ಜೂ.11.  ದನದ ಕೊಟ್ಟಿಗೆಂಯಿಂದ ವಿಪರೀತ ಮಳೆಯಿಂದ ಕುಸಿದು ಬಿದ್ದು ದನವೊಂದು ಅದೃಷ್ಟವಶಾತ್ ಪಾರಾದ ಘಟನೆ ಮಂಗಳವಾರ ನಡೆದಿದೆ.

ನೂಜಿಬಾಳ್ತಿಲ ಗ್ರಾ.ಪಂ ಗೊಳಪಟ್ಟ ರೆಂಜಿಲಾಡಿ ಗ್ರಾಮದ ಎನ್ನಾಜೆ ಕುಸುಮಾದರ ಎಂಬವರ ದನದ ಕೊಟ್ಟಿಗೆಯೊಂದು ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ವಿಪರೀತ ಮಳೆಯಿಂದಾಗಿ ಕುಸಿದು ಬಿದ್ದು ಕೊಟ್ಟಿಗೆಯೊಳಗಿದ್ದ ಹಸುವೊಂದು ಒದ್ದಾಡುತ್ತಿತ್ತು ಮನೆಯಲ್ಲಿ ಯಾರೂ ಇಲ್ಲದ ಕಾರಣ ಕೊಟ್ಟಿಗೆ ಬೀಳುವ ಶಬ್ದ ಕೇಳಿ ಹತ್ತಿರದ ಜಯರಾಮ ಎಂಬವರು ರಕ್ಷಿಸಿದ್ದಾರೆ. ನಷ್ಟದ ಬಗ್ಗೆ ಕಂದಾಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

 

 

Scroll to Top