newskadaba

ಫಲಾನುಭವಿಗಳ ಆಯ್ಕೆ ತ್ವರಿತವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಜೂ. 21. ವಿವಿಧ ನಿಗಮಗಳ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಸಂಬಂಧಪಟ್ಟ ಇಲಾಖೆಗಳು ತ್ವರಿತವಾಗಿ ಪೂರ್ಣಗೊಳಿಸಿ ಸೌಲಭ್ಯವನ್ನು ಮಂಜೂರು ಮಾಡಬೇಕೆಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸೂಚಿಸಿದ್ದಾರೆ. ಅವರು ಶುಕ್ರವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫಲಾನುಭವಿಗಳ ದಾಖಲೆ ಪರಿಶೀಲನೆ, ಸ್ಥಳ ಪರಿಶೀಲನೆ, ಮತ್ತಿತರ ಪ್ರಕ್ರಿಯೆಗಳನ್ನು ವಿಳಂಬವಾಗಿ ನಡೆಸುವುದು ಸರಿಯಲ್ಲ. ಇದರಿಂದ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯಗಳು ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಅಗತ್ಯವಿದ್ದರೆ ಮಾತ್ರ […]

ಫಲಾನುಭವಿಗಳ ಆಯ್ಕೆ ತ್ವರಿತವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ

ಮೀನುಗಾರನ ಅದೃಷ್ಟ ಬದಲಾಯಿಸಿದ ಮೀನು..!

(ನ್ಯೂಸ್ ಕಡಬ) newskadaba.com ಜೂ. 21. ಮೀನು ಹಿಡಿಯಲೆಂದು ಬಲೆ ಬೀಸಿದ ಮೀನುಗಾರನಿಗೆ ಸಿಕ್ಕಿದ ತಿಲಿಯಾ ಭೋಮಾ ಹೆಸರಿನ ಮೀನುಗಳಿಂದ ಒಡಿಶಾದ ಬಾಲಸೋರ್‌ನ ನಾನಿ ಗೋಪಾಲ್‌ ಎನ್ನುವ ಮೀನುಗಾರರನ ಬಾಳಲ್ಲಿ ಅದೃಷ್ಟ ಒಲಿದಿದೆ. ಅಷ್ಟಕ್ಕೂ ಈ ಮೀನು ಈ ಮೀನುಗಾರ ಬಲೆಗೆ ಬಿದ್ದಿರುವುದು ಒಂದೆರಡಲ್ಲ ಭರ್ಜರಿ 29 ಮೀನುಗಳು. ಪ್ರತಿ ಮೀನು ಬರೋಬ್ಬರಿ 20 ಕೆಜಿಗಿಂತ ಹೆಚ್ಚು ತೂಗುತ್ತದೆ. ಈ ಮೀನುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ಇವುಗಳನ್ನು ಖರೀದಿ ಮಾಡಲು ವ್ಯಾಪಾರಿಗಳು ಭಾರೀ ಪೈಪೋಟಿ ಮಾಡುತ್ತಾರೆ. ಅಂದ

ಮೀನುಗಾರನ ಅದೃಷ್ಟ ಬದಲಾಯಿಸಿದ ಮೀನು..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಕಲಿ ನೀಟ್ ಅಂಕಪಟ್ಟಿ ಹಗರಣ ಬಯಲು

(ನ್ಯೂಸ್ ಕಡಬ) newskadaba.com ಜೂ. 21. ನೀಟ್ ಅಂಕಪಟ್ಟಿಗಾಗಿ ವಿದ್ಯಾರ್ಥಿಯೋರ್ವನಿಂದ ಹಣ ಪಡೆದು ಆನ್‌ಲೈನ್ ಮೂಲಕ ನಕಲಿ ನೀಟ್ (NEET) ಅಂಕಪಟ್ಟಿ ನೀಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ವರದಿಯ ಪ್ರಕಾರ, ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಉಡುಪಿಯ ರೋಶನ್ ಶೆಟ್ಟಿ ಎಂಬವರ ಮಗ ರೋನಕ್ ಶೆಟ್ಟಿ ಎಂಬಾತ ಇತ್ತೀಚೆಗೆ ಎನ್.ಟಿ.ಎ. ನಡೆಸಿದ ನೀಟ್ ಪರೀಕ್ಷೆಯನ್ನೂ ಬರೆದಿದ್ದ. ಆದರೆ, ನೀಟ್ ಪರೀಕ್ಷಾ ತಯಾರಿ ವೇಳೆ ಈತ ಎಡಿಟಿಂಗ್ ಮಾಸ್ಟರ್

ನಕಲಿ ನೀಟ್ ಅಂಕಪಟ್ಟಿ ಹಗರಣ ಬಯಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಪೋತಾಸನ ಭಂಗಿಯಲ್ಲಿ ಬುಕ್ ಆಫ್ ರೆಕಾರ್ಡ್ ಬರೆದ ಮಂಗಳೂರಿನ ಶರಣ್ಯ ಶರತ್..!

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 21. ನಗರದ ಫಲ್ನೀರ್ ನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ಯೋಗಾಸನದಲ್ಲಿ ದಾಖಲೆ ಬರೆದಿದ್ದಾಳೆ.   ಶರಣ್ಯ ತನ್ನ ಎಂಟನೇ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದಾಳೆ. ಇದರೊಂದಿಗೆ ಸದ್ಯ ತಮಿಳುನಾಡಿನ ಹರಿಣಿತ ಬಿ.ಎಸ್. ಇವರ ಹೆಸರಿನಲ್ಲಿದ್ದ 15 ನಿಮಿಷದ ಕಪೋತಾಸನದ ದಾಖಲೆಯನ್ನು ಮುರಿದು

ಕಪೋತಾಸನ ಭಂಗಿಯಲ್ಲಿ ಬುಕ್ ಆಫ್ ರೆಕಾರ್ಡ್ ಬರೆದ ಮಂಗಳೂರಿನ ಶರಣ್ಯ ಶರತ್..! Read More »

ಕರಾವಳಿ, ಕರ್ನಾಟಕ

ಮುಂದೂಡಲಾಗಿದ್ದ ಸಚಿವ ಸಂಪುಟ ಸಭೆ ಜುಲೈ 3ಕ್ಕೆ ಫಿಕ್ಸ್..!

(ನ್ಯೂಸ್ ಕಡಬ) newskadaba.com ಜೂ. 21. ಜೂನ್ ತಿಂಗಳಲ್ಲಿ ನಂದಿ ಬೆಟ್ಟದಲ್ಲಿ ನಡೆಯಬೇಕಾಗಿದ್ದ ರಾಜ್ಯ ಸಚಿವ ಸಂಪುಟ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಇದೀಗ ಆ ಸಭೆಯನ್ನು ಜುಲೈ 3 ರಂದು ನಡೆಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಆಗಸ್ಟ್ 11 ರಿಂದ ವಿಧಾನ ಮಂಡಲದ ಮುಂಗಾರು ಅಧಿವೇಶನ ನಡೆಯಲಿದ್ದು, ಎರಡು ವಾರಗಳ ಕಾಲ ಅದು ನಡೆಯಲಿದೆ.

ಮುಂದೂಡಲಾಗಿದ್ದ ಸಚಿವ ಸಂಪುಟ ಸಭೆ ಜುಲೈ 3ಕ್ಕೆ ಫಿಕ್ಸ್..! Read More »

ಕರ್ನಾಟಕ

ಇನ್ಮುಂದೆ ದ್ವಿಚಕ್ರ ವಾಹನಗಳಿಗೆ ABS ಮತ್ತು ಡಬಲ್ ಹೆಲ್ಮೆಟ್ ಕಡ್ಡಾಯ..!

(ನ್ಯೂಸ್ ಕಡಬ) newskadaba.com ಜೂ. 21. ದೇಶದಲ್ಲಿ ದ್ವಿಚಕ್ರ ವಾಹನಗಳ ಸುರಕ್ಷತೆಯನ್ನು ಹೆಚ್ಚಿಸಲು ಸಾರಿಗೆ ಸಚಿವಾಲಯವು ಮಹತ್ತರ ಕ್ರಮವೊಂದನ್ನು ತೆಗೆದುಕೊಂಡಿದ್ದು, ಇನ್ನುಮುಂದೆ ಎಲ್ಲಾ ಹೊಸ ದ್ವಿಚಕ್ರ ವಾಹನಗಳಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಮತ್ತು ಎರಡು ಹೆಲ್ಮೆಟ್‌ಗಳನ್ನು ಕಡ್ಡಾಯಗೊಳಿಸುವ ನಿಯಮಕ್ಕೆ ಸಚಿವಾಲಯವು ಅನುಮೋದನೆ ನೀಡಿದೆ.   ಈ ನಿಯಮದ ಪ್ರಕಾರ, 125 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯವಿರುವ ಎಲ್ಲಾ ದ್ವಿಚಕ್ರ ವಾಹನಗಳಿಗೆ ABS ಕಡ್ಡಾಯವಾಗಿರುತ್ತದೆ. ABS ಒಂದು ಸುರಕ್ಷತಾ ವೈಶಿಷ್ಟ್ಯವಾಗಿದ್ದು, ಇದು ತುರ್ತು ಬ್ರೇಕಿಂಗ್ ಸಂದರ್ಭದಲ್ಲಿ ಚಕ್ರಗಳು

ಇನ್ಮುಂದೆ ದ್ವಿಚಕ್ರ ವಾಹನಗಳಿಗೆ ABS ಮತ್ತು ಡಬಲ್ ಹೆಲ್ಮೆಟ್ ಕಡ್ಡಾಯ..! Read More »

ರಾಷ್ಟ್ರೀಯ ನ್ಯೂಸ್

ಕಡಬ: ಹಾವನ್ನು ನೋಡಿ ಹಠಾತ್ ಬ್ರೇಕ್ ಹಾಕಿದ ಆಟೋ ಚಾಲಕ ಪ್ರಯಾಣಿಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಜೂ. 21. ರಸ್ತೆ ಅಡ್ಡ ದಾಟುತ್ತಿದ್ದ ಹಾವನ್ನು ನೋಡಿ ರಿಕ್ಷಾ ಚಾಲಕನೋರ್ವ ಹಠಾತ್ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಚರಂಡಿಗೆ ಬಿದ್ದು ಓರ್ವ ಪ್ರಯಾಣಿಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಶಾಂತಿಮೊಗರು ಸಮೀಪದ ಕೊಂಡಾಡಿ ಎಂಬಲ್ಲಿ ನಡೆದಿದೆ.   ಗಾಯಗೊಂಡವರನ್ನು ಪೆರಾಬೆ ಗ್ರಾಮದ ಸಾಮೆತಡ್ಕ ನಿವಾಸಿ ನಯಾಝ್ ಎಂದು ಗುರುತಿಸಲಾಗಿದೆ. ಆಲಂಕಾರಿನಿಂದ ಶಾಂತಿಮೊಗರು ಕಡೆಗೆ ಮಹಮ್ಮದ್ ಮುಸ್ತಾಫ ಎಂಬವರು ರಿಕ್ಷಾ ಚಲಾಯಿಸಿಕೊಂಡು ಬಂದಿದ್ದು ಕೊಂಡಾಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಹಾವೊಂದು ರಸ್ತೆಯಲ್ಲಿ

ಕಡಬ: ಹಾವನ್ನು ನೋಡಿ ಹಠಾತ್ ಬ್ರೇಕ್ ಹಾಕಿದ ಆಟೋ ಚಾಲಕ ಪ್ರಯಾಣಿಕನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಆನ್ ಲೈನ್ ವಂಚನೆ- ಲಿಂಕ್ ಕ್ಲಿಕ್ ಮಾಡಿ 27 ಲಕ್ಷ ರೂ.ಕಳೆದುಕೊಂಡ ಯುವಕ

(ನ್ಯೂಸ್ ಕಡಬ) newskadaba.com ಜೂ. 21. ಟೆಲಿಗ್ರಾಂ ಖಾತೆಗೆ ಬಂದ ಸಂದೆಶವನ್ನು ನಂಬಿದ ಯುವಕನೋರ್ವ 27 ಲಕ್ಷ ಕಳೆದುಕೊಂಡ ಘಟನೆ ಉಡುಪಿ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ.   ವಂಚನೆಗೊಳಗಾದವರನ್ನು ಆಶೀಕ್(33) ಎಂದು ಗುರುತಿಸಲಾಗಿದೆ. ಇವರ ಟೆಲಿಗ್ರಾಂ ಖಾತೆಗೆ ಮೇ.25 ರಂದು ನೇಹಾ ಕುಮಾರ್ ಎಂಬವರ ಖಾತೆಯಿಂದ ವರ್ಕ್ ಪ್ರಮ್ ಹೋಂ ಪಾರ್ಟ್ ಟೈಮ್ ಜಾಬ್ ಬಗ್ಗೆ ಮತ್ತು ಒನ್ ಟ್ರಾವೆಲ್ ಹೊಟೇಲ್ ಬುಕ್ಕಿಂಗ್ ಆನ್‌ಲೈನ್ ವೆಬ್‌ಸೈಟ್‌ ನಲ್ಲಿ ಹೊಟೆಲ್ ಗೆ ರಿವಿವ್ಯೂ ಹಾಕುವ ಬಗ್ಗೆ ಸಂದೇಶ ಬಂದಿದ್ದು,

ಆನ್ ಲೈನ್ ವಂಚನೆ- ಲಿಂಕ್ ಕ್ಲಿಕ್ ಮಾಡಿ 27 ಲಕ್ಷ ರೂ.ಕಳೆದುಕೊಂಡ ಯುವಕ Read More »

ಕರಾವಳಿ, ಕ್ರೈಮ್ ನ್ಯೂಸ್

ನೀಟ್ ಸೂಪರ್‌ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆ ಲಕ್ನೋದ ಕಿಂಗ್ ಜಾರ್ಜ್ ಯುನಿವರ್ಸಿಟಿಯಲ್ಲಿ ಸೀಟು ಗಿಟ್ಟಿಸಿದ ಕಡಬದ ಯುವ ವೈದ್ಯ ಡಾ. ಅವಿನ್

(ನ್ಯೂಸ್ ಕಡಬ) newskadaba.com ಕಡಬ, ಜೂ.20. ಇತ್ತೀಚೆಗೆ ನಡೆದ ನೀಟ್ ಸೂಪರ್ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕಡಬದ ಯುವ ವೈದ್ಯರೋರ್ವರು ದೇಶದ ಪ್ರತಿಷ್ಠಿತ ಲಕ್ನೋ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಸರ್ಕಾರಿ ಕೋಟಾದಡಿ‌ ಸೀಟು ಗಿಟ್ಟಿಸಿಕೊಂಡಿದ್ದಾರೆ.   ಕಡಬ ತಾಲೂಕಿನ ಎಡಮಂಗಲ ಗ್ರಾಮದ ದೋಣಿಮನೆ ಶ್ರೀ ದುಷ್ಯಂತ ಗೌಡ ಮತ್ತು ಶ್ರೀಮತಿ ಪ್ರೇಮ ದಂಪತಿಯ ಪುತ್ರ ಯುವ ವೈದ್ಯ ಡಾ. ಅವಿನ್ ದೋಣಿಮನೆ, ನೀಟ್ ಪರೀಕ್ಷೆ ಬರೆದು MCh ನ್ಯೂರೋ ಸರ್ಜರಿ (Brain &

ನೀಟ್ ಸೂಪರ್‌ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆ ಲಕ್ನೋದ ಕಿಂಗ್ ಜಾರ್ಜ್ ಯುನಿವರ್ಸಿಟಿಯಲ್ಲಿ ಸೀಟು ಗಿಟ್ಟಿಸಿದ ಕಡಬದ ಯುವ ವೈದ್ಯ ಡಾ. ಅವಿನ್ Read More »

ರಾಷ್ಟ್ರೀಯ ನ್ಯೂಸ್

ಚಾಕೊಲೇಟ್ ಮಾದರಿಯ ಮಾದಕ ದ್ರವ್ಯ ಮಾರಾಟ- ವ್ಯಕ್ತಿಯ ಬಂಧನ

(ನ್ಯೂಸ್ ಕಡಬ) newskadaba.com ಜೂ. 20. ಪಾನ್ ಶಾಪ್ ಒಂದರಲ್ಲಿ ವ್ಯಕ್ತಿಯೊಬ್ಬ ಚಾಕಲೇಟ್ ನಂತೆ ಕಾಣುವ ಮಾದಕ ದ್ರವ್ಯದ ಸುವಾಸನೆಯುಳ್ಳ ಚಾಕಲೇಟ್ ಮಾರಾಟ ನಡೆಸುತ್ತಿದ್ದ ವೇಳೆ ಮಂಗಳೂರು ಉಪವಿಭಾಗದ ಅಬಕಾರಿ ಪೊಲೀಸರು ದಾಳಿ ನಡೆಸಿ ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಂಧಿತನನ್ನು ಉತ್ತರ ಪ್ರದೇಶ ಮೂಲದ ಸುಜಿತ್ ಕುಮಾರ್ ಎಂದು ಗುರುತಿಸಲಾಗಿದೆ. ಆತನಿಂದ 303 ಗ್ರಾಂ. ಬಮ್ ಬಮ್ ಚಾರ್ ಮಿನಾರ್ ಹೆಸರಿನ ಮಾದಕ ದ್ರವ್ಯ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಎನ್.ಡಿ.ಪಿ.ಎಸ್ ಆಕ್ಟ್ 1985 ಕಲಂ 8(c) 20(b)(11)(A)

ಚಾಕೊಲೇಟ್ ಮಾದರಿಯ ಮಾದಕ ದ್ರವ್ಯ ಮಾರಾಟ- ವ್ಯಕ್ತಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top