ಆನ್ ಲೈನ್ ವಂಚನೆ- ಲಿಂಕ್ ಕ್ಲಿಕ್ ಮಾಡಿ 27 ಲಕ್ಷ ರೂ.ಕಳೆದುಕೊಂಡ ಯುವಕ

(ನ್ಯೂಸ್ ಕಡಬ) newskadaba.com ಜೂ. 21. ಟೆಲಿಗ್ರಾಂ ಖಾತೆಗೆ ಬಂದ ಸಂದೆಶವನ್ನು ನಂಬಿದ ಯುವಕನೋರ್ವ 27 ಲಕ್ಷ ಕಳೆದುಕೊಂಡ ಘಟನೆ ಉಡುಪಿ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ.

 

ವಂಚನೆಗೊಳಗಾದವರನ್ನು ಆಶೀಕ್(33) ಎಂದು ಗುರುತಿಸಲಾಗಿದೆ. ಇವರ ಟೆಲಿಗ್ರಾಂ ಖಾತೆಗೆ ಮೇ.25 ರಂದು ನೇಹಾ ಕುಮಾರ್ ಎಂಬವರ ಖಾತೆಯಿಂದ ವರ್ಕ್ ಪ್ರಮ್ ಹೋಂ ಪಾರ್ಟ್ ಟೈಮ್ ಜಾಬ್ ಬಗ್ಗೆ ಮತ್ತು ಒನ್ ಟ್ರಾವೆಲ್ ಹೊಟೇಲ್ ಬುಕ್ಕಿಂಗ್ ಆನ್‌ಲೈನ್ ವೆಬ್‌ಸೈಟ್‌ ನಲ್ಲಿ ಹೊಟೆಲ್ ಗೆ ರಿವಿವ್ಯೂ ಹಾಕುವ ಬಗ್ಗೆ ಸಂದೇಶ ಬಂದಿದ್ದು, ರಿವಿವ್ಯೂ ಹಾಕುವುದಕ್ಕೆ ರೂ. 500 ರಿಂದ ರೂ 4500/- ರವರೆಗೆ ಕಮಿಷನ್ ನೀಡುವುದಾಗಿ ತಿಳಿಸಿದ್ದರು.

 

ಅದರಂತೆ ವೆಬ್ಸೈಟ್ ಲಿಂಕ್ ಗೆ ಮೊಬೈಲ್ ಸಂಖ್ಯೆ ಯನ್ನು ಹಾಕಿ ರಿಜಿಸ್ಟ್‌ರ್ ಮಾಡಿ, ನಂತರ ಅವರು ನೀಡಿದ ಟಾಸ್ಕ್‌ ಗಳನ್ನು ಮುಗಿಸಿ, ಅವರು ತಿಳಿಸಿದ ಬೇರೆ ಬೇರೆ ಖಾತೆಗಳಿಗೆ ಒಟ್ಟು ರೂ 27,93,340/- ಮೊತ್ತವನ್ನು ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top