newskadaba

ಶಾಲಾ ಕಾಲೇಜುಗಳಲ್ಲಿ ಮಾದಕ ವ್ಯಸನದ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಜೂ. 27. ಶಾಲಾ-ಕಾಲೇಜುಗಳ ಮಕ್ಕಳು ಮಾದಕ ದ್ರವ್ಯಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮಕ್ಕಳಿಗೆ ಮುಂದೆ ಸಂಭವಿಸುವ ಅನಾಹುತಗಳ ಅರಿವು ಮೂಡಿಸಲು ಅಧಿಕಾರಿಗಳು ಹೆಚ್ಚಿನ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಸೂಚಿಸಿದರು. ಅವರು ಗುರುವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ನಾರ್ಕೋ ಕೋ ಆರ್ಡಿನೇಷನ್ ಸೆಂಟರ್‍ ನ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯಗಳ ಆಕರ್ಷಣೆಗೊಳಗಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. […]

ಶಾಲಾ ಕಾಲೇಜುಗಳಲ್ಲಿ ಮಾದಕ ವ್ಯಸನದ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

(ನ್ಯೂಸ್ ಕಡಬ) newsmadaba.com ನವದೆಹಲಿ ಜೂ. 27. ಭಾರತದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳಿದ್ದ ನಾಸಾದ ಸ್ಪೇಸ್‌ ಎಕ್ಸ್‌ ನ ಫಾಲ್ಕನ್‌ ನೌಕೆಯು ಗುರುವಾರದಂದು ಸಂಜೆ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿರುವುದಾಗಿ ನಾಸಾ ವರದಿ ಮಾಡಿದೆ. ಬುಧವಾರದಂದು ಮಧ್ಯಾಹ್ನ ಭಾರತೀಯ ಕಾಲಮಾನ 12.01 ಗಂಟೆಗೆ ನೌಕೆಯು ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್‌ ಸೆಂಟರ್‌ ನಿಂದ ಆಕಾಶಕ್ಕೆ ಚಿಮ್ಮತ್ತು. 10 ನಿಮಿಷಗಳ ಬಳಿಕ ನೌಕೆಯು ಭೂಮಿಯನ್ನು ಸುತ್ತಲಾರಂಭಿಸಿದ್ದು, ಸುಮಾರು 28 ಗಂಟೆಗಳ ಕಾಲ ಪ್ರಯಾಣ ಮಾಡಿದ ಬಳಿಕ ಗುರುವಾರದಂದು

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು Read More »

ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ

ದ್ವಿಚಕ್ರ ವಾಹನಗಳಿಗೆ ಟೋಲ್ ನಲ್ಲಿ ಸಂಪೂರ್ಣ ವಿನಾಯಿತಿ-ಸಚಿವ ಗಡ್ಕರಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 27. ದ್ವಿಚಕ್ರ ವಾಹನಗಳ ಮೇಲೆ ಟೋಲ್ ತೆರಿಗೆ ವಿಧಿಸುವ ಬಗ್ಗೆ ಕೆಲವು ದಾರಿತಪ್ಪಿಸುವ ಸುದ್ದಿಗಳು ಹರಿದಾಡುತ್ತಿದ್ದು, ಅಂತಹ ಯಾವುದೇ ನಿರ್ಧಾರವನ್ನು ಪ್ರಸ್ತಾಪಿಸಲಾಗಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ಅವರು, ದ್ವಿಚಕ್ರ ವಾಹನಗಳಿಗೆ ಟೋಲ್‌ನಲ್ಲಿ ಸಂಪೂರ್ಣ ವಿನಾಯಿತಿ ಮುಂದುವರಿಯಲಿದೆ. ಸತ್ಯವನ್ನು ತಿಳಿಯದೆ ದಾರಿತಪ್ಪಿಸುವ

ದ್ವಿಚಕ್ರ ವಾಹನಗಳಿಗೆ ಟೋಲ್ ನಲ್ಲಿ ಸಂಪೂರ್ಣ ವಿನಾಯಿತಿ-ಸಚಿವ ಗಡ್ಕರಿ Read More »

ರಾಷ್ಟ್ರೀಯ ನ್ಯೂಸ್

ಡ್ರಗ್ಸ್ ಸೇವಿಸುವ ಕಲಾವಿದರು ಚಿತ್ರರಂಗದಿಂದ ಬ್ಯಾನ್

(ನ್ಯೂಸ್ ಕಡಬ) newsmadaba.com ಜೂ. 27. ಇತ್ತೀಚಿನ‌ ದಿನಗಳಲ್ಲಿ ಸಿನಿಮಾರಂಗದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿ ಕೇಳಿ ಬರುತ್ತಿದ್ದು, ಕಲಾವಿದರು, ನಿರ್ದೇಶಕರು ಕೂಡ ಡ್ರಗ್ಸ್‌ ಸೇವನೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಈಗಾಗಲೇ ಮಾಲಿವುಡ್‌ ಚಿತ್ರರಂಗದಲ್ಲಿ ಖ್ಯಾತ ನಟ ಶೈನ್ ಟಾಮ್, ನಿರ್ದೇಶಕರಾದ ಖಾಲಿದ್ ರೆಹಮಾನ್, ಅಶ್ರಫ್ ಹಮ್ಜಾ ಅವರನ್ನು ಡ್ರಗ್ಸ್‌ ಸೇವನೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿತ್ತು. ಇದಲ್ಲದೇ ಇತ್ತೀಚೆಗೆ ಕಾಲಿವುಡ್‌ ಶ್ರೀಕಾಂತ್‌, ನಟ ಕೃಷ್ಣರನ್ನು ಡ್ರಗ್ಸ್‌ ಸೇವನೆ ಆರೋಪದಲ್ಲಿ ಬಂಧಿಸಲಾಗಿದೆ. ಹೀಗಾಗಿ ಮಾಲಿವುಡ್‌ ಚಿತ್ರರಂಗ ಮಾದಕ ದ್ರವ್ಯ

ಡ್ರಗ್ಸ್ ಸೇವಿಸುವ ಕಲಾವಿದರು ಚಿತ್ರರಂಗದಿಂದ ಬ್ಯಾನ್ Read More »

ಸಿನಿಮಾ

ತಿರುಪತಿ ಟ್ರಸ್ಟ್ ಗೆ ಒಂದು ಕೋಟಿ ರೂ. ದೇಣಿಗೆ ನೀಡಿದ ಗೂಗಲ್ ಉಪಾಧ್ಯಕ್ಷ..!

(ನ್ಯೂಸ್ ಕಡಬ) newskadaba.com ಜೂ. 27. ತಿರುಮಲ ತಿರುಪತಿ ದೇವಸ್ಥಾನದ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್‌ ಗೆ 1 ಕೋಟಿ ರೂ. ದೇಣಿಗೆಯನ್ನು ಗೂಗಲ್‌ ಉಪಾಧ್ಯಕ್ಷ ತೋಟ ಚಂದ್ರಶೇಖರ್‌ ಅವರು ಗುರುವಾರದಂದು ಸಮರ್ಪಿಸಿದ್ದಾರೆ.   ತಿರುಮಲದಲ್ಲಿರುವ ದೇಗುಲದ ಪ್ರಧಾನ ಕಚೇರಿಯಲ್ಲಿ ಈ ಚೆಕ್‌ನ್ನು ಟಿಟಿಡಿ ಮುಖ್ಯಸ್ಥ ಬಿ.ಆರ್‌.ನಾಯ್ಡು ಅವರಿಗೆ ಚಂದ್ರಶೇಖರ್‌ ಅವರು ಹಸ್ತಾಂತರಿಸಿದ್ದಾರೆ.

ತಿರುಪತಿ ಟ್ರಸ್ಟ್ ಗೆ ಒಂದು ಕೋಟಿ ರೂ. ದೇಣಿಗೆ ನೀಡಿದ ಗೂಗಲ್ ಉಪಾಧ್ಯಕ್ಷ..! Read More »

ರಾಷ್ಟ್ರೀಯ ನ್ಯೂಸ್

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಿರಂತರ ಭೂಕುಸಿತ-ಧಾರಣಾ ಸಾಮರ್ಥ್ಯಕ್ಕೆ ಅಧ್ಯಯನ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಜೂ. 26. ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯದ ಅಧ್ಯಯನಕ್ಕೆ ಅರಣ್ಯ ಪಡೆ ಮುಖ್ಯಸ್ಥರ ನೇತೃತ್ವದಲ್ಲಿ ಸರಕಾರವು ಸಮಿತಿಯೊಂದನ್ನು ರಚನೆ ಮಾಡಿದ್ದು, 6 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.   ವಿಕಾಸಸೌಧದ ಕಚೇರಿಯಲ್ಲಿ ಬುಧವಾರದಂದು ರಾಜ್ಯ ಜೀವವೈವಿಧ್ಯ ಮಂಡಳಿ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಭೂಕುಸಿತ ಸಂಭವಿಸಿ ಜೀವಹಾನಿ ಉಂಟಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಿರಂತರ ಭೂಕುಸಿತ-ಧಾರಣಾ ಸಾಮರ್ಥ್ಯಕ್ಕೆ ಅಧ್ಯಯನ ಸಮಿತಿ ರಚನೆ Read More »

ಕರ್ನಾಟಕ

ಬೈಕ್ ಟ್ಯಾಕ್ಸಿ ನಿಷೇಧ ರದ್ದುಗೊಳಿಸುವಂತೆ ಕೋರಿ ಸಾರಿಗೆ ಸಚಿವರಿಗೆ ಮನವಿ

(ನ್ಯೂಸ್ ಕಡಬ) newskadaba.com ಜೂ. 26. ರಾಜ್ಯದಲ್ಲಿ ಈಗಾಗಲೇ ಜೂನ್ 16 ರಿಂದ ಬೈಕ್ ಟ್ಯಾಕ್ಸಿಗಳ ಮೇಲೆ ನಿಷೇಧ ಹೇರಿ ಆದೇಶಿಸಲಾಗಿದ್ದು, ಇದೀಗ ನಿಷೇಧವನ್ನು ರದ್ದುಗೊಳಿಸುವಂತೆ ಬೈಕ್ ಟ್ಯಾಕ್ಸಿ ಸಂಘಟನೆಯವರು ಕರ್ನಾಟಕ ಸಾರಿಗೆ ಸಚಿವರಿ ರಾಮಲಿಂಗಾ ರೆಡ್ಡಿಗೆ ಮನವಿ ಸಲ್ಲಿಸಿದ್ದಾರೆ. ಪತ್ರದಲ್ಲಿ ಸಾವಿರಾರು ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ ಎಂದು ತಿಳಿಸಿದ್ದಾರೆ. ಹಲವಾರು ಉದ್ಯೋಗಿಗಳು ಈ ಮೂಲಕ 30 ರಿಂದ 35 ಸಾವಿರದ ತನಕ ಆದಾಯ ಗಳಿಸಿ ಅವರ ಕುಟುಂಬಕ್ಕೆ ನೆರವಾಗಿದ್ದರು. ಈ ರೀತಿಯಾಗಿ ಬೈಕ್ ಟ್ಯಾಕ್ಸಿಗಳಲ್ಲಿ ಉದ್ಯೋಗ

ಬೈಕ್ ಟ್ಯಾಕ್ಸಿ ನಿಷೇಧ ರದ್ದುಗೊಳಿಸುವಂತೆ ಕೋರಿ ಸಾರಿಗೆ ಸಚಿವರಿಗೆ ಮನವಿ Read More »

ಕರ್ನಾಟಕ

ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ಸೂರ್ಯಕುಮಾರ್ ಯಾದವ್..!

(ನ್ಯೂಸ್ ಕಡಬ) newskadaba.com ಜೂ. 26. ಭಾರತ ಕ್ರಿಕೆಟ್ ತಂಡದ ಟಿ-20 ನಾಯಕ ಸೂರ್ಯಕುಮಾರ್ ಯಾದವ್ ವಿರಾಮದಲ್ಲಿದ್ದಾರೆ. ಇತ್ತೀಚೆಗಷ್ಟೆ ಸೂರ್ಯಕುಮಾರ್ ಯಾದವ್ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದೀಗ ಹರ್ನಿಯಾಗೆ ಯಶಸ್ವಿ ಶಸ್ತ್ರಚಿಕಿತ್ಸೆ ಆಗಿದೆ ಎಂಬ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.   ಶಸ್ತ್ರಚಿಕಿತ್ಸೆಯಿಂದಾಗಿ ಅವರು ಮುಂಬರುವ ಬಾಂಗ್ಲಾದೇಶ ಪ್ರವಾಸಕ್ಕೆ ಹೋಗುವ ಸಾಧ್ಯತೆ ಕಡಿಮೆಯಿದ್ದು, ಸಂಪೂರ್ಣ ಗುಣಮುಖವಾಗಲು ಅವರಿಗೆ 6 ರಿಂದ 12 ವಾರಗಳು ಬೇಕಾಗುತ್ತದೆ. ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2026

ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ಸೂರ್ಯಕುಮಾರ್ ಯಾದವ್..! Read More »

ಕ್ರೀಡಾ ನ್ಯೂಸ್

ರೈಲ್ವೇ ಹಳಿಗಳ ಮೇಲೆ ಕಾರು ಓಡಿಸಿದ ಮಹಿಳೆ- ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಜೂ. 26. ಮಹಿಳೆಯೊಬ್ಬರು ರೈಲ್ವೆ ಹಳಿಯ ಮೇಲೆ ಕಾರನ್ನು ಚಲಾಯಿಸಿ, ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಂಕರಪಲ್ಲಿ ಬಳಿ ನಡೆದಿದೆ. ಸದ್ಯ ವಿಡಿಯೋ ವೈರಲ್ ಆಗಿದೆ.   ವೀಡಿಯೊದಲ್ಲಿ ಕಾರನ್ನು ರೈಲ್ವೆ ಹಳಿಗಳ ಉದ್ದಕ್ಕೂ ಓಡಿಸುವುದನ್ನು ತೋರಿಸಲಾಗಿದೆ. ಮೂಲಗಳ ಪ್ರಕಾರ, ಮಹಿಳೆಯೋರ್ವರು ಕಾರನ್ನು ರೈಲ್ವೇ ಹಳಿಗಳುದ್ದಕ್ಕೂ ಚಲಾಯಿಸುತ್ತಿದ್ದರು, ರೈಲ್ವೆ ಸಿಬ್ಬಂದಿ ಹಲವಾರು ಸಿಗ್ನಲ್‌ ಗಳನ್ನು ನೀಡಿದ್ದರೂ ಅವರು ನಿಲ್ಲಿಸಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು-ಹೈದರಾಬಾದ್ ರೈಲು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು

ರೈಲ್ವೇ ಹಳಿಗಳ ಮೇಲೆ ಕಾರು ಓಡಿಸಿದ ಮಹಿಳೆ- ವಿಡಿಯೋ ವೈರಲ್ Read More »

ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿ ಹೊಸ 6599 ಗ್ರಂಥಾಲಯಗಳ ಸ್ಥಾಪನೆ

(ನ್ಯೂಸ್ ಕಡಬ) newskadaba.com ಜೂ. 26. ಈಗಾಗಲೇ ರಾಜ್ಯದಲ್ಲಿ ಗ್ರಂಥಾಲಯಗಳು ಡಿಜಿಟಲೀಕರಣಗೊಂಡಿದ್ದು, ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯ ಕಾರ್ಯಕ್ರಮದಡಿ ರಾಜ್ಯದ್ಯಂತ 6599 ಹೊಸ ಗ್ರಂಥಾಲಯಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ.   ಪ್ರತಿ ಗ್ರಂಥಾಲಯಕ್ಕೆ ಎರಡು ಲಕ್ಷ ಮೊತ್ತದ ತಲಾ 2,687 ಪುಸ್ತಕಗಳನ್ನು ಶೀಘ್ರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಹೊಸ ಗ್ರಂಥಾಲಯಗಳ ಸ್ಥಾಪನೆಯ ವಿನೂತನ ಯೋಜನೆ ಜಾರಿಗೆ ಬರಲಿದೆ ಎಂದು ಪ್ರಿಯಾಂಕ್ ಖರ್ಗೆ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ರಾಜ್ಯದಲ್ಲಿ ಹೊಸ 6599 ಗ್ರಂಥಾಲಯಗಳ ಸ್ಥಾಪನೆ Read More »

ಕರ್ನಾಟಕ
Scroll to Top