newskadaba

ಗುಜರಾತಿನ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ನವದೆಹಲಿ ಅ. 29: ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಎರಡು ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವರಿಗೆ 92 ವರ್ಷ ವಯಸ್ಸಾಗಿತ್ತು.     ಎದೆನೋವಿನಿಂದ ದೂರಿದ ನಂತರ ಅವರನ್ನು ಅಹಮದಾಬಾದ್‌ನ ಸ್ಟರ್ಲಿಂಗ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ಕೇಶುಭಾಯ್ ಪಟೇಲ್ 1995 ಮತ್ತು 1998 ರಿಂದ 2001 ರವರೆಗೆ ಗುಜರಾತ್ ಸಿಎಂ ಆಗಿ ಸೇವೆ ಸಲ್ಲಿಸಿದರು.ಗುಜರಾತ್ ವಿಧಾನಸಭೆಯ ಸದಸ್ಯರಾಗಿ ಆರು ಬಾರಿ […]

ಗುಜರಾತಿನ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಇನ್ನಿಲ್ಲ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸ್ಕೂಟರ್ – ಗೂಡ್ಸ್ ಟೆಂಪೋ ನಡುವೆ ಅಪಘಾತ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಅ. 29: ರಾ.ಹೆ 75ರ ಕಲಡ್ಕದಲ್ಲಿ ಸ್ಕೂಟರ್ ಮತ್ತು ಗೂಡ್ಸ್ ಟೆಂಪೋ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಬಿ.ಸಿ ರೋಡಿನ ಸಿವಿಲ್ ಇಂಜಿನಿಯರ್ ವಸಂತ ಪೂಜಾರಿ ಎಂದು ತಿಳಿದು ಬಂದಿದೆ. ಸ್ಕೂಟರ್ ಮತ್ತು ಟೆಂಪೋ ನಡುವೆ ನಡೆದ ಅಪಘಾತದಲ್ಲಿ ವಸಂತ ಪೂಜಾರಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಸ್ಕೂಟರ್ – ಗೂಡ್ಸ್ ಟೆಂಪೋ ನಡುವೆ ಅಪಘಾತ ➤ ಸವಾರ ಮೃತ್ಯು Read More »

ಕರಾವಳಿ

ಮಂಗಳೂರಿನಲ್ಲಿ ಕ್ರಿಕೆಟ್‌ ದಂಧೆ ➤ 16 ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 29. ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 16 ಮಂದಿಯನ್ನು ಮಂಗಳೂರು ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 28 ಮೊಬೈಲ್, 8 ಲಕ್ಷ ರೂಪಾಯಿ ಮೌಲ್ಯದ ಕಾರ್, 2.67 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.     ಐಪಿಎಲ್ ನಡೆಯುತ್ತಿರುವುದರಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಇದರಿಂದಾಗಿ ಮಂಗಳೂರಿನ ವಿವಿಧೆಡೆ ಕಾರ್ಯಾಚರಣೆ ನಡೆಸಲಾಗಿದ್ದು, 4 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ

ಮಂಗಳೂರಿನಲ್ಲಿ ಕ್ರಿಕೆಟ್‌ ದಂಧೆ ➤ 16 ಆರೋಪಿಗಳ ಬಂಧನ Read More »

ಕರಾವಳಿ

ಪುತ್ತೂರಿನಲ್ಲಿ ಕೆರೆಗೆ ಬಿದ್ದು ಯುವತಿ ಮೃತ್ಯು ಪ್ರಕರಣ ➤ ವಿವಾಹಿತ ಮಾಜಿ ಪ್ರಿಯತಮನಿಂದ ಕಿರುಕುಳ ಆರೋಪ

(ನ್ಯೂಸ್ ಕಡಬ) newskadaba.com ಪುತ್ತೂರು ಅ. 29: ಮಹಿಳೆಯೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಆರ್ಯಾಪು ಗ್ರಾಮದ ಸಂಪ್ಯ ಸಮೀಪದ ಕೊಲ್ಯ ಎಂಬಲ್ಲಿ ನಡೆದಿತ್ತು.ಮೃತ ಮಹಿಳೆಯನ್ನು ಸುಳ್ಯ ತಾಲೂಕಿನ ಕಲ್ಲುಗುಂಡಿ‌ ನಿವಾಸಿ ಮಧುಶ್ರೀ ಎಂದು ಗುರುತಿಸಲಾಗಿದೆ.  ಇವರ, “ಮಾಜಿ ಪ್ರಿಯಕರ ನೀಡುತ್ತಿದ್ದ ಮಾನಸಿಕ ಕಿರುಕುಳ, ಜೀವ ಬೆದರಿಕೆಯಿಂದ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ” ಆಕೆ ತನ್ನ ಡೈರಿಯಲ್ಲಿ ಬೆರೆದುಕೊಂಡಿರುವ ಆಧಾರದಲ್ಲಿ ಮತ್ತು ಆಕೆಯ ಮಾವ ನೀಡಿದ ದೂರಿನ ಆಧಾರದಲ್ಲಿ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಕೆ ಪುತ್ತೂರಿನ ಖಾಸಗಿ

ಪುತ್ತೂರಿನಲ್ಲಿ ಕೆರೆಗೆ ಬಿದ್ದು ಯುವತಿ ಮೃತ್ಯು ಪ್ರಕರಣ ➤ ವಿವಾಹಿತ ಮಾಜಿ ಪ್ರಿಯತಮನಿಂದ ಕಿರುಕುಳ ಆರೋಪ Read More »

ಕರಾವಳಿ

ಬಿಜೆಪಿ ಕಾರ್ಯಕರ್ತ, ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ ➤ ಮೂವರು ಆರೋಪಿಗಳ ಅರೇಸ್ಟ್

(ನ್ಯೂಸ್ ಕಡಬ) newskadaba.com ಫರಂಗಿಪೇಟೆ ಅ. 29: ಫರಂಗಿಪೇಟೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡ, ಪೊಟೋಗ್ರಾಫರ್ ಮೇಲೆ ತಲವಾರು ದಾಳಿ ನಡೆಸಿದ ಮೂವರನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ  ಆರೋಪಿಗಳನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಹಮ್ಮದ್ ಅರ್ಷದ್, ಅಬ್ದುಲ್ ರೆಹಮಾನ್, ಮುಹಮ್ಮದ್ ಸೈಫುದ್ದೀನ್ ಬಂಧಿತ ಆರೋಪಿಗಳಾಗಿದ್ದಾರೆ.  ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಫರಂಗಿಪೇಟೆಯಲ್ಲಿನ ದಿನೇಶ್ ರವರ ತೃಷಾ ಪೋಟೊ ಸ್ಟುಡಿಯೋಕ್ಕೆ 4 ಜನ ಯುವಕರು ಪೋಟೊ ತೆಗೆಸುವಂತೆ ಬಂದು ಪೊಟೋಗ್ರಾಫರ್,ಸ್ಥಳೀಯ ಬಿಜೆಪಿ ಮುಖಂಡ ದಿನೇಶ್ ಅವರ  ಕೈ, ಹೊಟ್ಟೆಗೆ

ಬಿಜೆಪಿ ಕಾರ್ಯಕರ್ತ, ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ ➤ ಮೂವರು ಆರೋಪಿಗಳ ಅರೇಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ.!

(ನ್ಯೂಸ್ ಕಡಬ) newskadaba.com ಮಲ್ಪೆ  ಅ. 29: ಮಲ್ಪೆ ಬಂದರಿನಲ್ಲಿ ಮೀನು ಆಯುವ ಬಳ್ಳಾರಿ ಮತ್ತು ಕೊಪ್ಪಳ ಮೂಲದ 17 ಮಕ್ಕಳನ್ನು ಗುರುವಾರ ಬೆಳಿಗ್ಗೆ ರಕ್ಷಣೆ ಮಾಡಲಾಗಿದೆ. ಮಕ್ಕಳ ರಕ್ಷಣಾ ಘಟಕ ಹಾಗು ಇತರೆ ಇಲಾಖೆ ಅಧಿಕಾರಿಗಳು ಇಂದು ಬೆಳಿಗ್ಗೆ ಮಲ್ಪೆ ಬಂದರಿಗೆ ದಾಳಿ ನಡೆಸಿ ಮೀನು ಆಯುವ ಕಾರ್ಯದಲ್ಲಿ ತೊಡಗಿದ್ದ 17 ಮಂದಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಸಾರ್ವಜನೀಕ

ಮಲ್ಪೆ ಬಂದರಿನಲ್ಲಿ 17 ಮಕ್ಕಳ ರಕ್ಷಣೆ.! Read More »

ಕರಾವಳಿ, ಕರ್ನಾಟಕ

ಕಾಸರಗೋಡು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ. 28. ಹುಬ್ಬಳ್ಳಿ ಮೂಲದ ಯುವಕನೋರ್ವನು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳಕ್ಕೆತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹುಬ್ಬಳ್ಳಿ ಮಾಗಡಿಯ ನೀಲಕಂಠಪ್ಪ (21)  ಎಂದು ಗುರುತಿಸಲಾಗಿದೆ.       ಕರ್ನಾಟಕ ಮೂಲದ ಬಾಲಕಿಯೋರ್ವಳನ್ನು ಕರೆ ತಂದು ಈತ ಕನಕಪಾಡಿಯ ಕ್ವಾಟರ್ಸ್‌ನಲ್ಲಿ ನೆಲೆಸಿದ್ದನು. ಆದರೆ ಪರಿಸರವಾಸಿಗಳು ಸಂಶಯ ತೋರಿ ಚೈಲ್ಡ್ ಲೈನ್‌‌ಗೆ ದೂರು ನೀಡಿದ್ದು, ಬಳಿಕ ತನಿಖೆ ನಡೆಸಿದಾಗ ಈಕೆ ಅಪ್ರಾಪ್ತೆ ಎಂದು ತಿಳಿದು

ಕಾಸರಗೋಡು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ➤ ಆರೋಪಿಯ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೋವಿಡ್ ನೆಗೆಟಿವ್ ವರದಿಗೆ ಲಂಚ ಪಡೆಯುತ್ತಿದ್ದ ಆರೋಗ್ಯ ಸಿಬ್ಬಂದಿಯನ್ನು ವಜಾಗೊಳಿಸಿ ಬಿಬಿಎಂಪಿ ಆದೇಶ*

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 28. ಕೋವಿಡ್‌ ಸೋಂಕಿನ ನಕರಾತ್ಮಕ ವರದಿ ನೀಡಲು ಲಂಚ ಪಡೆಯುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಪೊಬ್ಬತ್ತಿ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆ ಶಾಂತ ಹಾಗೂ ಲ್ಯಾಬ್‌ ಟೆಕ್ನಿಷಿಯನ್‌ ಮಹಾಲಕ್ಷ್ಮೀ ಅವರನ್ನು ವಜಾಗೊಳಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.     ಆರೋಪಿಗಳು ಕೋವಿಡ್‌ ಪರೀಕ್ಷೆಯ ನೆಗೆಟೀವ್‌ ವರದಿ ನೀಡಲು 2500 ರೂ. ಲಂಚ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಜೊತೆಗೆ, ಆರೋಗ್ಯ ಕೇಂದ್ರದ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾಧಿಕಾರಿಯಾದ

ಕೋವಿಡ್ ನೆಗೆಟಿವ್ ವರದಿಗೆ ಲಂಚ ಪಡೆಯುತ್ತಿದ್ದ ಆರೋಗ್ಯ ಸಿಬ್ಬಂದಿಯನ್ನು ವಜಾಗೊಳಿಸಿ ಬಿಬಿಎಂಪಿ ಆದೇಶ* Read More »

ಕರಾವಳಿ

ಕುಮಾರಸ್ವಾಮಿ ವಿದ್ಯಾಲಯದಲ್ಲಿ ಎಬಿವಿಪಿ ವತಿಯಿಂದ ನಗರ ಅಭ್ಯಾಸ ವರ್ಗ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ , ಅ. 28. ಅಖಿಲ ಭಾರತಿ ವಿದ್ಯಾರ್ಥಿ ಪರಿಷತ್‌ ಕುಕ್ಕೆ ಸುಬ್ರಹ್ಮಣ್ಯ ಘಟಕದ ವತಿಯಿಂದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಗರ ಅಭ್ಯಾಸ ವರ್ಗ ನಡೆಯಿತು. ಕಾರ್ಯಕ್ರಮವನ್ನು ಸ್ಮಿತಾ ಹೆಗ್ಡೆ ಜನರಲ್‌ ಮ್ಯಾನಜರ್‌ ಆರ್.ಎನ್.ಎಸ್‌ ಓನ್‌ ಸುಬ್ರಹ್ಮಣ್ಯ ಇವರು ಉದ್ಘಾಟಿಸಿದರು.     ವಿದ್ಯಾರ್ಥಿ ಪರಿಷತ್‌ ನ ಸಂಘಟನಾತ್ಮಕ ಕಾರ್ಯಗಳಲ್ಲಿ ಅಭ್ಯಾಸ ವರ್ಗ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ಪುನರ್‌ ನಿರ್ಮಾಣ ಎಂಬ ಉದಾತ್ತವಾದ ಚಿಂತನೆಯಲ್ಲಿ ಮುನ್ನಡೆಯುತ್ತಿದೆ. ವಿದ್ಯಾರ್ಥಿ

ಕುಮಾರಸ್ವಾಮಿ ವಿದ್ಯಾಲಯದಲ್ಲಿ ಎಬಿವಿಪಿ ವತಿಯಿಂದ ನಗರ ಅಭ್ಯಾಸ ವರ್ಗ ಕಾರ್ಯಕ್ರಮ Read More »

ಕರಾವಳಿ

ಸುಬ್ರಹ್ಮಣ್ಯ: ಕಾಡಾನೆ ದಾಳಿ ➤ ಅಡಿಕೆ , ಬಾಳೆ, ಕೃಷಿ ನಾಶ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ. 28. ಬಾಳುಗೋಡು ಗ್ರಾಮದ ಮುಚ್ಚಾರ ಸುಂದರ ಗೌಡ, ಧರ್ಮಪಾಲ ಮುಚ್ಚಾರ ಹಾಗೂ ಆನಂದ ಎಂಬವರ ಕೃಷಿ ತೋಟಕ್ಕೆ ಇಂದು ಕಾಡಾನೆ ದಾಳಿ ಮಾಡಿದ್ದು, ಕೃಷಿ ನಾಶಗೊಳಿಸಿದ ಘಟನೆ ಇಂದು ನಡೆದಿದೆ.     ಕಾಡಾನೆ ದಾಳಿಯಿಂದಾಗಿ ಅಡಿಕೆ , ಬಾಳೆ, ಕೃಷಿ ನಾಶಗೊಂಡಿದೆ.  

ಸುಬ್ರಹ್ಮಣ್ಯ: ಕಾಡಾನೆ ದಾಳಿ ➤ ಅಡಿಕೆ , ಬಾಳೆ, ಕೃಷಿ ನಾಶ Read More »

ಕರಾವಳಿ
Scroll to Top