newskadaba

ಬೋಗಿ ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ್ದ ಯುವತಿ ಮೃತ್ಯು ➤ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

(ನ್ಯೂಸ್ ಕಡಬ) newskadaba.com ಆಂಧ್ರಪ್ರದೇಶ ಡಿ.09. ವಿಶಾಖಪಟ್ಟಣಂ ವ್ಯಾಪ್ತಿಯ ರೈಲು ನಿಲ್ದಾಣದಲ್ಲಿ ಬೋಗಿ ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ್ದ ಯುವತಿ ಎಂ.ಶಶಿಕಲಾ (22) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.   ಎಂಸಿಎ ಓದುತ್ತಿದ್ದ ಆಕೆ ಬುಧವಾರ ಬೆಳಗ್ಗೆ ಅಣ್ಣಾವರಂನಿಂದ ಗುಂಟೂರು – ರಾಯಗಡ ರೈಲಿನಲ್ಲಿ ರೈಲು ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಅಪಘಾತಕ್ಕೆ ಗುರಿಯಾಗಿದ್ದು, ರೈಲ್ವೆ ರಕ್ಷಣಾ ತಂಡವು ಬೋಗಿ ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ್ದ ಯುವತಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮಾಹಿತಿ ಪಡೆದ ಕುಟುಂಬ ಸದಸ್ಯರು ಆಸ್ಪತ್ರೆಗೆ ಧಾವಿಸಿದ್ದು, […]

ಬೋಗಿ ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ್ದ ಯುವತಿ ಮೃತ್ಯು ➤ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಕಾದಿದೆ ಬಿಗ್ ಶಾಕ್…!!!!

(ನ್ಯೂಸ್ ಕಡಬ) newskadaba.com ಬೆಂಗಳೂರು,ಡಿ.09. ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆಗಳನ್ನು ನಿಯಂತ್ರಿಸಲು ನಗರ ಸಂಚಾರಿ ಪೊಲೀಸರು ಪ್ರಮುಖ ಜಂಕ್ಷನ್​ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಿದ್ದಾರೆ ಎಂದು ವರದಿ ತಿಳಿಸಿದೆ.   ಬೆಂಗಳೂರು ಪೊಲೀಸರ ಪ್ರಕಾರ, ಪೊಲೀಸರ ಸಹಾಯವಿಲ್ಲದೆ ಸಂಚಾರ ಉಲ್ಲಂಘನೆಯನ್ನು ಐಟಿಎಂಎಸ್ ಪತ್ತೆಹಚ್ಚುತ್ತದೆ. ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿರುವ ಎಎನ್‌ಪಿಆರ್‌ ಕ್ಯಾಮೆರಾಗಳ  ಮೂಲಕ ಸಂಚಾರ ನಿಯಮ ಉಲ್ಲಂಘನೆಯನ್ನು ಸೆರೆಹಿಡಿಯಲಾಗುತ್ತದೆ.   ಅತಿವೇಗ, ಕೆಂಪು ದೀಪ ಉಲ್ಲಂಘನೆ, ಸ್ಟಾಪ್ ಲೇನ್ ಉಲ್ಲಂಘನೆ, ಹೆಲ್ಮೆಟ್ ಉಲ್ಲಂಘನೆ, ತ್ರಿಬಲ್ ರೈಡಿಂಗ್, ಚಾಲನೆ ವೇಳೆ

ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಕಾದಿದೆ ಬಿಗ್ ಶಾಕ್…!!!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೊಂಡಕ್ಕೆ ಬಿದ್ದು ಯುವತಿಯರಿಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಕಲಬುರಗಿ, ಡಿ.09 ಬಟ್ಟೆ ಒಗೆಯಲು ಹೋಗಿದ್ದ ವೇಳೆ ಇಬ್ಬರು ಯುವತಿಯರು ನೀರಿನ ಹೊಂಡದಲ್ಲಿ ಕಾಲು ಜಾರಿ ಮೃತಪಟ್ಟಿರುವ ಘಟನೆ ಶಹಬಾದ ನಗರದ ರಾಮಘಡ ಆಶ್ರಯ ಕಾಲೋನಿಯಲ್ಲಿ ಸಂಭವಿಸಿದೆ. ಮೃತರನ್ನು ರಾಮಘಡ ನಿವಾಸಿ ಮಾಣಿಕಮ್ಮ ಸಾಯಪ್ಪ ದಾಸರ(20) ಮತ್ತು ಕೀರ್ತಿಕಾ ರಾಜೇಶ(12) ಎಂದು ಗುರುತಿಸಲಾಗಿದೆ. ಬಟ್ಟೆ ಒಗೆಯಲು ಹೋಗಿದ್ದ ಇವರು ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಬಾಲಕಿಯರು ಕಾಣದೇ ಇರುವುದರಿಂದ ತಕ್ಷಣವೇ ಪೊಲೀಸರಿಗೆ ತಿಳಿಸಿದ್ದು, ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಈಜುಗಾರರ ನೆರವಿನಿಂದ ಮೃತದೇಹಗಳನ್ನು

ಹೊಂಡಕ್ಕೆ ಬಿದ್ದು ಯುವತಿಯರಿಬ್ಬರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆರ್ ಟಿಓ ಅಧಿಕಾರಿಗಳಿಂದ ಹಗಲು ದರೋಡೆ ➤ ವಿಡಿಯೋ ವೈರಲ್

(ನ್ಯೂಸ್ ಕಡಬ ) newskadaba. com ಕೊಪ್ಪಳ , ಡಿ .09. ಆರ್ ಟಿಓ ಅಧಿಕಾರಿಗಳು ಹಗಲು ದರೋಡೆ ಮಾಡುತ್ತಿರುವ ಪ್ರಕರಣ ಕುಷ್ಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಲಾರಿ ಚಾಲಕರಿಂದ 50, 100 ರೂಪಾಯಿ ಟೋಕನ್ ವಸೂಲಿ ಮಾಡುತ್ತಿರುವಾಗ ಆರ್ ಟಿಓ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.  ಲಾರಿ ಚಾಲಕನೋರ್ವ 50 ರೂಪಾಯಿಯನ್ನು ಅಧಿಕಾರಿಗೆ ಕೊಡಲು ಬರುವ ಸಂದರ್ಭ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಅಧಿಕಾರಿ ಗಡಿಬಿಡಿಯಾಗಿ ದುಡ್ಡು ತುಂಬಿದ್ದ ಚೀಲವನ್ನು ಹಿಡಿದು ಓಡಿಹೋಗಿದ್ದಾರೆ.

ಆರ್ ಟಿಓ ಅಧಿಕಾರಿಗಳಿಂದ ಹಗಲು ದರೋಡೆ ➤ ವಿಡಿಯೋ ವೈರಲ್ Read More »

ಕರ್ನಾಟಕ

ಪಿಎಫ್ಐ ಕಾರ್ಯಕರ್ತರ ಮೇಲೆ ಎನ್ಐಎ ದಾಳಿ

(ನ್ಯೂಸ್ ಕಡಬ ) newskadaba. com ಬೆಂಗಳೂರು, ಡಿ.09. ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸಿದರೂ ಅದರ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯಕರ್ತರು ದೇಶದ ವಿವಿಧ ಕಡೆ ಭಯೋತ್ಪಾದಕ ಹಾಗೂ ಇತರ ಕಾನೂನು ಬಾಹಿರ ವಟುವಟಿಕೆಗಳನ್ನು ನಡೆಸಲು ಇಚ್ಚಿಸುತ್ತಿದ್ದಾರೆ  ಭಾರತ ಮತ್ತು ವಿದೇಶಗಳಿಂದ ಹಣ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ರಾಷ್ಟ್ರೀಯ ತನಿಖಾ ದಳ  ಗುರುವಾರ ರಾಜ್ಯರ ಕಲಬುರಗಿ ಮತ್ತು ಕೇರಳದ ಕೋಝಿಕ್ಕೋಡ್ ಎಂಬ ಮೂರು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.   ಅಲ್ಲದೆ,

ಪಿಎಫ್ಐ ಕಾರ್ಯಕರ್ತರ ಮೇಲೆ ಎನ್ಐಎ ದಾಳಿ Read More »

ಕರ್ನಾಟಕ

ಚಂಡಮಾರುತದ ಹಿನ್ನೆಲೆ ➤ ಕರಾವಳಿಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.09  ಬಂಗಾಲಕೊಳ್ಳಿಯಲ್ಲಿ ಚಂಡಮಾರುತದ ಹಿನ್ನೆಲೆಯಲ್ಲಿ ಬೆಂಗಳೂರು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಡಿ.12 ರವರೆಗೆ ಗುಡುಗು ಮತ್ತು ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ವರದಿ ತಿಳಿಸಿದೆ. ನೈಋತ್ಯ ಹಾಗೂ ಆಗ್ನೇಯ ಬಂಗಾಲಕೊಲ್ಲಿಯಲ್ಲಿ ಎದ್ದಿರುವ ಭಾರಿ ಚಂಡಮಾರುತದಿಂದ ನೆರೆಯ ರಾಜ್ಯಗಳಾದ ತಮಿಳುನಾಡು ,ಪುದುಚೇರಿ ಹಾಗೂ ಆಂಧ್ರಪ್ರದೇಶದ ಕರಾವಳಿ ಬಾಗದಲ್ಲಿ ಭಾರಿ ಮಳೆಯಾಗುತ್ತಿದ್ದು,  ಇದರ ಪರಿಣಾಮ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರು

ಚಂಡಮಾರುತದ ಹಿನ್ನೆಲೆ ➤ ಕರಾವಳಿಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ Read More »

ಕರಾವಳಿ, ಕರ್ನಾಟಕ

ಮತ್ತೆ ಕರ್ನಾಟಕದಿಂದ – ಮಹಾರಾಷ್ಟ್ರಕ್ಕೆ ಶುರುವಾದ ಬಸ್ ಸಂಚಾರ

(ನ್ಯೂಸ್ ಕಡಬ) newskadaba.com ಬೆಳಗಾವಿ, ಡಿ. 09. ಮಹಾರಾಷ್ಟ್ರ ಗಡಿ ಪರಿಸ್ಥಿತಿ ನಿಯಂತ್ರಣಕ್ಕೆ ಮತ್ತೆ ಕೆಎಸ್ಆರ್ ಟಿಸಿ ಬಸ್ಸು ಗಳ ಸಂಚಾರ ಆರಂಭವಾಗಿದೆ. ಬೆಳಗಾವಿಯ ವಿವಿಧ ಭಾಗಗಳಿಂದ 400ಕ್ಕಿಂತಲೂ ಹೆಚ್ಚುಬಸ್ಸು ಗಳು ಶುಕ್ರವಾರದಂದು ತೆರಳಿದ್ದು, ಇದೇ ವೇಳೆ ಮಹಾರಾಷ್ಟ್ರದಿಂದಲೂ ಬೆಳಗಾವಿಗೆ ಹೆಚ್ಚುಬಸ್ಸು ಗಳು ಬಂದಿವೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದುದರಿಂದ ಎರಡೂ ರಾಜ್ಯಗಳಿಗೂ  ಬಸ್ ಸಂಚಾರ ಸ್ಥಗಿತವಾಗಿತ್ತು. ಈಗ  ಕೊಲ್ಲಾಪುರ, ಪುಣೆ, ಮುಂಬೈ , ಮಿರತ್,ಸಾಂಗ್ಲಿ ಸೇರಿದಂತೆ ಹಲವು ನಗರಗಳಿಗೆ ಕರ್ನಾಟಕದಿಂದ ಬಸ್ಸುಗಳು ತೆರಳಿವೆ. ಚಿಕ್ಕೋಡಿಯಿಂದ ಪ್ರತಿದಿನ

ಮತ್ತೆ ಕರ್ನಾಟಕದಿಂದ – ಮಹಾರಾಷ್ಟ್ರಕ್ಕೆ ಶುರುವಾದ ಬಸ್ ಸಂಚಾರ Read More »

ರಾಷ್ಟ್ರೀಯ ನ್ಯೂಸ್

ಬೈಕ್ ಪಲ್ಟಿ ➤ ಸಹ ಸವಾರನಿಗೆ ಗಾಯ

(ನ್ಯೂಸ್ ಕಡಬ ) newskadaba. com  ನೆಲ್ಯಾಡಿ .ಡಿ.09.  ಬೈಕ್ ಪಲ್ಟಿಯಾದ ಪರಿಣಾಮ ಸಹ ಸವಾರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಗಾಯಗೊಂಡ ಸಹ ಸವಾರನನ್ನು ಹರಿದಾಸನ್ ಎಂದು ಗುರುತಿಸಲಾಗಿದೆ.  ಈತ ಶಿರಾಡಿಯಿಂದ ಗುಂಡ್ಯಕ್ಕೆ ಸಿನು ಎಂಬುವರ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಗುಂಡ್ಯ ಸಮೀಪ  ಈ ಘಟನೆ ನಡೆದಿದೆ. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಬೈಕ್ ಪಲ್ಟಿ ➤ ಸಹ ಸವಾರನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಚಳಿಗೆ ತತ್ತರಿಸಿದ ಬೆಂಗಳೂರು…!.

(ನ್ಯೂಸ್ ಕಡಬ ) newskadaba. com ಬೆಂಗಳೂರು .ಡಿ.09. ಹವಾಮಾನ ಇಲಾಖೆ ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ ನೀಡಿದ್ದು, ನಿನ್ನೆ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು.  ರಾತ್ರಿ ವೇಳೆ ತುಂತುರು ಮಳೆಯೂ ಆಗಿತ್ತು. ಇಂದು ಮುಂಜಾನೆ 16 ಡಿಗ್ರಿ ಸೆಲ್ಸಿಯಸ್ ಕನಿಷ್ಟ ತಾಪಮಾನ ದಾಖಲಾಗಿದೆ.   ನಾಳೆಯೂ ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಗರಿಷ್ಟ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಳಿಗೆ ತತ್ತರಿಸಿದ ಬೆಂಗಳೂರು…!. Read More »

ಕರ್ನಾಟಕ

ಮೊಬೈಲ್ ಕಳ್ಳತನ ಮಾಡುತ್ತಿದ್ದ ಗುಂಪು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ ) newskadaba. com ಬೆಂಗಳೂರು .ಡಿ.08. ಸಿಟಿ ಮಾರ್ಕೆಟ್  ಪೊಲೀಸರು ಭರ್ಜರಿ  ಕಾರ್ಯಚರಣೆ ನಡೆಸಿ .  ಬೆಂಗಳೂರಿನ ಸಿಟಿ ಮಾರ್ಕೆಟ್  ನಲ್ಲಿ ಮೊಬೈಲ್ ಕಳವು ಮಾಡ್ತಿದ್ದ ಕಳ್ಳರ ಗುಂಪನ್ನು ಪತ್ತೆ ಮಾಡಿದ್ದಾರೆ. ಈ ಗುಂಪು ಬೆಂಗಳೂರು ನಗರದಾದ್ಯಂತ ಮೊಬೈಲ್ ಕಳ್ಳತನ ಹೆಚ್ಚಾಗಿ  ಮಾಡುತ್ತಿರುವುದಾಗಿ, ಇವರ ಮೇಲೆ ದೂರು  ಕೂಡಾ ದಾಖಲಾಗಿತ್ತು. ಈ ಪ್ರಕರಣದ ಬೆನ್ನುಹತ್ತಿದ ಪೊಲೀಸರು  ಮುಖ್ಯ 4 ಆರೋಪಿಗಳಾದ ರಾಘವೇಂದ್ರ, ಕಿರಣ್, ಶೌಕತ್, ಬಲರಾಮ  ಇವರನ್ನು ಬಂಧಿಸಿದ್ದಾರೆ. ಬಂಧಿತರಿಂದ ವಿವಿಧ  ಕಂಪನಿಯ ಒಟ್ಟು

ಮೊಬೈಲ್ ಕಳ್ಳತನ ಮಾಡುತ್ತಿದ್ದ ಗುಂಪು ಪೊಲೀಸರ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top