newskadaba

ಯುವಕನ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com  ಕಲಬುರಗಿ , ಡಿ.10. ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ  ಮರಗುತ್ತಿ ಗ್ರಾಮದ ಎಂ.ಎಂ. ಗಾರ್ಡನ್ ಬಳಿ ನಡೆದಿದೆ. ಕೊಲೆಯಾದವರನ್ನು ಮಾಲಗತ್ತಿ ನಿವಾಸಿ ಬಸವರಾಜ್ ಅಂಬಲಗಿ (35) ಎಂದು ಗುರುತಿಸಲಾಗಿದೆ. ಈತನನ್ನು ದುಷ್ಕರ್ಮಿಗಳು ಕೊಲೆಗೈದಿದ್ದು.  ಕೊಲೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.  ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದ್ದು ಈ ಕುರಿತು ಗುವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕನ ಬರ್ಬರ ಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ನಟ ಶಿವರಾಜ್ ಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ.10  ಕನ್ನಡದ ಖ್ಯಾತ ಚಿತ್ರ ನಟ ಡಾ|| ಶಿವರಾಜ್ ಕುಮಾರ್ ರವರು ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ದೇವರ ದರ್ಶನ ಪಡೆದರು.   ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ ಅವರು ಶ್ರೀ  ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿಯರಾದ ನಿರುಪಮ ರಾಜ್ ಕುಮಾರ್ , ನಿವೇದಿತ ರಾಜ್ ಕುಮಾರ್

ನಟ ಶಿವರಾಜ್ ಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ Read More »

ಕರಾವಳಿ, ಕರ್ನಾಟಕ

ತೀವ್ರ ಚಳಿಗೆ ವೃದ್ದ ಮೃತ್ಯು….!

(ನ್ಯೂಸ್ ಕಡಬ ) newskadaba.com ವಿಜಯಪುರ, ಡಿ. 10. ವೃದ್ದನೋರ್ವ ಚಳಿಯ ತೀವ್ರತೆಯನ್ನು ತಡೆಯಲಾರದೆ ಮೃತಪಟ್ಟಿರುವ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.     ಮೃತರನ್ನು ಬಸವೇಶ್ವರ ವೃತ್ತದ ಬಳಿಯ ನೇತಾಜಿ ನಗರದ ನಿವಾಸಿ ಭೀಮಪ್ಪ ಹಾದಿಮನಿ (75) ಎಂದು ಗುರುತಿಸಲಾಗಿದೆ. ಬಸವೇಶ್ವರ ವೃತ್ತದ ಬಳಿ ಇರುವ ಮದ್ಯದಂಗಡಿಗೆ ಬೆಳಗ್ಗೆ ಬಂದಿದ್ದ ಇವರು ಸ್ವಲ್ಪ ಹೊತ್ತಿನ ಬಳಿಕ ವೃದ್ದ ಕೈಯ್ಯಲ್ಲಿ ಒಂದಿಷ್ಟು ಹಣ ಹಿಡಿದುಕೊಂಡು ಅಂಗಾತ ಸ್ಥಿತಿಯಲ್ಲಿ ಮಲಗಿದ್ದುದನ್ನು ಗಮನಿಸಿದ ಸ್ಥಳೀಯರು ಅನುಮಾನ ಬಂದು ವೃದ್ದನನ್ನುಎಬ್ಬಿಸಲು ಪ್ರಯತ್ನಿಸಿದಾಗ

ತೀವ್ರ ಚಳಿಗೆ ವೃದ್ದ ಮೃತ್ಯು….! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಾಲಕರ ಮೇಲೆ ಚಿರತೆ ದಾಳಿ ➤ ಕೂದಲೆಳೆ ಅಂತರದಲ್ಲಿ ಪಾರು….!!!!

(ನ್ಯೂಸ್ ಕಡಬ) newskadaba.com ಕೊರಟಗೆರೆ, ಡಿ. 10. ಹಸುವಿನ ಹಾಲು ಕರೆಯಲು ಹೋಗಿದ್ದ ಬಾಲಕರಿಬ್ಬರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಇರಕಸಂದ್ರ ಕಾಲನಿಯಲ್ಲಿ ಸಂಭವಿಸಿದೆ.     ಚಿರತೆ ದಾಳಿಗೆ ಒಳಗಾದವರನ್ನು ಧನುಷ್(13) ಮತ್ತು ಚೇತನ್(15) ಎಂದು ಗುರುತಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದ್ದು, ಗಾಯಾಳು ಬಾಲಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.    

ಬಾಲಕರ ಮೇಲೆ ಚಿರತೆ ದಾಳಿ ➤ ಕೂದಲೆಳೆ ಅಂತರದಲ್ಲಿ ಪಾರು….!!!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದಿದ್ದ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಡಿ. 10.  ಕೊಳವೆಬಾವಿಗೆ ಬಿದ್ದಿದ್ದ ಎಂಟು ವರ್ಷದ ಬಾಲಕ ಮೃತಪಟ್ಟ ಘಟನೆ ಶನಿವಾರದಂದು ಮಧ್ಯಪ್ರದೇಶದ ಬೇತುಲ್ ನಲ್ಲಿ ನಡೆದಿದೆ.     ಮೃತ ಬಾಲಕನನ್ನು ತನ್ಮಯ್ ಎಂದು ಗುರುತಿಸಲಾಗಿದೆ. ಈತ ಡಿ. 06ರಂದು ಸಂಜೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ತೆರೆದಿಟ್ಟಿದ್ದ ಕೊಳವೆಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿ ಹೊರತೆಗೆದರೂ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ. ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.  

ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದಿದ್ದ ಬಾಲಕ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

2022-23 ಸಾಲಿನ ಬ್ಯಾಂಕ್ ಗಳ ಗೃಹ ಸಾಲದ ಬಡ್ಡಿ ದರದಲ್ಲಿ ಏರಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 10. ಆರ್ ಬಿಐ ರೆಪೋ ದರ 35 ಮೂಲಾಂಶದಷ್ಟು ಏರಿಸಿದ ಹಿನ್ನೆಲೆ ಹಲವು ಬ್ಯಾಂಕ್ ಗಳು ಗೃಹ ಸಾಲಗಳ ಬಡ್ಡಿದರಗಳನ್ನು ಏರಿಸಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಬಡ್ಡಿ ದರ ಏರಿಸಿದ್ದು, ಪಿಎನ್ ಬಿ ಗೃಹ ಸಾಲ ಬಡ್ಡಿ ದರಗಳನ್ನು 35 ಬಿಪಿ ಎಸ್ ನಷ್ಟು ಹೆಚ್ಚು ಮಾಡಿವೆ.  ಆರ್ ಎಲ್ ಎಲ್ ಆರ್ ಅನ್ನು ಹಾಲಿ ಶೇ. 8.40 ರಿಂದ ಶೇ. 8.75ಕ್ಕೆ ಬದಲಾಯಿಸಲಾಗಿದೆ ಎಂದು

2022-23 ಸಾಲಿನ ಬ್ಯಾಂಕ್ ಗಳ ಗೃಹ ಸಾಲದ ಬಡ್ಡಿ ದರದಲ್ಲಿ ಏರಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವರದಕ್ಷಿಣೆ ಬೇಡಿಕೆಯನ್ನು ಪೂರೈಸದ ಕಾರಣ ಮಂಟಪದಿಂದ ಓಡಿ ಹೋದ ವರ!!!!

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಡಿ.10. ವರದಕ್ಷಿಣೆ ಬೇಡಿಕೆಯನ್ನು ಪೂರೈಸದ ಕಾರಣ ವರನು ಮದುವೆ ಮಂಟಪದಿಂದ ಓಡಿ ಹೋದ ಆತಂಕಕಾರಿ ಘಟನೆ ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಸಂಭವಿಸಿದೆ.     ವರನು ವಧುವಿನ ಮನೆಯವರಲ್ಲಿ ವರದಕ್ಷಿಣೆಯಾಗಿ ಬೈಕ್ ನ್ನು ಬೇಡಿಕೆಯಿಟ್ಟಿದ್ದು, ಅವರು ಕೊಡಿಸದೇ ಇದ್ದ ಹಿನ್ನೆಲೆ ವರನು ಮಂಟಪದಿಂದಲೇ ಓಡಿ ಹೋಗಿದ್ದಾನೆ ಎನ್ನಲಾಗಿದೆ. ನಂತರ ಎರಡು ದಿನಗಳ ಬಳಿಕ ಮದುವೆ ಬೇಡ ಎಂದು ಹೋದ ವರನು ಬಂದು ಅದೇ ಮದುವೆ ಮಂಟಪದಲ್ಲಿ ಮದುವೆಯಾದ ಘಟನೆ ವರದಿಯಾಗಿದ್ದು, ಈ

ವರದಕ್ಷಿಣೆ ಬೇಡಿಕೆಯನ್ನು ಪೂರೈಸದ ಕಾರಣ ಮಂಟಪದಿಂದ ಓಡಿ ಹೋದ ವರ!!!! Read More »

ರಾಷ್ಟ್ರೀಯ ನ್ಯೂಸ್

ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಹಾಸನ, ಡಿ.10. ಒಂಟಿ ಕಾಡಾನೆಯೊಂದು ಪ್ರತ್ಯಕ್ಷವಾದ ಘಟನೆ ಬೇಲೂರು ತಾಲೂಕಿನ ಆರೇಹಳ್ಳಿ ಗ್ರಾಮದಲ್ಲಿ ನಡೆದಿದೆ.     ಇದು ಆರೇಹಳ್ಳಿಯ ಗ್ರಾಮದ ಪ್ರಮುಖ ರಸ್ತೆ ಓಡಾಡುತ್ತಿದ್ದು, ಇದರ ವಿಡಿಯೋವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ನಾಡಿಗೆ ಬರಲು ಪ್ರಾರಂಭಿಸಿವೆ. ಇದರಿಂದ ಜನರಿಗೆ ಹೊರಗಡೆ ಬರಲು ಕಷ್ಟವಾಗುತ್ತಿದೆ.

ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ➤ ವಿಡಿಯೋ ವೈರಲ್ Read More »

ಕರ್ನಾಟಕ

ಚಂಡಮಾರುತ ಎಫೆಕ್ಟ್ ➤ಬೆಂಗಳೂರು ಗಡ ಗಡ…!!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 10. ತೀವ್ರ ಚಳಿಗೆ ಅಕ್ಷರಶಃ ನಡುಗಿದ ಘಟನೆ ಬೆಂಗಳೂರಿನಿಂದ ವರದಿಯಾಗಿದೆ. ಇನ್ನೂ ಎರಡು ಮೂರು ದಿನ ಹೀಗೆಯೇ ತೀವ್ರ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವಾರಕ್ಕೆ ಹೋಲಿಸಿದರೆ ಐದಾರು ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಕುಸಿತ ದಾಖಲಾಗಿರುವುದಾಗಿ ತಿಳಿದುಬಂದಿದೆ.   ಶುಕ್ರವಾರ ನಸುಕಿನ ಹೊತ್ತು ದಿನದ ಕನಿಷ್ಠ ತಾಪಮಾನ 18.2 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಮಧ್ಯಾಹ್ನದ ವೇಳೆಗೆ 17.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು ಎಂದು ರಾಜ್ಯ ಹವಾಮಾನ ಕೇಂದ್ರದ

ಚಂಡಮಾರುತ ಎಫೆಕ್ಟ್ ➤ಬೆಂಗಳೂರು ಗಡ ಗಡ…!!!! Read More »

ಕರ್ನಾಟಕ

ಖಾಸಗಿ ಬಸ್ಸು ಮತ್ತು ಕಾರು ಡಿಕ್ಕಿ➤ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, ಡಿ. 10. ಖಾಸಗಿ ಬಸ್ಸು ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ಉಡುಪಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಜಗೋಳಿ ಎಂಬಲ್ಲಿ ನಡೆದಿದೆ.     ಮೃತಪಟ್ಟವರನ್ನು ಆಂಧ್ರದ ಮೂಲದವರೆಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.  

ಖಾಸಗಿ ಬಸ್ಸು ಮತ್ತು ಕಾರು ಡಿಕ್ಕಿ➤ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ
Scroll to Top