ಆರ್ ಟಿಓ ಅಧಿಕಾರಿಗಳಿಂದ ಹಗಲು ದರೋಡೆ ➤ ವಿಡಿಯೋ ವೈರಲ್

(ನ್ಯೂಸ್ ಕಡಬ ) newskadaba. com ಕೊಪ್ಪಳ , ಡಿ .09. ಆರ್ ಟಿಓ ಅಧಿಕಾರಿಗಳು ಹಗಲು ದರೋಡೆ ಮಾಡುತ್ತಿರುವ ಪ್ರಕರಣ ಕುಷ್ಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಲಾರಿ ಚಾಲಕರಿಂದ 50, 100 ರೂಪಾಯಿ ಟೋಕನ್ ವಸೂಲಿ ಮಾಡುತ್ತಿರುವಾಗ ಆರ್ ಟಿಓ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.  ಲಾರಿ ಚಾಲಕನೋರ್ವ 50 ರೂಪಾಯಿಯನ್ನು ಅಧಿಕಾರಿಗೆ ಕೊಡಲು ಬರುವ ಸಂದರ್ಭ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಅಧಿಕಾರಿ ಗಡಿಬಿಡಿಯಾಗಿ ದುಡ್ಡು ತುಂಬಿದ್ದ ಚೀಲವನ್ನು ಹಿಡಿದು ಓಡಿಹೋಗಿದ್ದಾರೆ.

Scroll to Top