ಚಳಿಗೆ ತತ್ತರಿಸಿದ ಬೆಂಗಳೂರು…!.

(ನ್ಯೂಸ್ ಕಡಬ ) newskadaba. com ಬೆಂಗಳೂರು .ಡಿ.09. ಹವಾಮಾನ ಇಲಾಖೆ ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ ನೀಡಿದ್ದು, ನಿನ್ನೆ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು.  ರಾತ್ರಿ ವೇಳೆ ತುಂತುರು ಮಳೆಯೂ ಆಗಿತ್ತು. ಇಂದು ಮುಂಜಾನೆ 16 ಡಿಗ್ರಿ ಸೆಲ್ಸಿಯಸ್ ಕನಿಷ್ಟ ತಾಪಮಾನ ದಾಖಲಾಗಿದೆ.

 

ನಾಳೆಯೂ ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಗರಿಷ್ಟ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Scroll to Top