News Kadaba

ಬಂಟ್ವಾಳ; ಭಜರಂಗದಳದ ಮುಖಂಡನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ..!         

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಜ.12. ಬಜರಂಗದಳದ ಮುಖಂಡನೋರ್ವನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ ಪಾಣೆಮಂಗಳೂರು ಹಳೆ ಸೇತುವೆ ಬಳಿ ಸಂಭವಿಸಿದೆ. ಮೃತಪಟ್ಟವರನ್ನು ಸಜೀಪ ನಿವಾಸಿ ರಾಜೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ರಾಜೇಶ್ ಪೂಜಾರಿ ಬಜರಂಗದಳದ ಕಲ್ಲಡ್ಕ ಪ್ರಖಂಡ ಗೋ ರಕ್ಷಣಾ ಪ್ರಮುಖ ಆಗಿದ್ದರು ಎಂದು ತಿಳಿದುಬಂದಿದೆ. ಯುವಕ ನದಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಮುಸ್ಲಿಮ್ ಯುವಕರ ತಂಡ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿದೆ. ಮೃತದೇಹವನ್ನು […]

ಬಂಟ್ವಾಳ; ಭಜರಂಗದಳದ ಮುಖಂಡನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ..!          Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಹೊಸ ಮಾದರಿ ಪ್ರಶ್ನೆಪತ್ರಿಕೆ..! ➤ ರಾಜ್ಯ ಸರ್ಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.12.  ಈ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳ ಮಾದರಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಎಲ್ಲಾ ವಿಷಯಗಳಲ್ಲೂ 1 ಅಂಕದ ಪ್ರಶ್ನೆಗಳನ್ನು 20ಕ್ಕೆ ಹೆಚ್ಚಿಸಿ ಬಹು ಆಯ್ಕೆ ಮಾದರಿ ಪ್ರಶ್ನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಉಳಿದಂತೆ 2, 3, 4, 5 ಮತ್ತು 6 ಅಂಕಗಳ ಪ್ರಶ್ನೆಗಳ ಸಂಖ್ಯೆಯನ್ನು ವಿಷಯವಾರು ಕೊಂಚ ಹೆಚ್ಚು ಕಡಿಮೆ

ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಹೊಸ ಮಾದರಿ ಪ್ರಶ್ನೆಪತ್ರಿಕೆ..! ➤ ರಾಜ್ಯ ಸರ್ಕಾರ Read More »

ಕರ್ನಾಟಕ

ಉದ್ಘಾಟನೆಗೂ ಮುನ್ನವೇ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳು..!  

(ನ್ಯೂಸ್ ಕಡಬ) newskadaba.com  ಆಂಧ್ರ ಪ್ರದೇಶ, ಜ.12.   ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲೇಟು ಬಿದ್ದಿದ್ದು, ಬೋಗಿಗಳಿಗೆ ಹಾನಿಯಾಗಿದೆ. ಪ್ರಧಾನಿ ಮೋದಿ ಈ ರೈಲನ್ನು ಜನವರಿ 19 ರಂದು ಗ್ರೀನ್‌ ಸಿಗ್ನಲ್‌ ನೀಡಬೇಕಿತ್ತು. ಆದರೆ, ಉದ್ಘಾಟನೆಗೂ ಮುನ್ನವೇ ಈ ರೀತಿ ಕಿಡಿಗೇಡಿಗಳು ಕಲ್ಲೆಸೆದಿರುವ ಘಟನೆ ನಡೆದಿದೆ. ಟ್ರಯಲ್‌ ರನ್‌ ಮುಗಿಸಿ ಮರ್ರಿಪೇಲಂನಿಂದ ವಿಶಾಖಪಟ್ಟಣ ರೈಲ್ವೆ ಸ್ಟೇಷನ್‌ಗೆ ವಂದೇ ಭಾರತ್‌ ಟ್ರೈನ್‌ ಹೋಗುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ

ಉದ್ಘಾಟನೆಗೂ ಮುನ್ನವೇ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳು..!   Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
crime, arrest, suspected

ಮಂಗಳೂರು, ಶಿವಮೊಗ್ಗ ಬಾಂಬ್ ಸ್ಫೋಟ ಪ್ರಕರಣ ➤ ಮತ್ತೊಬ್ಬ ಸೆರೆ..!!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 12.  ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ, ಶಿವಮೊಗ್ಗ ಬಾಂಬ್‌ ಸ್ಫೋಟ ತಾಲೀಮು ಹಾಗೂ ಐಸಿಸ್‌ ಉಗ್ರ ಸಂಘಟನೆ ಜತೆ ನಂಟು ಹೊಂದಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮತ್ತೊಬ್ಬನನ್ನು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಬಂಧಿತನನ್ನು ಮಂಗಳೂರು ಹೊರವಲಯದ ಬಬ್ಬುಕಟ್ಟೆನಿವಾಸಿ ಮಾಝಿನ್‌ ಅಬ್ದುಲ್‌ ರೆಹಮಾನ್‌ ಎಂದು ಗುರುತಿಸಲಾಗಿದೆ. ಆರೋಪಿ ಮಾಝಿನ್‌ ಅಬ್ದುಲ್‌ ರೆಹಮಾನ್‌ ದೇರಳಕಟ್ಟೆಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡಿದ್ದು, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಈತ ಬಂಧಿತ ಶಂಕಿತ

ಮಂಗಳೂರು, ಶಿವಮೊಗ್ಗ ಬಾಂಬ್ ಸ್ಫೋಟ ಪ್ರಕರಣ ➤ ಮತ್ತೊಬ್ಬ ಸೆರೆ..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಡೀಪುರ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ..!!

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜ.12.  ರೈತರ ಜಮೀನುಗಳಿಗೆ ಲಗ್ಗೆಯಿಟ್ಟು ಫಸಲು, ಆಸ್ತಿ-ಪಾಸ್ತಿ ನಷ್ಟ ಮಾಡುತ್ತಿದ್ದ, ಹಾಗೂ ಜನರ ಮೇಲೆಯೇ ದಾಳಿ ಮಾಡಲು ಮುಂದಾಗುತ್ತಿದ್ದ ಪುಂಡಾನೆಯನ್ನು ಸಾಕಾನೆ ಅಭಿಮನ್ಯು ಮತ್ತು ಇತರೆ ಸಾಕಾನೆಗಳ ಸಹಕಾರದೊಂದಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಕಡೆಕೋಟಿ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಾಕಾನೆಗಳಾದ ಕೂಂಬಿಂಗ್ ಆಪರೇಷನ್ ಸ್ಪೆಷಲಿಸ್ಟ್ಗಳಾದ ಅಭಿಮನ್ಯು, ಮಹೇಂದ್ರ, ಗಣೇಶ

ಬಂಡೀಪುರ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ..!! Read More »

ಕರ್ನಾಟಕ

ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದು ಯುವಕ ಮೃತ್ಯು..!!

(ನ್ಯೂಸ್ ಕಡಬ) newskadaba.com ಮಾಲೂರು, ಜ.12.  ನೀರಿನ ಹೊಂಡಕ್ಕೆ ಕಾಲು ಜಾರಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಮಾಲೂರಿನಲ್ಲಿ ವರದಿಯಾಗಿದೆ. ಮೃತ ಯುವಕನನ್ನು ಲಕ್ಕೂರು ಗ್ರಾಮದ ಜಾವೀದ್ (23) ಎಂದು ಗುರುತಿಸಲಾಗಿದೆ. ಕುಡಿತದ ದಾಸನಾಗಿದ್ದ ಈತನನ್ನು  ನಾಲ್ಕು ತಿಂಗಳ ಹಿಂದೆ ಚಟದಿಂದ ಬಿಡಿಸಲು ನವಚೈತನ್ಯ ಫೌಂಡೇಶನ್ ಗೆ ಪೋಷಕರು ಸೇರಿಸಿದ್ದರು ಎಂದಿ ತಿಳಿದುಬಂದಿದೆ. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದು ಯುವಕ ಮೃತ್ಯು..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

 ಏಲಕ್ಕಿಯಲ್ಲಿ ಕೀಟನಾಶಕ..! ➤  ಶಬರಿಮಲೆ ಅರವಣ ಪ್ರಸಾದಕ್ಕೆ ಹೈಕೋರ್ಟ್ ತಡೆ 

(ನ್ಯೂಸ್ ಕಡಬ) newskadaba.com  ಕೊಚ್ಚಿ, ಜ.12.  ಕೇರಳದ ಪ್ರಸಿದ್ಧ ಶಬರಿಮಲೆ ದೇಗುಲದ ‘ಅರವಣ ಪ್ರಸಾದ’ ಮಾರಾಟಕ್ಕೆ ಹಾಗೂ ತಯಾರಿಕೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುವ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೀಟನಾಶಕ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಸಾದವನ್ನು ಮಾರಾಟ ಮಾಡದಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಹೈಕೋರ್ಟ್ ಸೂಚಿಸಿದೆ. ಇದರಿಂದ ಆರೂವರೆ ಕೋಟಿ ರೂ. ಮೌಲ್ಯದ ಅರವಣ ಪ್ರಸಾದ ವ್ಯರ್ಥ ಆಗಲಿದೆ. ಪ್ರಸಾದ ತಯಾರಿಸಲು ಖರೀದಿಸುವ ಏಲಕ್ಕಿಯನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಅದರಲ್ಲಿ 14

 ಏಲಕ್ಕಿಯಲ್ಲಿ ಕೀಟನಾಶಕ..! ➤  ಶಬರಿಮಲೆ ಅರವಣ ಪ್ರಸಾದಕ್ಕೆ ಹೈಕೋರ್ಟ್ ತಡೆ  Read More »

ರಾಷ್ಟ್ರೀಯ ನ್ಯೂಸ್

ಅಡುಗೆ ಸಿಲಿಂಡರ್‌ ಸೋರಿಕೆಯಿಂದ ಮನೆಗೆ ಬೆಂಕಿ ➤ ದಂಪತಿ ಹಾಗೂ ನಾಲ್ವರು ಮಕ್ಕಳು ಮೃತ್ಯು..!!

(ನ್ಯೂಸ್ ಕಡಬ) newskadaba.com ಚಂಡೀಗಢ, ಜ. 12. ಅಡುಗೆ ಸಿಲಿಂಡರ್ ಸೋರಿಕೆಯಾದ ಪರಿಣಾಮ ಮನೆಗೆ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ಆರು ಸದಸ್ಯರು ಮೃತಪಟ್ಟ ಭೀಕರ ಘಟನೆ ಚಂಡೀಗಢದ ಪಾಣಿಪತ್‌ನಲ್ಲಿ ವರದಿಯಾಗಿದೆ. ಮೃತರನ್ನು ಅಬ್ದುಲ್ (45), ಅವರ ಪತ್ನಿ(40) ಮತ್ತು 18 ಮತ್ತು 16 ವರ್ಷದ ಇಬ್ಬರು ಪುತ್ರಿಯರು ಹಾಗೂ 12 ಮತ್ತು 10 ವರ್ಷದ ಇಬ್ಬರು ಪುತ್ರರು ಎಂದು ಗುರುತಿಸಲಾಗಿದೆ. ಪಾಣಿಪತ್ ಜಿಲ್ಲೆಯ ಬಿಚ್ಪರಿ ಗ್ರಾಮದ ಬಳಿಯ ತಹಸಿಲ್ ಕ್ಯಾಂಪ್ ಪ್ರದೇಶದಲ್ಲಿ ಈ ದುರ್ಘಟನೆ  ಸಂಭವಿಸಿದೆ ಎನ್ನಲಾಗಿದೆ.

ಅಡುಗೆ ಸಿಲಿಂಡರ್‌ ಸೋರಿಕೆಯಿಂದ ಮನೆಗೆ ಬೆಂಕಿ ➤ ದಂಪತಿ ಹಾಗೂ ನಾಲ್ವರು ಮಕ್ಕಳು ಮೃತ್ಯು..!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಿರಂತರ ಜೀವಬೆದರಿಕೆ ಹಿನ್ನೆಲೆ ➤ ಗನ್ ಲೈಸೆನ್ಸ್ ಪಡೆದುಕೊಂಡ ನೂಪುರ್ ಶರ್ಮಾ..!

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 12. ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.   ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್‌ ಶರ್ಮ, ಖಾಸಗಿ ಟಿವಿ ವಾಹಿನಿಯೊಂದರಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಪ್ರವಾದಿ ಪೈಗಂಬರ್‌ ಕುರಿತಾಗಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಬಳಿಕ ದೇಶಾದ್ಯಂತ ಭಾರೀ ಪ್ರತಿಭಟನೆಯೂ ನಡೆದಿತ್ತು ಅಲ್ಲದೇ ಹಲವು ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಬೆನ್ನಲ್ಲೇ ಬಿಜೆಪಿ ಕೂಡಾ ಇವರನ್ನು ಪಕ್ಷದಿಂದ ಹೊರಹಾಕುವ ನಿರ್ಧಾರ ಮಾಡಿತ್ತು.

ನಿರಂತರ ಜೀವಬೆದರಿಕೆ ಹಿನ್ನೆಲೆ ➤ ಗನ್ ಲೈಸೆನ್ಸ್ ಪಡೆದುಕೊಂಡ ನೂಪುರ್ ಶರ್ಮಾ..! Read More »

ರಾಷ್ಟ್ರೀಯ ನ್ಯೂಸ್

ಹೊಸ ಆ್ಯಂಬುಲೆನ್ಸ್ ನೋಂದಾವಣಿಗೆ ಜಿಪಿಎಸ್ ಉಪಕರಣ ಅಳವಡಿಕೆ ಕಡ್ಡಾಯ..! ➤  ಹೈಕೋರ್ಟ್’ಗೆ ಸರ್ಕಾರ ಮಾಹಿತಿ           

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜ.12. ಹೊಸ ಆ್ಯಂಬುಲೆನ್ಸ್ ನೋಂದಾವಣಿಗೆ ಜಿಪಿಎಸ್ ಉಪಕರಣ ಅಳವಡಿಕೆ ಕಡ್ಡಾಯ ಮಾಡಲಾಗಿದ್ದು, ವಾಹನ ಸಾಫ್ಟ್ ವೇರ್ ಆ್ಯಂಬುಲೆನ್ಸ್ ಜಿಪಿಎಸ್ ದತ್ತಾಂಶ ಕುರಿತು ನಿರ್ವಹಣೆ ಮಾಡಲಾಗುತ್ತದೆ. ಇನ್ನೂ 108 ಸೇವಾದಾರರನ್ನು ಆಯ್ಕೆ ಮಾಡಲು 21 ದಿನಗಳ ಅಲ್ಪಾವಧಿ ಟೆಂಡರ್ ಕರೆಯಲು ಅನುಮತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್’ಗೆ ಮಾಹಿತಿ ನೀಡಿದೆ. ಬೆಂಗಳೂರಿನ ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ

ಹೊಸ ಆ್ಯಂಬುಲೆನ್ಸ್ ನೋಂದಾವಣಿಗೆ ಜಿಪಿಎಸ್ ಉಪಕರಣ ಅಳವಡಿಕೆ ಕಡ್ಡಾಯ..! ➤  ಹೈಕೋರ್ಟ್’ಗೆ ಸರ್ಕಾರ ಮಾಹಿತಿ            Read More »

ಕರ್ನಾಟಕ
Scroll to Top