ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದು ಯುವಕ ಮೃತ್ಯು..!!

(ನ್ಯೂಸ್ ಕಡಬ) newskadaba.com ಮಾಲೂರು, ಜ.12.  ನೀರಿನ ಹೊಂಡಕ್ಕೆ ಕಾಲು ಜಾರಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಮಾಲೂರಿನಲ್ಲಿ ವರದಿಯಾಗಿದೆ.

ಮೃತ ಯುವಕನನ್ನು ಲಕ್ಕೂರು ಗ್ರಾಮದ ಜಾವೀದ್ (23) ಎಂದು ಗುರುತಿಸಲಾಗಿದೆ.

ಕುಡಿತದ ದಾಸನಾಗಿದ್ದ ಈತನನ್ನು  ನಾಲ್ಕು ತಿಂಗಳ ಹಿಂದೆ ಚಟದಿಂದ ಬಿಡಿಸಲು ನವಚೈತನ್ಯ ಫೌಂಡೇಶನ್ ಗೆ ಪೋಷಕರು ಸೇರಿಸಿದ್ದರು ಎಂದಿ ತಿಳಿದುಬಂದಿದೆ. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Scroll to Top