News Kadaba

crime, arrest, suspected

‘ಬಾಲ್ಯವಿವಾಹವಾದ 1,800 ಮಂದಿ ಅರೆಸ್ಟ್’

(ನ್ಯೂಸ್ ಕಡಬ)newskadaba.com ಅಸ್ಸಾಂ, ಫೆ.03. ಬಾಲ್ಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ರಾಜ್ಯದಲ್ಲಿ ಈವರೆಗೆ 1,800ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗುಗಳ ವಿರುದ್ದ ಹೋರಾಟಲು ಸರ್ಕಾರ ಬದ್ದವಾಗಿದೆ. ಈ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ವಹಿಸಬೇಕೆಂದು ಪೊಲೀಸರಿಗೆ ಈಗಾಗಲೇ ಸೂಚಿಸಲಾಗಿದೆ. ಇಲ್ಲಿವರೆಗೆ ಬಾಲ್ಯವಿವಾಹವಾದ 1,800 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.  

‘ಬಾಲ್ಯವಿವಾಹವಾದ 1,800 ಮಂದಿ ಅರೆಸ್ಟ್’ Read More »

ರಾಷ್ಟ್ರೀಯ ನ್ಯೂಸ್

ಉಳ್ಳಾಲ: ಸಮುದ್ರದಲ್ಲಿ ವೃದ್ದೆಯ ಶವ ಪತ್ತೆ

(ನ್ಯೂಸ್ ಕಡಬ)newskadaba.com ಉಳ್ಳಾಲ, ಫೆ.03. ಉಳ್ಳಾಲದ ಮುಕ್ಕಚ್ಚೇರಿ ಸಮುದ್ರ ಕಿನಾರೆಯಲ್ಲಿ ಅಪರಿಚಿತ ವೃದ್ದೆಯ ಮೃತದೇಹ ಪತ್ತೆಯಾಗಿದೆ. ಸುಮಾರು 60-70 ವರ್ಷದ ಮಹಿಳೆಯ ಶವ ಇದಾಗಿದೆ ಎಂದು ಅಂದಾಜಿಸಲಾಗಿದೆ. ಸೀರೆ ಉಟ್ಟಿರುವ ಮಹಿಳೆ ಸಮುದ್ರಕ್ಕೆ ಬಿದ್ದಿರುವ ಸಂಶಯ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಉಳ್ಳಾಲ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.  

ಉಳ್ಳಾಲ: ಸಮುದ್ರದಲ್ಲಿ ವೃದ್ದೆಯ ಶವ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಕ್ಕಳಿಬ್ಬರಿಗೆ ಢಿಕ್ಕಿಯಾಗಿ ನೂರಾರು ಮೀಟರ್ ಎಳೆದೊಯ್ದ ರೈಲು ➤ ಓರ್ವ ಮಗು ಮೃತ್ಯು

(ನ್ಯೂಸ್ ಕಡಬ)newskadaba.com ಜರ್ಮನಿ, ಫೆ.03. ಮಕ್ಕಳಿಬ್ಬರಿಗೆ ರೈಲು ಢಿಕ್ಕಿ ಹೊಡೆದು ಸುಮಾರು ನೂರಕ್ಕೂ ಹೆಚ್ಚು ಮೀಟರ್‌ವರೆಗೆ ಎಳೆದೊಯ್ದ ಹೃದಯ ವಿದ್ರಾವಕ ಘಟನೆ ಜರ್ಮನಿಯಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಮಗು ಮೃತಪಟ್ಟಿದ್ದು, ಮತ್ತೊಬ್ಬ ಮಗು ಗಂಭೀರ ಗಾಯಗೊಂಡಿದೆ. ನಿಲ್ದಾಣಗಳೆರಡರ ನಡುವೆ ಅಪಘಾತ ಸಂಭವಿಸಿದೆ. ಸರಕು ಸಾಗಣೆ ರೈಲು ಮಕ್ಕಳಿಬ್ಬರಿಗೆ ಢಿಕ್ಕಿಯಾಗಿದೆ. ಆದರೆ ಮಕ್ಕಳು ಹಳಿ ಮೇಲೆ ಹೋಗಿದ್ದರೇ ಅಥವಾ ಢಿಕ್ಕಿ ಹೊಡೆಯಲು ಇತರ ಕಾರಣಗಳೇನು ಎಂಬುದು ತಿಳಿದು ಬಂದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘಟನಾ ಸ್ಥಳದಲ್ಲಿ

ಮಕ್ಕಳಿಬ್ಬರಿಗೆ ಢಿಕ್ಕಿಯಾಗಿ ನೂರಾರು ಮೀಟರ್ ಎಳೆದೊಯ್ದ ರೈಲು ➤ ಓರ್ವ ಮಗು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಷ ಕುಡಿದು ಅಪ್ರಾಪ್ತ ಬಾಲಕಿ ಮೃತ್ಯು

(ನ್ಯೂಸ್ ಕಡಬ)newskadaba.com ಸಕಲೇಶಪುರ, ಫೆ.03. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದ ಬಾಲಕಿ ಮನೆಯಲ್ಲಿ ಪೋಷಕರು ಬೈದರೆಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಸಮೀಪ ನಡೆದಿದೆ . ಈಕೆ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು . ಶಾಲೆಗೆ ಚಕ್ಕರ್ ಹೊಡೆದು, ಬಾಲಕಿಯ ಸ್ನೇಹಿತರಾದ ಶೀಲಾ, ಭೂಮಿಕಾ ಅಜಯ್ ಎಂಬುವರ ಜೊತೆ ಹೆತ್ತೂರು ಸಮೀಪದ ಪ್ರವಾಸಿ ತಾಣಕ್ಕೆ ಬೈಕಿನಲ್ಲಿ ಹೋಗಿದ್ದಾರೆ. ಮನೆಗೆ ಬಂದಾಗ ಪೋಷಕರು ಈ ಬಗ್ಗೆ ಶಾಲೆಗೆ ಹೋಗದೆ ಪ್ರವಾಸಕ್ಕೆ ಹೋಗಿದ್ದಕ್ಕೆ ಬಾಲಕಿಗೆ ಬೈದಿದ್ದಾರೆ.

ವಿಷ ಕುಡಿದು ಅಪ್ರಾಪ್ತ ಬಾಲಕಿ ಮೃತ್ಯು Read More »

ಕ್ರೈಮ್ ನ್ಯೂಸ್

ವಿಶ್ವದ ಇಬ್ಬರ ದಾಖಲೆ ಮುರಿದು ಗಿನ್ನೆಸ್ ದಾಖಲೆ ಸಾಧಿಸಿದ ದೇರಳಕಟ್ಟೆಯ ಯುವಕ.!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.03. ದೇರಳಕಟ್ಟೆಯ ಯುವಕನೊಬ್ಬ ಫುಟ್ಬಾಲ್‌ನಲ್ಲಿ ಗಿನ್ನೆಸ್‌ನಲ್ಲಿ ವಿಶ್ವದ ಇಬ್ಬರ ದಾಖಲೆ ಮುರಿದು ತನ್ನದೇ ಆದ ಹೊಸ ದಾಖಲೆ ಬರೆದಿದ್ದಾರೆ. ಕೇವಲ 30 ಸೆಕೆಂಡುಗಳಲ್ಲಿ ಫುಟ್ಬಾಲ್‌ನೊಂದಿಗೆ 10 ರೌಂಡ್‌ಗಳ ನಟ್ ಮೆಗ್ ಸಾಧಿಸುವ ಮೂಲಕ ಬೆಳ್ಮ ದೇರಳಕಟ್ಟೆ ನಿವಾಸಿ ಮೊಹಮ್ಮದ್ ಶಲೀಲ್ ಎಂಬ ಯುವಕ ಗಿನ್ನೆಸ್ ದಾಖಲೆಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. 2017ರಲ್ಲಿ ಇಂಗ್ಲೆಂಡ್ ನ ಡೆಲೆ ಅಲ್ಲಿ ಎಂಬವರು 30 ಸೆಕೆಂಡುಗಳಲ್ಲಿ 7 ಸುತ್ತುಗಳನ್ನು ಸಾಧಿಸುವ ಮೂಲಕ ಮೊದಲ ಗಿನ್ನೆಸ್ ದಾಖಲೆ ಸಾಧಿಸಿದ್ದರು.

ವಿಶ್ವದ ಇಬ್ಬರ ದಾಖಲೆ ಮುರಿದು ಗಿನ್ನೆಸ್ ದಾಖಲೆ ಸಾಧಿಸಿದ ದೇರಳಕಟ್ಟೆಯ ಯುವಕ.! Read More »

ಕರಾವಳಿ

ಟ್ರಾಫಿಕ್‌ ನಿಯಮ ಉಲ್ಲಂಘನೆ ದಂಡ ಕಟ್ಟಿದರೆ 50% ರಿಯಾಯಿತಿ.! ➤ ಸರ್ಕಾರದ ಆದೇಶ

(ನ್ಯೂಸ್ ಕಡಬ)newskadaba.com ರಾಜ್ಯಾದ್ಯಂತ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಬಂಧ ಕ್ಯಾಮರಾಗಳ ಮಾಹಿತಿ ಆಧರಿಸಿ ಪೊಲೀಸರು ವಿಧಿಸಿರುವ ದಂಡದ ಮೊತ್ತದಲ್ಲಿ ಒಂದು ಬಾರಿಗೆ ಅನ್ವಯವಾಗುವಂತೆ ಶೇ.50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸಾರಿಗೆ ಇಲಾಖೆ ಆಯುಕ್ತರು ರಾಜ್ಯಾದ್ಯಂತ ಪೊಲೀಸ್‌ ಇಲಾಖೆಯಿಂದ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ವಾಹನಗಳ ವಿರುದ್ಧ ದಾಖಲಾದ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇತ್ತೀಚೆಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ

ಟ್ರಾಫಿಕ್‌ ನಿಯಮ ಉಲ್ಲಂಘನೆ ದಂಡ ಕಟ್ಟಿದರೆ 50% ರಿಯಾಯಿತಿ.! ➤ ಸರ್ಕಾರದ ಆದೇಶ Read More »

ಕರ್ನಾಟಕ
Theft, crime, Robbery

ಬ್ರಹ್ಮಾವರ: 7.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..!

(ನ್ಯೂಸ್ ಕಡಬ)newskadaba.com ಬ್ರಹ್ಮಾವರ, ಫೆ.03. ಮದುವೆಗೆಂದು ಲಾಕರ್‌ನಿಂದ ತಂದಿದ್ದ 180.5 ಗ್ರಾಂ ತೂಕದ 7.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ ಎಮದು ವರದಿ ತಿಳಿಸಿದೆ. ಹೂಡೆಯ ಅಫ್ರೀನ್‌ ಬಾನು ಅವರು ಹೊನ್ನಾಳದ ತಾಯಿ ಮನೆ ಸಮೀಪ ಸಂಬಂಧಿಕರ ಮನೆಯಲ್ಲಿ ಮದುವೆ ಸಮಾರಂಭ ಮುಗಿಸಿ ಮನೆಗೆ ಹೊರಡುವಾಗ ಚಿನ್ನಾಭರಣವಿದ್ದ ಬ್ಯಾಗನ್ನು ಕಾರಿನಲ್ಲಿ ಇಟ್ಟಿದ್ದರು ಎಂದು ತಿಳಿದುಬಂದಿದೆ. ತಾಯಿ ಮನೆಯಲ್ಲಿ ಚಹಾ ಕುಡಿದು 15 ನಿಮಿಷದಲ್ಲಿ ಹಿಂದಿರುಗಿದ್ದರು. ಮನೆಗೆ ಮರಳಿ ಸ್ವಲ್ಪ ಸಮಯದಲ್ಲಿ ಬ್ಯಾಗ್‌

ಬ್ರಹ್ಮಾವರ: 7.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..! Read More »

ಕರಾವಳಿ, ಕ್ರೈಮ್ ನ್ಯೂಸ್
Death, deadbody, Waterfall

ಬಂಟ್ವಾಳ: ರೈಲ್ವೆ ಬ್ರಿಡ್ಜ್ ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ..!

(ನ್ಯೂಸ್ ಕಡಬ)newskadaba.com ಬಂಟ್ವಾಳ, ಫೆ.03. ಬಿ.ಸಿ ರೋಡಿನ ಮುಖ್ಯ ವೃತ್ತದ ಬಳಿ ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ ಎನ್ನಲಾಗಿದೆ. ಸುಮಾರು 55 ಪ್ರಾಯದ ಅಪರಿಚಿತ ವ್ಯಕ್ತಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಪರಿಚಿತ ವ್ಯಕ್ತಿ ಅಮಲು ಪದಾರ್ಥ ಸೇವಿಸಿ ಮಲಗಿದ್ದ ಎಂದು ಹೇಳಲಾಗಿದೆ. ಸಾರ್ವಜನಿಕರು ಮೃತದೇಹವನ್ನು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂಟ್ವಾಳ ‌ನಗರ ಠಾಣಾ ಎಸ್. ಐ.ರಾಮಕೃಷ್ಣ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿ ಶವವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ

ಬಂಟ್ವಾಳ: ರೈಲ್ವೆ ಬ್ರಿಡ್ಜ್ ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಕೆಲಸ ಕೊಡಿಸ್ತೀವಿ ಅಂತಾ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್​ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.03. ಕೆಲಸ ಕೊಡಿಸುತ್ತೇವೆ ಅಂತ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್​ನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮಲ್ಲು ಶಿವಶಂಕರ ರೆಡ್ಡಿ, ಗುಂಜ ಮಂಗರಾವ್, ಶೇಕ್ ಶಹಬಾಜಿ, ಮಹೇಶ್ ಬಂಧಿತ ಆರೋಪಿಗಳು. ಗ್ಯಾಂಗ್ ಸಾಮಾಜಿಕ ಜಾಲತಾಣದ ಮೂಲಕ ಕೆಲಸ ಕೊಡಿಸುತ್ತೇವೆ ಎಂದು ಜಾಹಿರಾತು ನೀಡಿದೆ. ಇದನ್ನು ನಂಬಿದ್ದ ಆಂಧ್ರಪ್ರದೇಶದ ಪ್ರದೀಪ್ ಅಸಾಮ್ವರ್​​ಗೆ ಆರೋಪಿ ಮಲ್ಲು ಶಿವಶಂಕರ್ ರೆಡ್ಡಿ ಫೇಸ್ ಬುಕ್​ ಮುಖಾಂತರ ಪರಿಚಯವಾಗಿದ್ದನು. ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ,

ಕೆಲಸ ಕೊಡಿಸ್ತೀವಿ ಅಂತಾ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್​ ಅರೆಸ್ಟ್..! Read More »

ಕರ್ನಾಟಕ

ಲೇಡೀಸ್ ಬೀಚ್’ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದು

(ನ್ಯೂಸ್ ಕಡಬ)newskadaba.com ಉತ್ತರ ಕನ್ನಡ, ಫೆ.03. ಉತ್ತರ ಕನ್ನಡ ಜಿಲ್ಲೆಯ ಬೈತಕೋಲ್ ಗ್ರಾಮದ ಬ್ರಿಟಿಷರ ಕಾಲದ ಲೇಡೀಸ್ ಬೀಚ್’ಗೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದಾಗಿದ್ದಾರೆಂದು ವರದಿಯಾಗಿದೆ. ಪ್ರಾಜೆಕ್ಟ್ ಸೀಬರ್ಡ್ ಬೇಸ್ ಎಂದೂ ಕರೆಯಲ್ಪಡುವ ಯೋಜನೆಯನ್ನು ಬೀಚ್ ಬಳಿ ಕೈಗೊಳ್ಳಲಾಗಿದ್ದು, ಗಡಿಯಾರ ಗೋಪುರಗಳನ್ನು ತಲುಪಲು ಕಡಲತೀರದ ಪಕ್ಕದ ಬೆಟ್ಟದ ಉದ್ದಕ್ಕೂ ರಸ್ತೆಯನ್ನು ನಿರ್ಮಾಣ ಮಾಡುವ ಕಾರ್ಯವನ್ನು ಭಾರತೀಯ ನೌಕಾಪಡೆ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬೀಚ್’ಗೆ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ನಿರ್ಧಾರ ಕೈಗೊಳ್ಳಲಾಗಿದೆ

ಲೇಡೀಸ್ ಬೀಚ್’ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ಅಧಿಕಾರಿಗಳು ಮುಂದು Read More »

ಕರ್ನಾಟಕ
Scroll to Top