ವಿಶ್ವದ ಇಬ್ಬರ ದಾಖಲೆ ಮುರಿದು ಗಿನ್ನೆಸ್ ದಾಖಲೆ ಸಾಧಿಸಿದ ದೇರಳಕಟ್ಟೆಯ ಯುವಕ.!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.03. ದೇರಳಕಟ್ಟೆಯ ಯುವಕನೊಬ್ಬ ಫುಟ್ಬಾಲ್‌ನಲ್ಲಿ ಗಿನ್ನೆಸ್‌ನಲ್ಲಿ ವಿಶ್ವದ ಇಬ್ಬರ ದಾಖಲೆ ಮುರಿದು ತನ್ನದೇ ಆದ ಹೊಸ ದಾಖಲೆ ಬರೆದಿದ್ದಾರೆ. ಕೇವಲ 30 ಸೆಕೆಂಡುಗಳಲ್ಲಿ ಫುಟ್ಬಾಲ್‌ನೊಂದಿಗೆ 10 ರೌಂಡ್‌ಗಳ ನಟ್ ಮೆಗ್ ಸಾಧಿಸುವ ಮೂಲಕ ಬೆಳ್ಮ ದೇರಳಕಟ್ಟೆ ನಿವಾಸಿ ಮೊಹಮ್ಮದ್ ಶಲೀಲ್ ಎಂಬ ಯುವಕ ಗಿನ್ನೆಸ್ ದಾಖಲೆಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.


2017ರಲ್ಲಿ ಇಂಗ್ಲೆಂಡ್ ನ ಡೆಲೆ ಅಲ್ಲಿ ಎಂಬವರು 30 ಸೆಕೆಂಡುಗಳಲ್ಲಿ 7 ಸುತ್ತುಗಳನ್ನು ಸಾಧಿಸುವ ಮೂಲಕ ಮೊದಲ ಗಿನ್ನೆಸ್ ದಾಖಲೆ ಸಾಧಿಸಿದ್ದರು.
2021ರ ಫೆಬ್ರವರಿಯಲ್ಲಿ ಮಹಿಳಾ ಪುಟ್ಬಾಲ್ ಆಟಗಾರ್ತಿ ಅಮೆರಿಕಾ ಕ್ಯಾಲಿಫೋರ್ನಿಯಾದ ವೆಸ್ಟ್ ಲೇಕ್ ಹಳ್ಳಿಯ ತಾಷಾ ನಿಕೋಲ್ ತೇರಾನಿ ಒಂದು ನಿಮಿಷದಲ್ಲಿ 18 ಸುತ್ತುಗಳನ್ನು ಹೊಡೆಯುವ ಮೂಲಕ ಗಿನ್ನೆಸ್ ದಾಖಲೆ ಸಾಧಿಸಿದ್ದರು. ಇದೀಗ ಅವರಿಬ್ಬರ ದಾಖಲೆಗಳನ್ನು ಮುರಿದು ದೇರಳಕಟ್ಟೆಯ ಮೊಹಮ್ಮದ್ ಶಲೀಲ್ ಹೊಸ ದಾಖಲೆ ಸೃಷ್ಟಿಸಿದ್ದಾರೆ.

Scroll to Top