ವಿಷ ಕುಡಿದು ಅಪ್ರಾಪ್ತ ಬಾಲಕಿ ಮೃತ್ಯು

(ನ್ಯೂಸ್ ಕಡಬ)newskadaba.com ಸಕಲೇಶಪುರ, ಫೆ.03. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದ ಬಾಲಕಿ ಮನೆಯಲ್ಲಿ ಪೋಷಕರು ಬೈದರೆಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಸಮೀಪ ನಡೆದಿದೆ .

ಈಕೆ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು . ಶಾಲೆಗೆ ಚಕ್ಕರ್ ಹೊಡೆದು, ಬಾಲಕಿಯ ಸ್ನೇಹಿತರಾದ ಶೀಲಾ, ಭೂಮಿಕಾ ಅಜಯ್ ಎಂಬುವರ ಜೊತೆ ಹೆತ್ತೂರು ಸಮೀಪದ ಪ್ರವಾಸಿ ತಾಣಕ್ಕೆ ಬೈಕಿನಲ್ಲಿ ಹೋಗಿದ್ದಾರೆ. ಮನೆಗೆ ಬಂದಾಗ ಪೋಷಕರು ಈ ಬಗ್ಗೆ ಶಾಲೆಗೆ ಹೋಗದೆ ಪ್ರವಾಸಕ್ಕೆ ಹೋಗಿದ್ದಕ್ಕೆ ಬಾಲಕಿಗೆ ಬೈದಿದ್ದಾರೆ. ಇದರಿಂದ ಮನನೊಂದ ಬಾಲಕಿ ವಿಷ ಕುಡಿದು ಅಸ್ವಸ್ಥಗೊಂಡಾಗ ಆಕೆಯನ್ನು ಸರ್ಕಾರಿ ಆಸ್ಪತ್ರೆ ಸಾಗಿಸು ಮಧ್ಯ ಪ್ರಾಣ ಬಿಟ್ಟಿದ್ದಾಳೆ.  ಬಾಲಕಿ ಸಾವಿನ ಬಗ್ಗೆ ಆಕೆಯ ತಾಯಿ ಯಸಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Scroll to Top