News Kadaba

➤ ವಿದ್ಯಾರ್ಥಿನಿಯರಿಗೆ ಅಸಭ್ಯ ಮೆಸೇಜ್​ ಕಳಿಸಿದ ಶಿಕ್ಷಕ ಅಮಾನತು

(ನ್ಯೂಸ್ ಕಡಬ) newskadaba.com. ತುಮಕೂರು. ಫೆ.22.  ತುಮಕೂರಿನ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯರ ಮೊಬೈಲ್ ಗೆ ಅಸಭ್ಯ ಸಂದೇಶ ಕಳಿಸಿದ್ದಾರೆ. ಇದು ಬೆಳಕಿಗೆ ಬಂದ ವಿಚಾರವಾಗಿ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಪಿ.ನಾಗಭೂಷಣ್ ಅಮಾನತುಗೊಂಡ ಶಿಕ್ಷಕ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ಕೊಟಗಾರಲಹಳ್ಳಿ ಸರ್ಕಾರಿ ಪ್ರೌಡ ಶಾಲೆಯ ಸಹ ಶಿಕ್ಷಕರಾಗಿ ಇವರು ಕೆಲಸ ಮಾಡುತ್ತಿದ್ದರು. ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕ. ಕೊಟಗಾರಲಹಳ್ಳಿ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿನಿಯರೊಡನೆ ಈ ಶಿಕ್ಷಕ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.  ಪರೀಕ್ಷೆಯಲ್ಲಿ […]

➤ ವಿದ್ಯಾರ್ಥಿನಿಯರಿಗೆ ಅಸಭ್ಯ ಮೆಸೇಜ್​ ಕಳಿಸಿದ ಶಿಕ್ಷಕ ಅಮಾನತು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಕಾಡಾನೆ ಸೆರೆಗೆ ಮುಂದುವರಿದ ಕಾರ್ಯಾಚರಣೆ ➤ ಒಟ್ಟು 4 ಆನೆಗಳ ಇರುವಿಕೆ ಪತ್ತೆ | ಆನೆಯ ಸೆರೆಹಿಡಿಯಲು ಸಿದ್ಧತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.22. ಕಳೆದೆರಡು ದಿನಗಳಿಂದ ಕಡಬ ಪರಿಸರದ ಜನತೆಯನ್ನು ನಿದ್ದೆಗೆಡಿಸಿದ್ದ ಕಾಡಾನೆಯೊಂದು ಇದೀಗ ಅರಣ್ಯ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಕಡಬ ತಾಲೂಕಿನ ಮರ್ಧಾಳ ಸಮೀಪದ ನೈಲ ಎಂಬಲ್ಲಿ ಸೋಮವಾರ ಬೆಳಿಗ್ಗೆ ಎರಡು ಜೀವಗಳನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಸೆರೆ ಹಿಡಿಯಲು 5 ಸಾಕಾನೆಗಳೊಂದಿಗೆ ನುರಿತ ತಂಡ ಕಾಡಾನೆಯ ಬೆನ್ನು ಬಿದ್ದಿದ್ದು, ಇದೀಗ ಕೊಣಾಜೆ ಸಮೀಪದ ಸುಳ್ಯ ಆಜನ ಎಂಬಲ್ಲಿ ಕಾಡೊಂದರಲ್ಲಿ ಒಂಟಿ ಕಾಡಾನೆ ಪತ್ತೆಯಾಗಿದೆ. ಅಧಿಕಾರಿಗಳು ಆನೆಯ ಸೆರೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಕಡಬ: ಕಾಡಾನೆ ಸೆರೆಗೆ ಮುಂದುವರಿದ ಕಾರ್ಯಾಚರಣೆ ➤ ಒಟ್ಟು 4 ಆನೆಗಳ ಇರುವಿಕೆ ಪತ್ತೆ | ಆನೆಯ ಸೆರೆಹಿಡಿಯಲು ಸಿದ್ಧತೆ Read More »

ಕರಾವಳಿ

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ     ➤  ಬೆಂಕಿ ಹಚ್ಚಿಕೊಂಡು ಮೂವರು ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ)newskadaba.com  ಚಿಕ್ಕಬಳ್ಳಾಪುರ, ಫೆ.22. ಬೆಂಕಿ ಹಚ್ಚಿಕೊಂಡು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನಿಸಿ, ಮೂವರು ಮೃತಪಟ್ಟ ದುರಂತ ಘಟನೆ ಬೆಳಕಿಗೆ ಬಂದಿದೆ. ಬೆಂಕಿ ಹಚ್ಚಿಕೊಂಡ ಇಬ್ಬರು ಪುತ್ರಿಯರು, ಪತ್ನಿ ಮೃತಪಟ್ಟು, ಪತಿಯ ಸ್ಥಿತಿ ಗಂಭೀರವಾಗಿದೆ. ನೇತ್ರಾವತಿ(37) ಮಕ್ಕಳಾದ ವರ್ಷಿತಾ(12), ಸ್ನೇಹಾ (9)ಮೃತಪಟ್ಟವರು ಎಂದು ಗುರುತಿಸಲಾಗಿದೆ . ಪತಿ ಸೊನ್ನೇಗೌಡ(48)ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.  

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ     ➤  ಬೆಂಕಿ ಹಚ್ಚಿಕೊಂಡು ಮೂವರು ಮೃತ್ಯು, ಓರ್ವ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ಳಾರೆ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ➤ ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಬೆಳ್ಳಾರೆ, ಫೆ. 22. ಇಲ್ಲಿನ ಟ್ಯುಟೋರಿಯಲ್ ಶಾಲೆಯೊಂದರ 10ನೇ ತರಗತಿಯ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಆರೋಪಿಯ ವಿರುದ್ದ ಪೋಕ್ಸೋ ಪ್ರಕರಣ ದಾಖಲಾದ ಘಟನೆ ವರದಿಯಾಗಿದೆ. ಆರೋಪಿಯನ್ನು ಅಶ್ರಫ್ ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿನಿಯು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದಲ್ಲದೇ ಆಕೆಯೊಂದಿಗೆ ಅಶ್ಲೀಲವಾಗಿ ಮಾತನಾಡಿರುವ ಕುರಿತು ಕೇಸ್ ದಾಖಲಾಗಿದ್ದು, ಇದೀಗ ಆರೋಪಿಯ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.  

ಬೆಳ್ಳಾರೆ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ➤ ಪೋಕ್ಸೋ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ ಸುಬಿ ಸುರೇಶ್ ವಿಧಿವಶ !

(ನ್ಯೂಸ್ ಕಡಬ)newskadaba.com ಕೊಚ್ಚಿ, ಫೆ.22. ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್ (41) ನಿಧನರಾಗಿದ್ದಾರೆ. ಕಾಯಿಲೆಯಿಂದ ಬಳಲುತ್ತಿದ್ದ ಸುಬಿ ಸುರೇಶ್ ಕಳೆದ ಕೆಲ ಸಮಯದಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ   ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಚಿಕಿತ್ಸೆ ಫಲಿಸದೆ ಫೆ.22 ರಂದು ಇಂದು ನಿಧನರಾಗಿದ್ದಾರೆ.  

ಮಲಯಾಳಂ ಸಿನಿಮಾ ರಂಗದ ಖ್ಯಾತ ನಟಿ ಸುಬಿ ಸುರೇಶ್ ವಿಧಿವಶ ! Read More »

ರಾಷ್ಟ್ರೀಯ ನ್ಯೂಸ್

ಉಪ್ಪಿನಂಗಡಿ: ಆಶ್ರಮದ ಹೆಸರೇಳಿಕೊಂಡು ಬಟ್ಟೆ ಬರೆ ಸಂಗ್ರಹಿಸಿ ವಂಚನೆ !

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಫೆ.22. ಆಶ್ರಮಕ್ಕೆ ಹಣ, ಹಳೆ ಬಟ್ಟೆ ಸಂಗ್ರಹಿಸುತ್ತಿದ್ದೇವೆಂದು ನಕಲಿ ಐಡಿ ಕಾರ್ಡ್ ತೋರಿಸಿ ತಂಡವೊಂದು ಭಿಕ್ಷಾಟನೆ ನಡೆಸುತ್ತಿರುವ ಘಟನೆ ಉಪ್ಪಿನಂಗಡಿಯಲ್ಲಿ ಸಕ್ರಿಯವಾಗಿದೆ. ಈ ತಂಡ ಮನೆಯೊಂದಕ್ಕೆ ತೆರಳಿದ ವೇಳೆ ಅವರ ವಂಚನೆ ಬಯಲಾಗಿದೆ. ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಅವರ ಮನೆಗೆ ಇಬ್ಬರು ಹೆಂಗಸರು ಸೋಮವಾರ ಬಂದಿದ್ದು, ಮೈಸೂರಿನ ಇಲವಾಲದ ಬಳಿಯ ಅಂಗವಿಕಲ ಮತ್ತು ವೃದ್ದಾಶ್ರಮಕ್ಕೆ ಬಟ್ಟೆ, ಬರೆ, ಹಣಕಾಸಿನ ನೆರವು ನೀಡುತ್ತಿದ್ದೇವೆ. ಅದಕ್ಕಾಗಿ ನಮಗೆ ನಿಮ್ಮ ಸಹಕಾರ ಅಗತ್ಯ ಎಂದಿದ್ದರು ಎನ್ನಲಾಗಿದೆ.

ಉಪ್ಪಿನಂಗಡಿ: ಆಶ್ರಮದ ಹೆಸರೇಳಿಕೊಂಡು ಬಟ್ಟೆ ಬರೆ ಸಂಗ್ರಹಿಸಿ ವಂಚನೆ ! Read More »

ಕರಾವಳಿ, ಕ್ರೈಮ್ ನ್ಯೂಸ್

ರಾಜ್ಯದಲ್ಲಿ ಬಿಸಿಲ ಝಳ ತೀವ್ರ !     ➤  ಹೆಚ್ಚಿದ ಜ್ವರ ಪ್ರಕರಣ; ತಜ್ಞರಲ್ಲಿ ಆತಂಕ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ,22.  ರಾಜ್ಯದಲ್ಲಿ ಈ ಬಾರಿ ಫೆಬ್ರವರಿ ಮಧ್ಯ ಭಾಗದಲ್ಲಿ ಬಿಸಿಲ ಝಳ ತೀವ್ರವಾಗಿದೆ. ವಾಡಿಕೆಗಿಂತ ಹೆಚ್ಚು ಬಿಸಿಲಿದ್ದು, ಮುಂದಿನ ದಿನಗಳಲ್ಲಿ ಬಿಸಿಲು ಇನ್ನಷ್ಟು ಹೆಚ್ಚಳಗೊಳ್ಳುವ ಭೀತಿ ತಲೆದೂರಿದ್ದು, ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲ ಬೇಗೆ ಹೆಚ್ಚಾಗುತ್ತಿತ್ತು. ಆದರೆ, ತಾಪಮಾನ ಹೆಚ್ಚಾಗಿದೆ. ಇದರಿಂದ ಜ್ವರ ಪ್ರಕರಣಗಳು ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.  

ರಾಜ್ಯದಲ್ಲಿ ಬಿಸಿಲ ಝಳ ತೀವ್ರ !     ➤  ಹೆಚ್ಚಿದ ಜ್ವರ ಪ್ರಕರಣ; ತಜ್ಞರಲ್ಲಿ ಆತಂಕ Read More »

ಕರ್ನಾಟಕ

ಸಾನಿಯಾರ ಕ್ರೀಡಾ ಬದುಕು ಮುಕ್ತಾಯ ➤ ದುಬೈ ಚಾಂಪಿಯನ್ ಶಿಪ್ ನಲ್ಲಿ ಸೋಲು

(ನ್ಯೂಸ್ ಕಡಬ) newskadaba.com. ದುಬೈ.  ಫೆ.22.  ದುಬೈ ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾರ ವೃತ್ತಿಪರ ಕ್ರೀಡಾ ಬದುಕು ಮಂಗಳವಾರ ಕೊನೆಗೊಂಡಿತು. ಅವರು ತನ್ನ ಕೊನೆಯ ವೃತ್ತಿಪರ ಪಂದ್ಯವನ್ನು ಡಬ್ಲ್ಯಟಿಎ ದುಬೈ ಡ್ಯೂಟಿ ಫ್ರೀ ಚಾಂಪಿಯನ್ ಶಿಪ್ಸ್ ನಲ್ಲಿ ಆಡಿದರು. ದುಬೈನಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಸಾನಿಯಾ ಮತ್ತು ಅವರ ಜೊತೆಗಾತಿ ಅಮೇರಿಕದ ಮ್ಯಾಡಿಸನ್ ಕೀಸ್ ರಶ್ಯದ ಜೋಡಿ ವೆನೋರ್ಕಿಯ ಕುದೆರ್ ಮೆಟೋವ ಮತ್ತು ಲಿಯುಡಿಮಿಲ ಸಮ್ಸೊನೋವ ವಿರುದ್ಧ 4-6,0-6 ನೇರ

ಸಾನಿಯಾರ ಕ್ರೀಡಾ ಬದುಕು ಮುಕ್ತಾಯ ➤ ದುಬೈ ಚಾಂಪಿಯನ್ ಶಿಪ್ ನಲ್ಲಿ ಸೋಲು Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಹಿಳಾ ಪೊಲೀಸ್ ಪೇದೆ ನೇಣಿಗೆ ಶರಣು !

(ನ್ಯೂಸ್ ಕಡಬ)newskadaba.com ಮೈಸೂರು, ಫೆ.22. ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆಎಸ್ಆರ್ಪಿ ವಸತಿಗೃಹದ ಮನೆಯಲ್ಲಿ ನಡೆದಿದೆ. ಗೀತಾ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಗೀತಾ ಅನಾರೋಗ್ಯದ ಕಾರಣ ನೀಡಿ ಕೆಲಸದಿಂದ ಮನೆಗೆ ಬಂದಿದ್ದರು. ಈ ವೇಳೆ ಪತಿ, ಪತ್ನಿ ಗೀತಾಗೆ ಕರೆ ಮಾಡಿದಾಗ ಗೀತಾ ಉತ್ತರಿಸಿಲ್ಲ. ನಂತರ ಮನೆಗೆ ವಾಪಸ್ಸು ಬಂದು ನೋಡಿದಾಗ ಗೀತಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳಾ ಪೊಲೀಸ್ ಪೇದೆ ನೇಣಿಗೆ ಶರಣು ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ರಿಕ್ಷಾ ಚಾಲಕನ ನಿರ್ಲಕ್ಷ್ಯ- ಹೆಲ್ಮೆಟ್ ಇಲ್ಲದ ಪ್ರಯಾಣ !     ➤  ಅಪಘಾತದಲ್ಲಿ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.22. ಬೈಕ್ ಸವಾರ ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ನಗರದ ಬಿಜೈನಲ್ಲಿ ನಡೆದಿದೆ ಎನ್ನಲಾಗಿದೆ. ಆಟೋ ಚಾಲಕನ ನಿರ್ಲಕ್ಷ್ಯದ ತಿರುವು ಮತ್ತು ಹೆಲ್ಮೆಟ್ ರಹಿತ ಪ್ರಯಾಣದ ಕಾರಣ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.  

ಮಂಗಳೂರು: ರಿಕ್ಷಾ ಚಾಲಕನ ನಿರ್ಲಕ್ಷ್ಯ- ಹೆಲ್ಮೆಟ್ ಇಲ್ಲದ ಪ್ರಯಾಣ !     ➤  ಅಪಘಾತದಲ್ಲಿ ಬೈಕ್ ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top