News Kadaba

ವಿಟ್ಲ: ಮನೆಗೆ ನುಗ್ಗಿ, ಚಿನ್ನಾಭರಣ – ನಗದು ಕಳವು !

(ನ್ಯೂಸ್ ಕಡಬ)newskadaba.com ವಿಟ್ಲ, ಫೆ.22. ಮನೆಯ ಬಾಗಿಲು ಒಡೆದು ಸುಮಾರು 1,11,000 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವುಗೈದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಝಬೈದಾ ಅವರ ಮನೆಗೆ ಕಳ್ಳರು ಮನೆಯ ಆರ್‌ಸಿ‍ಸಿ ಛಾವಣಿಯ ದ್ವಾರವನ್ನು ಒಡೆದು ಒಳಗೆ ಪ್ರವೇಶಿಸಿ ಮಲಗುವ ಕೋಣೆಯಲ್ಲಿದ್ದ ಗಾಡ್ರೇಜ್‌ ಮುರಿದು ಅದರಲ್ಲಿದ್ದ 8 ಗ್ರಾಂ ತೂಕದ ಮಗುವಿನ ಕೈ ಚೈನ್, ಸುಮಾರು 8 ಗ್ರಾಂ ತೂಕದ ಮಗುವಿನ ಕಾಲು ಚೈನ್, ಸುಮಾರು 12 ಗ್ರಾಂ ತೂಕದ ಕುತ್ತಿಗೆಯ ಸರ, […]

ವಿಟ್ಲ: ಮನೆಗೆ ನುಗ್ಗಿ, ಚಿನ್ನಾಭರಣ – ನಗದು ಕಳವು ! Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ನಿರ್ವಾಹಕಿ ಮೇಲೆ ಹಲ್ಲೆ..!  ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 22. ಮಂಗಳೂರು- ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕನೋರ್ವ ಕರ್ತವ್ಯ ನಿರತರಾಗಿದ್ದ ನಿರ್ವಾಹಕಿ ಮೇಲೆ ಹಲ್ಲೆಗೈದ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ನಿರ್ವಾಹಕಿ ವಿಜಯಾ ಅವರು ನೀಡಿದ ದೂರಿನಂತೆ ಪ್ರಯಾಣಿಕ ಹಸನ್‌ ಎಂಬಾತನನ್ನು ಪುತ್ತೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ.  

ಪುತ್ತೂರು: ನಿರ್ವಾಹಕಿ ಮೇಲೆ ಹಲ್ಲೆ..!  ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

➤ ಹೈಕೋರ್ಟ್ ವಕೀಲ ವಿ.ಶ್ರೀನಿಧಿ ಹೃದಯಾಘಾತದಿಂದ ನಿಧನ!

(ನ್ಯೂಸ್ ಕಡಬ) newskadaba.com.ಬೆಂಗಳೂರು. ಫೆ.21.  ಬೆಂಗಳೂರು ಹೈಕೋರ್ಟ್ ನಲ್ಲಿ ಸರ್ಕಾರಿ ವಕೀಲರಾಗಿದ್ದ ವಿ.ಶ್ರೀನಿಧಿ(46) ಇಂದು ಮಧ್ಯಾಹ್ನ 2.25ಕ್ಕೆ ಮಲ್ಲೇಶ್ವರದ ಅಪೊಲೊ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ, ಒಬ್ಬ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ತಾಳವಟ್ಟಿ ಗ್ರಾಮದ ಶ್ರೀನಿಧಿ ಕಳೆದ ಎಂಟು ವರ್ಷಗಳಿಂದ ಸರ್ಕಾರದ ಪರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪರ ವಕೀಲರಾಗಿ ಮಹತ್ವದ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿದ ವಕೀಲರೆನಿಸಿದ್ದರು.

➤ ಹೈಕೋರ್ಟ್ ವಕೀಲ ವಿ.ಶ್ರೀನಿಧಿ ಹೃದಯಾಘಾತದಿಂದ ನಿಧನ! Read More »

ಕರ್ನಾಟಕ

ಶೀಘ್ರದಲ್ಲೇ ಬ್ಯಾನ್ ಆಗಲಿದೆ 10 ಅಂಕಿಗಳ ಮೊಬೈಲ್ ನಂಬರ್ ಗಳು ! ➤ ಟ್ರಾಯ್ ನಿಂದ ಮಹತ್ವದ ನಿರ್ಧಾರ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.21. ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ ಆದರೆ ಈ ಕಂಪೆನಿಗಳು ಬಳಕೆದಾರರಿಗಾಗಿ 10 ಅಂಕಿಯ ನಂಬರ್​ ಗಳನ್ನು ನೀಡಿರುತ್ತದೆ. ಸಾಮಾನ್ಯವಾಗಿ ಮೊಬೈಲ್‌ ಬಳಕೆದಾರರಿಗೆ ವಿವಿಧ ಬಗೆಯ ಜಾಹೀರಾತು ಕುರಿತಾದ ಕರೆಗಳು ಮತ್ತು ಮೆಸೇಜ್‌ಗಳು ಬರುತ್ತವೆ. ಈ ರೀತಿ ಅನಗತ್ಯ ಮತ್ತು ಪ್ರಚಾರದ ಕರೆಗಳು ಮತ್ತು ಮೆಸೇಜ್‌ಗಳಿಂದ ಬಳಕೆದಾರರು ತೊಂದರೆಗೊಳಗಾಗುತ್ತಾರೆ. ಹೀಗೆ ಅನಗತ್ಯವಾದ ಕರೆ ಹಾಗೂ ಮೆಸೇಜ್‌ಗಳ ಕಿರಿ ಕಿರಿಯನ್ನು ತಪ್ಪಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ

ಶೀಘ್ರದಲ್ಲೇ ಬ್ಯಾನ್ ಆಗಲಿದೆ 10 ಅಂಕಿಗಳ ಮೊಬೈಲ್ ನಂಬರ್ ಗಳು ! ➤ ಟ್ರಾಯ್ ನಿಂದ ಮಹತ್ವದ ನಿರ್ಧಾರ Read More »

ರಾಷ್ಟ್ರೀಯ ನ್ಯೂಸ್

ರೋಹಿಣಿ ಸಿಂಧೂರಿ, ರೂಪಾಗೆ ಸರ್ಕಾರದಿಂದ ನೋಟಿಸ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.21. ಸರ್ಕಾರ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿಗೆ ತಡೆ ಹಾಕಲು ಮುಂದಾಗಿದೆ. ಇಬ್ಬರೂ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಇಬ್ಬರೂ ಅಧಿಕಾರಿಗಳಿಗೆ ಸೇವಾ ನ್ಯೂನ್ಯತೆ ಮಾಡಬಾರದು ಎಂದು ನೋಟಿಸ್ ಜಾರಿ ಮಾಡಲಾಗಿದೆ. ಮಾಧ್ಯಮಗಳ ಮುಂದೆ ಹೋಗಿ ಆರೋಪ ಪ್ರತ್ಯಾರೋಪ ಮಾಡಿರುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಲಾಗಿದೆ.

ರೋಹಿಣಿ ಸಿಂಧೂರಿ, ರೂಪಾಗೆ ಸರ್ಕಾರದಿಂದ ನೋಟಿಸ್ Read More »

ಕರ್ನಾಟಕ

ಲೋಕಾಯುಕ್ತ ಪೊಲೀಸರಿಂದ ಎ.ಇ ರೂಪಾ ಬಂಧನ

(ನ್ಯೂಸ್ ಕಡಬ)newskadaba.com  ಮಂಗಳೂರು, ಫೆ.21 . ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯ ತಾಂತ್ರಿಕ ವಿಭಾಗದ ಸಹಾಯಕ ಎಂಜಿನಿಯರ್‌ ರೂಪಾ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬೆಳ್ತಂಗಡಿ ತಾಲ್ಲೂಕಿನ ಪರಿಶಿಷ್ಟ ಜಾತಿಯ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿನಿಲಯದ ಸಭಾಂಗಣ ನಿರ್ಮಾಣ ಕಾಮಗಾರಿಯೊಂದರ ಅಂತಿಮ ಬಿಲ್‌ ಪಾವತಿಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಲು ರೂಪಾ ₹10 ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ತಾಲ್ಲೂಕಿನ ಗುರಿಪಲ್ಲದ ಕನ್ಯಾಡಿ ಗ್ರಾಮದ ಗುತ್ತಿಗೆದಾರರೊಬ್ಬರು ಲೋಕಾಯುಕ್ತ

ಲೋಕಾಯುಕ್ತ ಪೊಲೀಸರಿಂದ ಎ.ಇ ರೂಪಾ ಬಂಧನ Read More »

ಕರಾವಳಿ

ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ ಮಾರ್ಚ್ 9 ರಿಂದ 29 ರವರೆಗೆ `ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ’      ➤ ಸಚಿವ ಬಿ.ಸಿ.ನಾಗೇಶ್

(ನ್ಯೂಸ್ ಕಡಬ)newskadaba.com  ಬೆಂಗಳೂರು, ಫೆ.21. ಮಾರ್ಚ್ 9 ರಿಂದ 29 ರವರೆಗೂ ದ್ವೀತಿಯ ಪಿಯು ಪರೀಕ್ಷೆಗಳು ನಡೆಯಲಿದ್ದು, ಇದೆ ಮೊದಲ ಬಾರಿಗೆ ಪಿಯುಸಿ ಪರೀಕ್ಷೆಯಲ್ಲಿ ಮಲ್ಟಿಪಲ್ ಚಾಯ್ಸ್ ಇರಲಿದೆ. ಮಕ್ಕಳು ಪಾಸಾಗಲು 3 ಹಂತದ ಪ್ರಶ್ನೆಗಳು ಇರಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ನಡೆದ ಸಭೆ ಬಳಿಕ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 5716

ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ ಮಾರ್ಚ್ 9 ರಿಂದ 29 ರವರೆಗೆ `ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ’      ➤ ಸಚಿವ ಬಿ.ಸಿ.ನಾಗೇಶ್ Read More »

ಕರ್ನಾಟಕ

6,000 ನೌಕರರನ್ನು ವಜಾಗೊಳಿಸಲು ಮುಂದಾದ ವಿಶ್ವದ ಅತೀ ದೊಡ್ಡ ಶೂ ತಯಾರಕ ಕಂಪನಿ

(ನ್ಯೂಸ್ ಕಡಬ)newskadaba.com  ವಿಯೇಟ್ನಾಂ, ಫೆ.21. ವಿಶ್ವದ ಅತಿ ದೊಡ್ಡ ಬ್ರಾಂಡೆಡ್ ಶೂ ತಯಾರಕ ಕಂಪನಿ ತೈವಾನ್‌ ಮೂಲದ ‘ಪೌ ಚೆನ್‌ ಕಾರ್ಪೊರೇಶನ್’ 6000 ನೌಕರರನ್ನು ವಜಾ ಮಾಡಲು ಮುಂದಾಗಿದೆ. ಬೇಡಿಕೆ ಕುಸಿದಿದ್ದರಿಂದ ಕಂಪನಿ ಈ ನಿರ್ಧಾರ ಮಾಡಿದೆ ಎಂದು ಈ ಬಗ್ಗೆ ಮಾಹಿತಿ ಇರುವವರಿಂದ ವಿಷಯ ಗೊತ್ತಾಗಿದೆ. ಕಂಪನಿಯ ಪೌಯೆನ್‌ ವಿಯೇಟ್ನಾಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವರರ ಪೈಕಿ 3,000 ಮಂದಿಯನ್ನು ಈ ತಿಂಗಳಿನಲ್ಲಿ ವಜಾ ಮಾಡಲು ಮುಂದಾಗಿದೆ.  

6,000 ನೌಕರರನ್ನು ವಜಾಗೊಳಿಸಲು ಮುಂದಾದ ವಿಶ್ವದ ಅತೀ ದೊಡ್ಡ ಶೂ ತಯಾರಕ ಕಂಪನಿ Read More »

ರಾಷ್ಟ್ರೀಯ ನ್ಯೂಸ್

ನೆಲ್ಯಾಡಿ: ರಬ್ಬರ್ ಮ್ಯಾಟ್ ಕಳ್ಳತನಕ್ಕೆ ಯತ್ನ ➤ ಆಟೋ ಚಾಲಕ ಸಹಿತ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ)newskadaba.com ನೆಲ್ಯಾಡಿ, ಫೆ.21. ಬಾರ್ ಒಂದರ ಹಿಂಭಾಗದಲ್ಲಿ ಇಟ್ಟಿದ್ದ ರಬ್ಬರ್ ಮ್ಯಾಟ್ ಕಳವುಗೈದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೈಕ್ ಪಿಟ್ಟರ್ ಸಿದ್ದೀಕ್ ಮತ್ತು ಆಟೋರಿಕ್ಷಾ ಚಾಲಕ ಸುನಿಲ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಆರೋಪಿಗಳು ಎಂದು ತಿಳಿದುಬಂದಿದೆ. ಕ್ಲಾಸಿಕ್ ಬಾರ್ ನ ಹಿಂಬಾಗದ ಕಂಪೌಂಡು ಒಳಗಡೆ ಇಟ್ಟಿದ್ದ ಗ್ರೀನ್ ಬಣ್ಣದ 3 ರಬ್ಬರ್ ಮ್ಯಾಟ್ ಕಳ್ಳತನ ಮಾಡಿ ಮಾರುತಿ ಓಮ್ನಿ ಕಾರಿನಲ್ಲಿ ತುಂಬಿಸಿ ಇಟ್ಟಿದ್ದರು. ಈ ವೇಳೆ ಬಾರ್ ಸಿಬ್ಬಂದಿ ಗಮನಿಸಿ ಆಪಾದಿತರನ್ನು ಹಿಡಿಯಲು ಮುಂದಾದ

ನೆಲ್ಯಾಡಿ: ರಬ್ಬರ್ ಮ್ಯಾಟ್ ಕಳ್ಳತನಕ್ಕೆ ಯತ್ನ ➤ ಆಟೋ ಚಾಲಕ ಸಹಿತ ಇಬ್ಬರು ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಸಾಲ ತೀರಿಸಲಾಗದ ಹಿನ್ನೆಲೆ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿ        ➤ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ

(ನ್ಯೂಸ್ ಕಡಬ)newskadaba.com ಸುಳ್ಯ, ಫೆ.21. ಸಾಲದ ಕಂತು ತೀರಿಸಲಾಗದೆ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿಯೊಬ್ಬ ಪೆಟ್ರೊಲ್ ಚೆಲ್ಲಿ ಬ್ಯಾಂಕ್ ಗೆ ಬೆಂಕಿಹಚ್ಚಲು ಯತ್ನಿಸಿದಲ್ಲದೆ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಸುಳ್ಯದಿಂದ ವರದಿಯಾಗಿದೆ. ಸುಳ್ಯದ ರಥಬೀದಿಯಲ್ಲಿರುವ ಸರಸ್ವತಿ ಬ್ಯಾಂಕ್ ಗೆ ನುಗ್ಗಿದ ಸ್ಥಳೀಯ ಪೂರಿ ಅಂಗಡಿ ನಡೆಸುತ್ತಿದ್ದ ಶಿವಣ್ಣಗೌಡ ಎಂಬವರು ಈ ರೀತಿ ಮಾಡಲು ಯತ್ನಿಸಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. news  

ಸುಳ್ಯ: ಸಾಲ ತೀರಿಸಲಾಗದ ಹಿನ್ನೆಲೆ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿ        ➤ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top