News Kadaba

ಉಡುಪಿ: ತೆರವು ವೇಳೆ ಅಜಾಗ್ರತೆ     ➤  ಬಸ್‌ ನ ಮೇಲೆ ಬಿದ್ದ ಮರ, ಪ್ರಯಾಣಿಕರು ಪಾರು

(ನ್ಯೂಸ್ ಕಡಬ)newskadaba.com ಉಡುಪಿ, ಫೆ.22. ರಸ್ತೆ ಅಗಲೀಕರಣ ವೇಳೆ ಮರ ತೆರವುಗೊಳಿಸುತ್ತಿದ್ದಾಗ ರಸ್ತೆಯಲ್ಲಿ ನಿಲ್ಲಿಸಿದ್ದ ಬಸ್ ಮೇಲೆ ಮರ ಬಿದ್ದ ಆದ ಘಟನೆ ಉಡುಪಿ ಜಿಲ್ಲೆಯ ನೆಲ್ಲಿಕಾರು ಎಂಬಲ್ಲಿ ನಡೆದಿದೆ. ಕಾರ್ಕಳದಿಂದ ನೆಲ್ಲಿಕಾರು ಹೋಗುವ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಬದಿ ಇದ್ದ ಮರಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುತ್ತಿದ್ದರು. ಈ ವೇಳೆ ಎರಡು ಕಡೆಗಳಲ್ಲಿ ಬರುತ್ತಿದ್ದ, ವಾಹನಗಳನ್ನು ನಿಲ್ಲಿಸಿದ್ದರು.  

ಉಡುಪಿ: ತೆರವು ವೇಳೆ ಅಜಾಗ್ರತೆ     ➤  ಬಸ್‌ ನ ಮೇಲೆ ಬಿದ್ದ ಮರ, ಪ್ರಯಾಣಿಕರು ಪಾರು Read More »

ಕರಾವಳಿ, ಕರ್ನಾಟಕ

ಹಿರಿಯ ನಟ ಅನಂತ್ ನಾಗ್ ಬಿಜೆಪಿಗೆ ಸೇರ್ಪಡೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಫೆ.22. ಜೆ.ಎಚ್. ಪಟೇಲ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ, ಶಾಸಕ, ಪರಿಷತ್​ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ನಟ ಅನಂತ್ ನಾಗ್ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಲಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಸಚಿವ ಮುನಿರತ್ನ, ಡಾ‌. ಸುಧಾಕರ್ ಹಾಗೂ ಇತರ ನಾಯಕರು ಕಾರ್ಯಕ್ರದಲ್ಲಿ ಹಾಜರಿರಲಿದ್ದಾರೆ.  

ಹಿರಿಯ ನಟ ಅನಂತ್ ನಾಗ್ ಬಿಜೆಪಿಗೆ ಸೇರ್ಪಡೆ Read More »

ಕರ್ನಾಟಕ

ಚರ್ಮಗಂಟು ರೋಗದಿಂದ 74 ಜಾನುವಾರು ಮೃತ್ಯು

(ನ್ಯೂಸ್ ಕಡಬ)newskadaba.com  ಉಡುಪಿ, ಫೆ.22. ಹೈನುಗಾರಿಕೆ, ಕೃಷಿಕ ಸಮೂಹವನ್ನೇ ಬೆಚ್ಚಿ ಬೀಳಿಸಿರುವ ಚರ್ಮಗಂಟು ರೋಗಕ್ಕೆ ಜಿಲ್ಲೆಯಲ್ಲಿ ಈವರೆಗೂ 74 ಜಾನುವಾರುಗಳು ಸಾವನ್ನಪ್ಪಿವೆ. ಡಿಸೆಂಬರ್‌, ಜನವರಿ ತಿಂಗಳಲ್ಲಿ ರೋಗ ಪ್ರಮಾಣ ಹೆಚ್ಚಿದ್ದು, ಜಾನುವಾರುಗಳ ಜೀವ ಹಿಂಡಿತ್ತು, ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಜಾನುವಾರು ರೋಗಬಾಧೆಯಿಂದ ಬಳಲುತ್ತಿವೆ. ಜಿಲ್ಲೆಯಲ್ಲಿ 2,57,184 ಲಕ್ಷ ಜಾನುವಾರುಗಳಿದ್ದು, ಸಂಪೂರ್ಣ ಲಸಿಕೆ ಹಾಕಿಸುವ ಪ್ರಕ್ರಿಯೆ ಜಿಲ್ಲೆ ಪಶುವೈದ್ಯರು, ಸಿಬಂದಿ ತಂಡ ಮುಗಿಸಿದೆ. ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಕಾರ್ಕಳ ಭಾಗದಲ್ಲಿ ಹೈನುಗಾರಿಕೆ ಹೆಚ್ಚಿದೆ.  

ಚರ್ಮಗಂಟು ರೋಗದಿಂದ 74 ಜಾನುವಾರು ಮೃತ್ಯು Read More »

ಕರಾವಳಿ

ಪಕ್ಕದ ಮನೆಯವನೊಂದಿಗೆ ಅನೈತಿಕ ಸಂಬಂಧ        ➤  ನಡುರಸ್ತೆಯಲ್ಲೇ ಶಾಲಾ ಶಿಕ್ಷಕಿಯನ್ನು ಕೊಂದ ಪತಿ

(ನ್ಯೂಸ್ ಕಡಬ)newskadaba.com  ವಿಜಯಪುರ, ಫೆ.22. ಹಾಡುಹಗಲೇ ಶಾಲಾ ಶಿಕ್ಷಕಿಯನ್ನ ಕೊಲೆ ಮಾಡಲಾಗಿದ್ದು, ಇಂಡಿ ಪಟ್ಟಣದ ಅಂಜುಮನ್ ಕಾಲೇಜು ರಸ್ತೆಯಲ್ಲೇ ಘಟನೆ ನಡೆದಿದೆ. ದಿಲಶಾದ್ ಹವಾಲ್ದಾರ್​​ನನ್ನ ಆಕೆಯ ಪತಿ ಬಾದಶಾಹ ಶೇಖ್ ಹತ್ಯೆ ಮಾಡಿದ್ದಾನೆ. ಪತ್ನಿ ದಿಲಶಾದ್ ಹವಾಲ್ದಾರ್ ಪಕ್ಕದ ಮನೆಯವರೊಂದಿಗೆ ಅನೈತಿಕ ಸಂಬಂಧ ಹೊಂದಿದಕ್ಕಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.  

ಪಕ್ಕದ ಮನೆಯವನೊಂದಿಗೆ ಅನೈತಿಕ ಸಂಬಂಧ        ➤  ನಡುರಸ್ತೆಯಲ್ಲೇ ಶಾಲಾ ಶಿಕ್ಷಕಿಯನ್ನು ಕೊಂದ ಪತಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟ      ➤  ಗ್ಲೇಡಿಸ್ ಪಾಯ್ಸ್ ಗೆ ಪ್ರಥಮ ಸ್ಥಾನ

(ನ್ಯೂಸ್ ಕಡಬ)newskadaba.com  ಬಂಟ್ವಾಳ, ಫೆ.22. ಬಂಟ್ವಾಳ ತಾಲೂಕಿನ ಪಲ್ಲಮಜಲು ನಿವಾಸಿ ಗ್ಲೇಡಿಸ್ ಪಾಯ್ಸ್ ಅವರು ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ನಡೆದ 43ನೇ ರಾಷ್ಟೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. 65+ ವಿಭಾಗದ ತ್ರಿವಿಧ ಜಿಗಿತ, 800 ಮೀ. ಓಟ, 80ಮೀ. ಅಡೆತಡೆ ಓಟ, ಹಾಗೂ 4*100 ಮೀ. ರಿಲೇಯಲ್ಲಿ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.  

ಬಂಟ್ವಾಳ: ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟ      ➤  ಗ್ಲೇಡಿಸ್ ಪಾಯ್ಸ್ ಗೆ ಪ್ರಥಮ ಸ್ಥಾನ Read More »

ಕರಾವಳಿ, ಕ್ರೀಡಾ ನ್ಯೂಸ್

‘ಆಕ್ಸಿಜನ್ ದುರಂತ; ಡಿಕೆಶಿ ಆರೋಪಕ್ಕೆ ಸದನದಲ್ಲಿ ಉತ್ತರಿಸಿದ್ದೇನೆ’     ➤  ಸಚಿವ ಕೆ. ಸುಧಾಕರ್

(ನ್ಯೂಸ್ ಕಡಬ)newskadaba.com  ಚಾಮರಾಜನಗರ, ಫೆ.22. ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಸಂಬಂಧಿಸಿ ಡಿ.ಕೆ. ಶಿವಕುಮಾರ್ ಮಾಡಿದ ಆರೋಪಗಳಿಗೆ ಈಗಾಗಲೇ ಸದನದಲ್ಲಿ ಉತ್ತರಿಸಿದ್ದೇನೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಏನೇನು ಮಾತನಾಡುತ್ತಾರೆಯೋ ಮಾತನಾಡಲಿ. ಕೋವಿಡ್ ಫೈಲ್ಸ್ ಎಂಬುದಾಗಿ ಅವರು ಸಿನಿಮಾ ಮಾಡುತ್ತಾರಂತೆ. ಮಾಡಲಿ ನೋಡೋಣ. ಕೊರೊನಾ ಸಮಯದಲ್ಲಿ ಇಂತಹವರೆಲ್ಲಾ ಇರಬಾರದೆಂದು ದೇವರಿಗೂ ಗೊತ್ತಿತ್ತು. ಅದಕ್ಕಾಗಿಯೇ ಅವರನ್ನು ದೇವರು ಅಧಿಕಾರದಿಂದ ದೂರ ಇಟ್ಟಿದ್ದರು ಎಂದು ಟಾಂಗ್ ನೀಡಿದರು.  

‘ಆಕ್ಸಿಜನ್ ದುರಂತ; ಡಿಕೆಶಿ ಆರೋಪಕ್ಕೆ ಸದನದಲ್ಲಿ ಉತ್ತರಿಸಿದ್ದೇನೆ’     ➤  ಸಚಿವ ಕೆ. ಸುಧಾಕರ್ Read More »

ಕರ್ನಾಟಕ

ಮಂಗಳೂರು: ಬೈಕ್ ಅಪಘಾತ; ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com  ಮಂಗಳೂರು, ಫೆ.22. ಬೈಕ್ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬಿಜೈ ಚರ್ಚ್ ಹಾಲ್ ಮುಂಭಾಗದ ರಸ್ತೆಯಲ್ಲಿ ನಡೆದಿದೆ. ಎಸ್.ಡಿ.ಎಂ ಕಾಲೇಜಿನಲ್ಲಿ ಬಿಬಿಎಂ ತೃತೀಯ ವರ್ಷದ ವಿದ್ಯಾರ್ಥಿಯಾಗಿದ್ದ ಕವನ್ ಆಳ್ವ(20) ಮೃತ ಯುವಕ ಎಂದು ಗುರುತಿಲಾಗಿದೆ. ಆಟೋ ಚಾಲಕನ ನಿರ್ಲಕ್ಷ್ಯದ ತಿರುವು ಮತ್ತು ಹೆಲ್ಮೆಟ್ ರಹಿತ ಪ್ರಯಾಣದ ಕಾರಣ ಅಪಘಾತವಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಕದ್ರಿ ಸಂಚಾರಿ ಠಾಣೆಯಲ್ಲಿ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.    

ಮಂಗಳೂರು: ಬೈಕ್ ಅಪಘಾತ; ಯುವಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಮುಜುಗರ ಉಂಟುಮಾಡಬೇಡಿ ➤ ರೂಪಾ v/s ಸಿಂಧೂರಿಗೆ ಸರ್ಕಾರ ಆದೇಶ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.22. ರಾಜ್ಯದಲ್ಲಿ ಇಬ್ಬರು ಉನ್ನತ ಮಹಿಳಾ ಅಧಿಕಾರಿಗಳು ಬಹಿರಂಗವಾಗಿ ಕಿತ್ತಾಡಿಕೊಂಡು, ಸರ್ಕಾರ ಮತ್ತು ಸರ್ಕಾರದ ಅಧಿಕಾರಿಗಳನ್ನು ಮುಜುಗರದ ಪರಿಸ್ಥಿತಿಗೆ ಸಿಲುಕಿಸುತ್ತಿರುವುದರಿಂದ, ರಾಜ್ಯ ಸರ್ಕಾರವು ಇಬ್ಬರಿಗೂ ಛೀಮಾರಿ ಹಾಕಿದೆ ಮತ್ತು ಇಬ್ಬರೂ ಆರೋಪ ಮತ್ತು ಪ್ರತ್ಯಾರೋಪಗಳನ್ನು ಸಾರ್ವಜನಿಕವಾಗಿ ಮಾಡುವುದನ್ನು ತಡೆಯಲು ನಿರ್ದೇಶನ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ವಿಧಾನಮಂಡಲದ ಅಧಿವೇಶನದ ಬಗ್ಗೆ ಕಾಳಜಿ ವಹಿಸಿದ್ದರೂ ಸಹ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಐಪಿಎಸ್ ಅಧಿಕಾರಿ ರೂಪ ಡಿ ಮೌದ್ಗಿಲ್ ಮತ್ತು

ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಮುಜುಗರ ಉಂಟುಮಾಡಬೇಡಿ ➤ ರೂಪಾ v/s ಸಿಂಧೂರಿಗೆ ಸರ್ಕಾರ ಆದೇಶ Read More »

ಕರ್ನಾಟಕ

ವಿದ್ಯಾರ್ಥಿ ವೇತನ ಅರ್ಜಿ ಹಾಕಲು ತೆರೆದುಕೊಳ್ಳದ ವೆಬ್‌ಸೈಟ್‌

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.22. ಬಿಇಡಿ ಸೇರಿದಂತೆ ಪದವಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಕಳೆದ ಆರು ತಿಂಗಳಿಂದ ಪ್ರಯತ್ನ ಮಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ವೆಬ್‌ಸೈಟ್‌ ತೆರೆದುಕೊಳ್ಳುತ್ತಲೇ ಇಲ್ಲ. ಸ್ಥಳೀಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಎಸ್ಸಿ, ಎಸ್ಟಿವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಪಡೆಯಲು ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಬಿಇಡಿ ಸೇರಿದಂತೆ ಪದವಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದಕ್ಕೆ

ವಿದ್ಯಾರ್ಥಿ ವೇತನ ಅರ್ಜಿ ಹಾಕಲು ತೆರೆದುಕೊಳ್ಳದ ವೆಬ್‌ಸೈಟ್‌ Read More »

ಕರ್ನಾಟಕ

➤ ಖ್ಯಾತ ಮಲಯಾಳಂ ನಟಿ, ನಿರೂಪಕಿ ಸುಬಿ ಸುರೇಶ್ ನಿಧನ

(ನ್ಯೂಸ್ ಕಡಬ) newskadaba.com. ಕೊಚ್ಚಿ. ಫೆ.22.  ಖ್ಯಾತ ಮಲಯಾಳಂ ಕಿರುತೆರೆ ನಟಿ ಹಾಗೂ ನಿರೂಪಕಿ ಸುಬಿ ಸುರೇಶ್ ಇಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು.  ಅವರು ಯಕೃತ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಸುಬಿ ಓರ್ವ ನೃತ್ಯಗಾತಿ ಮತ್ತು ಕಾಮಿಡಿಯನ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ಮುಂದೆ ಅವರು ಟಿವಿ ಶೋಗಳ ನಿರೂಪಕಿಯಾಗಿ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು.

➤ ಖ್ಯಾತ ಮಲಯಾಳಂ ನಟಿ, ನಿರೂಪಕಿ ಸುಬಿ ಸುರೇಶ್ ನಿಧನ Read More »

ರಾಷ್ಟ್ರೀಯ ನ್ಯೂಸ್
Scroll to Top