News Kadaba

ಒಂದನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ➤ ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶನ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.23. ಕರ್ನಾಟಕದಲ್ಲಿ ರಾಜ್ಯ ಸರ್ಕಾರದಿಂದ 1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯಗೊಳಿಸಿ ಆದೇಶಿಸಿತ್ತು. ಆ ಬಳಿತ ತೀವ್ರ ವಿರೋಧದ ನಂತರ, ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸೋದಾಗಿ ಆದೇಶದಲ್ಲಿ ತಿಳಿಸಿತ್ತು. ಇದೀಗ ಕೇಂದ್ರದ ಶಿಕ್ಷಣ ಸಚಿವಾಲಯದಿಂದಲೇ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಲೆಗಳಲ್ಲಿ 1ನೇ ತರಗತಿ ದಾಖಲು ಮಾಡಲು 6 ವರ್ಷ ನಿಗದಿ ಮಾಡುವಂತೆ ನಿರ್ದೇಶನ ನೀಡಿದೆ. ಪ್ರಸ್ತುತ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ 1ನೇ ತರಗತಿಗೆ ಮಕ್ಕಳ ದಾಖಲು ಆಗೋದಕ್ಕೆ […]

ಒಂದನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ➤ ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶನ Read More »

ಕರ್ನಾಟಕ

‘SSLC’ ಪಾಸಾದವರಿಗೆ ಗುಡ್ ನ್ಯೂಸ್   ➤  ಫೆ.28 ರಂದು ಅಂಚೆ ಪ್ರತಿನಿಧಿಗಳ ನೇರ ಸಂದರ್ಶನ

(ನ್ಯೂಸ್ ಕಡಬ)newskadaba.com ಬಳ್ಳಾರಿ, ಫೆ.23. ಭಾರತೀಯ ಅಂಚೆ ಇಲಾಖೆಯ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಪಾಲಿಸಿಗಳ ವ್ಯವಹಾರಕ್ಕಾಗಿ ಕಮೀಷನ್ ಆಧಾರದ ಮೇಲೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನೇರ ಸಂದರ್ಶನಕ್ಕಾಗಿ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ವಿ.ಎಲ್.ಚಿತಕೋಟೆ ಅವರು ತಿಳಿಸಿದ್ದಾರೆ. ಸಂದರ್ಶನವು ಫೆ.28ರಂದು ಬೆಳಗ್ಗೆ 10ಕ್ಕೆ ನಗರದ ಕೋಟೆ ಪ್ರದೇಶದಲ್ಲಿರುವ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಸಲಾಗುವುದು.  

‘SSLC’ ಪಾಸಾದವರಿಗೆ ಗುಡ್ ನ್ಯೂಸ್   ➤  ಫೆ.28 ರಂದು ಅಂಚೆ ಪ್ರತಿನಿಧಿಗಳ ನೇರ ಸಂದರ್ಶನ Read More »

ಕರ್ನಾಟಕ

ನಟಿ ರಾಖೀ ಸಾವಂತ್‌ ಪತಿ ಫೆ.27 ರವರೆಗೆ ಪೊಲೀಸ್‌ ವಶಕ್ಕೆ

(ನ್ಯೂಸ್ ಕಡಬ)newskadaba.com ಮೈಸೂರು, ಫೆ.23. ಇರಾನ್‌ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಕರಣ ಸಂಬಂಧ ನಟಿ ರಾಖೀ ಸಾವಂತ್‌ ಪತಿ ಆದಿಲ್‌ ಖಾನ್‌ ದುರಾನಿಯನ್ನು ಫೆ.27 ರವರೆಗೆ ಪೊಲೀಸ್‌ ವಶಕ್ಕೆ ನೀಡಿ ಮೈಸೂರು ನ್ಯಾಯಾಲಯ ಆದೇಶಿಸಿದೆ. ಈ ದೂರಿನ ಮೇರೆಗೆ ರಾಖೀ ಸಾವಂತ್‌ ಪತಿ ಆದಿಲ್‌ ಖಾನ್‌ ವಿರುದ್ಧ ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಆದಿಲ್‌ ಖಾನ್‌ ದುರಾನಿಯನ್ನು ಪೊಲೀಸರು ಬುಧವಾರ ಕೋರ್ಟ್‌ಗೆ ಹಾಜರುಪಡಿಸಿದ್ದರು.  

ನಟಿ ರಾಖೀ ಸಾವಂತ್‌ ಪತಿ ಫೆ.27 ರವರೆಗೆ ಪೊಲೀಸ್‌ ವಶಕ್ಕೆ Read More »

ಕರ್ನಾಟಕ

ಉಳ್ಳಾಲ: ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಢಿಕ್ಕಿ     ➤  ಯುವಕನೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com ಉಳ್ಳಾಲ, ಫೆ.23. ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರಿನಲ್ಲಿದ್ದ ಸವಾರ ಮೃತಪಟ್ಟು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಉಳ್ಳಾಲದಲ್ಲಿ ವರದಿಯಾಗಿದೆ. ಅಂಗರಗುಂಡಿ ನಿವಾಸಿ ಮೊಹಮ್ಮದ್ ನೌಫಾಲ್ (26)ಮೃತ ಯುವಕ ಎಮದು ಗುರುತಿಸಲಾಗಿದೆ. ಸಹಸವಾರ ಉಮ್ಮರ್ ಫಾರುಕ್ ಎಂಬವರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಪಂಪ್ವೆಲ್ ಕಡೆಯಿಂದ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಈ ಕುರಿತು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.    

ಉಳ್ಳಾಲ: ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಢಿಕ್ಕಿ     ➤  ಯುವಕನೋರ್ವ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ !      ➤  ಓರ್ವ ಆರೋಪಿಯ ಬಂಧನ

(ನ್ಯೂಸ್ ಕಡಬ)newskadaba.com ಉಡುಪಿ, ಫೆ.23. ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕೊರಂಗ್ರಪಾಡಿ, ಮಾತಾ ಶ್ರೀ ವಾಸುಕಿ ನಗರ 5 ನೇ ಕ್ರಾಸ್ ನ ಇಕ್ಬಾಲ್ ಶೇಕ್ (32) ಎಂದು ಗುರುತಿಸಲಾಗಿದೆ. ಮಣಿಪಾಲದ ಆರ್.ಟಿ.ಓ ಬಳಿ ಸ್ಕೂಟಿಯಲ್ಲಿ ಮಾದಕ ವಸ್ತು ಹಾಗೂ ಗಾಂಜಾ ಮಾರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದು, ಆರೋಪಿಯ ವಶದಲ್ಲಿದ್ದ 136 ಗ್ರಾಂ ಗಾಂಜಾ ‌, 0.36 ಗ್ರಾಂ ಎಂ ಡಿ ಎಂ ಎ (ಪ್ಲಾಸ್ಟಿಕ್

ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ !      ➤  ಓರ್ವ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಅಪ್ರಾಪ್ತ ಬಾಲಕಿ ನಾಪತ್ತೆ!

(ನ್ಯೂಸ್ ಕಡಬ)newskadaba.com ಬಂಟ್ವಾಳ, ಫೆ.23. ಅಪ್ರಾಪ್ತ ಬಾಲಕಿಯೊರ್ವಳು ನಾಪತ್ತೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುಂಜಾಲಕಟ್ಟೆ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಪತ್ತೆಯಾದ ಅಪ್ರಾಪ್ತ ಬಾಲಕಿ ಎಂದು ತಿಳಿದುಬಂದಿದೆ. ಫೆ.20 ರಂದು ರಾತ್ರಿ ಮನೆಯಿಂದ ನಾಪತ್ತೆಯಾದ ಬಗ್ಗೆ ಬಾಲಕಿಯ ತಾಯಿ ಠಾಣೆಗೆ ದೂರು ನೀಡಿದ್ದಾರೆ. ಮನೆಯಿಂದ ರಾತ್ರಿ ವೇಳೆಯಲ್ಲಿ ಬಾಲಕಿ ನಾಪತ್ತೆ ಪ್ರಕರಣದ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಬಾಲಕಿಯ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.  

ಬಂಟ್ವಾಳ: ಅಪ್ರಾಪ್ತ ಬಾಲಕಿ ನಾಪತ್ತೆ! Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ತಂದೆಯನ್ನು ಕೊಂದ ಮಗನಿಗೆ ಮೂರು ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ !

(ನ್ಯೂಸ್ ಕಡಬ)newskadaba.com ಉಡುಪಿ, ಫೆ.23. ಮೂರು ವರ್ಷಗಳ ಹಿಂದೆ ತಂದೆಯನ್ನು ಕೊಂದ ಆರೋಪಿ ಮಗನಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ದಿನೇಶ್ ಹೆಗ್ಡೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪೆರಂಪಳ್ಳಿ ಭಂಡಾರ ಮನೆ ನಿವಾಸಿ ಪ್ರಜೋತ್ ಶೆಟ್ಟಿ (50) ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಆರೋಪಿ ಎಂದು ತಿಳಿದುಬಂದಿದೆ. 35 ಸಾಕ್ಷಿಗಳ ಪೈಕಿ 25 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿದೆ. ಜೊತೆಗೆ ತಾಯಿಗೆ

ಉಡುಪಿ: ತಂದೆಯನ್ನು ಕೊಂದ ಮಗನಿಗೆ ಮೂರು ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ ! Read More »

ಕರಾವಳಿ, ಕ್ರೈಮ್ ನ್ಯೂಸ್

ಯಾತ್ರೆಗೆ ತೆರಳಿದ್ದ ಬಸ್ ಮತ್ತು ಟ್ರಕ್ ನಡುವೆ ಅಪಘಾತ ! ➤ ಐವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಸೌದಿ ಅರೇಬಿಯಾ, ಫೆ.23. ಮೆಕ್ಕಾದಲ್ಲಿ ಉಮ್ರಾ ಯಾತ್ರೆ ನಿರ್ವಹಿಸಿ ಮದೀನಾಕ್ಕೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಕರ್ನಾಟಕ ಮೂಲದ ಐವರು ಮೃತಪಟ್ಟಿರುವ ಘಟನೆ ಬುಧವಾರದಂದು ರಾತ್ರಿ ನಡೆದಿದೆ. ಕಲಬುರಗಿಯ ನೂರ್ ಬಾಗ್ ನಿವಾಸಿ ಶಫೀದ್ ಹುಸೈನ್, ಸಾಮಾಜಿಕ ಕಾರ್ಯಕರ್ತ ಝೈನುದ್ದೀನ್ ಸಾಹೇಬ್, ರೆಹನಾ ಬೇಗಮ್, ಬಡೇಜಾನ್ ಸುಲ್ಲದ್, ಸಿರಾಜ್ ಬೇಗಮ್ ಸುಲ್ಲದ್, ಸಮೀರ್ ಸುಲ್ಲದ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರು ಹಜ್ ಮತ್ತು ಉಮ್ರಾ ಟೂರ್ ಆ್ಯಂಡ್ ಟ್ರಾವೆಲ್ಸ್ ಮೂಲಕ ಮೆಕ್ಕಾ ಪ್ರವಾಸ ಕೈಗೊಂಡಿದ್ದರು. ಉಮ್ರಾ

ಯಾತ್ರೆಗೆ ತೆರಳಿದ್ದ ಬಸ್ ಮತ್ತು ಟ್ರಕ್ ನಡುವೆ ಅಪಘಾತ ! ➤ ಐವರು ಸ್ಥಳದಲ್ಲೇ ಮೃತ್ಯು Read More »

ಕ್ರೈಮ್ ನ್ಯೂಸ್

ಪಿಕಪ್ ನಿಂದ ಹೊರಬಂದು ಕಾರಿನೊಳಗೆ ಹೊಕ್ಕ ಅಲ್ಯುಮೀನಿಯಂ ಪಟ್ಟಿಗಳು !           ➤  ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.23. ಪಿಕ್-ಅಪ್ ವಾಹನದಲ್ಲಿ ಸಾಗಿಸುತ್ತಿದ್ದ ಅಲ್ಯೂಮಿನಿಯಂ ಪಟ್ಟಿಗಳು ಜಾರಿ ಕಾರಿನ ಒಳಗೆ ಹೊಕ್ಕು ಕಾರು ಚಾಲಕ ಪವಾಡ ಸದೃಶವಾಗಿ ಪಾರಾದ ಘಟನೆ ನಂತೂರು ಜಂಕ್ಷನ್‌ನಲ್ಲಿ ಸಂಭವಿಸಿದೆ. ಅಲ್ಯೂಮಿನಿಯಂ ಪಟ್ಟಿಗಳನ್ನು ಹೊತ್ತ ಪಿಕ್-ಅಪ್ ಹಾಗೂ ಕಾರು ಕೆಪಿಟಿಯಿಂದ ಪಂಪ್‌ವೆಲ್ ಕಡೆಗೆ ಚಲಿಸುತ್ತಿದ್ದವು. ನಂತೂರು ಜಂಕ್ಷನ್‌ ನಲ್ಲಿ ಕಾರು ಚಾಲಕ ಬ್ರೇಕ್‌ ಹಾಕಿದಾಗ ಪಿಕ್‌ ಅಪ್‌ ನಲ್ಲಿದ್ದ ಪಟ್ಟಿಗಳು ಕಾರಿನ ಹಿಂಭಾಗದಿಂದ ಒಳಗೆ ಹೊಕ್ಕಿವೆ ಎಂದು ವರದಿ ತಿಳಿಸಿದೆ.  

ಪಿಕಪ್ ನಿಂದ ಹೊರಬಂದು ಕಾರಿನೊಳಗೆ ಹೊಕ್ಕ ಅಲ್ಯುಮೀನಿಯಂ ಪಟ್ಟಿಗಳು !           ➤  ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್

ತಂದೆಯನ್ನ ಕಾಣಲು ಜಮೀನಿಗೆ ಹೋಗಿದ್ದ ಬಾಲಕ !       ➤  ಕಾಲುವೆಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ)newskadaba.com ವಿಜಯಪುರ, ಫೆ.22. ಕಾಲುವೆಯಲ್ಲಿ ಜಾರಿಬಿದ್ದು ಬಾಲಕ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಚಿಕ್ಕ ಅಸಂಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕಲ್ಲಯ್ಯ ಹಿರೇಮಠ(13) ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿರುವ ಬಾಲಕ. ಶಾಲೆಯಿಂದ ಮನೆಗೆ ಬಂದಿದ್ದ ಬಾಲಕ, ಬಳಿಕ ತಂದೆಯನ್ನ ಕಾಣಲು ಜಮೀನಿಗೆ ತೆರಳಿದ್ದ. ಈ ಹಿಂದೆಯೂ ತಂದೆಯಿಂದ ಜಮೀನಿಗೆ ಹೋಗುತ್ತಿದ್ದ ಬಾಲಕ. ಈಜು ಬಾರದ ಬಾಲಕ ಕಾಲುವೆಯಿಂದ ಹೊರಬರಲಾಗದೆ ಮುಳುಗಿ ಮೃತಪಟ್ಟಿದ್ದಾನೆ.  

ತಂದೆಯನ್ನ ಕಾಣಲು ಜಮೀನಿಗೆ ಹೋಗಿದ್ದ ಬಾಲಕ !       ➤  ಕಾಲುವೆಗೆ ಬಿದ್ದು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top