News Kadaba

ಭಟ್ಕಳ ಒಂದೇ ಮನೆಯ ನಾಲ್ವರ ಹತ್ಯೆ ಪ್ರಕರಣ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com. ಭಟ್ಕಳ. ಫೆ.27. ತಾಲೂಕಿನ ಹಾಡವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿಯನ್ನು ಭಟ್ಕಳ ಪೊಲೀಸರು ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ  ಕೊಲೆಯಾದವರ ಸೊಸೆ ವಿದ್ಯಾ ಭಟ್ ಹಾಗೂ ಶ್ರೀಧರ್ ಭಟ್​ರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪಿ ವಿನಯ್​ ಭಟ್ ಪರಾರಿಯಾಗಿದ್ದ. ನಿನ್ನೆ ಆತ ಇರುವ ಖಚಿತ ಮಾಹಿತಿ ಮೇರೆಗೆ ಆರೋಪಿ ವಿನಯ್​ ಭಟ್​ನನ್ನು ಭಾನುವಾರ ಶಿವಮೊಗ್ಗದಲ್ಲಿ ಬಂಧಿಸಿ ಭಟ್ಕಳಕ್ಕೆ ಕರೆತಂದಿದ್ದಾರೆ. ಫೆಬ್ರವರಿ 24ರಂದು ಆಸ್ತಿ […]

ಭಟ್ಕಳ ಒಂದೇ ಮನೆಯ ನಾಲ್ವರ ಹತ್ಯೆ ಪ್ರಕರಣ ➤ ಆರೋಪಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ಬೇಸಿಗೆಯಲ್ಲಿ ಬ್ರಾಯ್ಲರ್ ಕೋಳಿಗಳ ಸಾವು ಹೆಚ್ಚಳ ➤ದರವೂ ಏರಿಕೆ

(ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.27. ಬೇಸಿಗೆಯಲ್ಲಿ ಕೋಳಿಗಳು ತಿನ್ನುವ ಆಹಾರದ ಪ್ರಮಾಣ ಕಡಿಮೆ ಮಾಡುತ್ತವೆ. ಇದರಿಂದ 35-37 ದಿನಗಳಲ್ಲಿ 2 ಕೆಜಿ ಬರಬೇಕಾದ ಕೋಳಿಯ ತೂಕ ಬೇಸಿಗೆಯಲ್ಲಿ 40 ರಿಂದ 50 ದಿನಗಳು ಆಗುತ್ತವೆ. ಕೋಳಿ ಸಾಕಾಣೆದಾರರು ಕೂಡ ಬಹಳ ಎಚ್ಚರದಿಂದ ಸಾಕಲು ಮುಂದಾಗುತ್ತಾರೆ. ಇದರ ಜತೆಗೆ ಬಿಸಿಲಿನ ಹೊಡೆತವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಕೋಳಿಗಳ ಮರಣ ಸಂಖ್ಯೆ ಕೂಡ ಹೆಚ್ಚಾಗುತ್ತದೆ, ಎಂದು ಕರ್ನಾಟಕ ಪೌಲ್ಟ್ರಿ ಫಾರ್ಮಸ್ ಬ್ರೀಡರ್ಸ್ ಅಸೋಸಿಯೇಶನ್ ಕೆಪಿಎಫ್‍ಬಿಎ ಅಧ್ಯಕ್ಷ ಡಾ. ಸುಶಾಂತ್ ರೈ

➤ ಬೇಸಿಗೆಯಲ್ಲಿ ಬ್ರಾಯ್ಲರ್ ಕೋಳಿಗಳ ಸಾವು ಹೆಚ್ಚಳ ➤ದರವೂ ಏರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಲಪಾತದಲ್ಲಿ ಬಿದ್ದಿದ್ದ ಮಗುವನ್ನು ರಕ್ಷಿಸಿದ ಯುವಕ ಇಂದು ಡಿಸಿ ಕಾರು ಚಾಲಕ

(ನ್ಯೂಸ್ ಕಡಬ)newskadaba.com  ತಮಿಳುನಾಡು, ಫೆ.25. ಕುರ್ಟಾಲಂ ಜಲಪಾತದಲ್ಲಿ ಬಿದ್ದಿದ್ದ ಮಗುವನ್ನು ರಕ್ಷಿಸಿದ್ದ ವಿಜಯ ಕುಮಾರ್​ಗೆ ತೂತುಕುಡಿ ಜಿಲ್ಲಾಧಿಕಾರಿಗಳ ಕಾರು ಚಾಲಕನಾಗಿ ತಾತ್ಕಾಲಿಕವಾಗಿ ಕೆಲಸ ನೀಡಲಾಗಿದೆ. ತೂತುಕುಡಿ ಸಮೀಪದ ವಿಲತ್ತಿಕುಲಂ ನಿವಾಸಿಯಾದ ವಿಜಯ ಕುಮಾರ್​, ಆ ಪ್ರದೇಶದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕುರ್ಟಾಲಂ ಜಲಪಾತಕ್ಕೆ ಹೋಗಿದ್ದ. ಆ ವೇಳೆ ಅಲ್ಲಿಗೆ ಕೇರಳ ರಾಜ್ಯದ ಪಾಲಕ್ಕಾಡ್‌ನ ಹರಿಣಿ ಎಂಬ ಮಗು ತನ್ನ ಕುಟುಂಬ ಸಮೇತ ಪ್ರವಾಸ ಬಂದಿದ್ದರು.  

ಜಲಪಾತದಲ್ಲಿ ಬಿದ್ದಿದ್ದ ಮಗುವನ್ನು ರಕ್ಷಿಸಿದ ಯುವಕ ಇಂದು ಡಿಸಿ ಕಾರು ಚಾಲಕ Read More »

ರಾಷ್ಟ್ರೀಯ ನ್ಯೂಸ್

ಖಾಸಗಿ ಬಸ್ ಮತ್ತು ಆಟೋ ನಡುವೆ ಮುಖಾಮುಖಿ ಢಿಕ್ಕಿ     ➤  ಹಲವರಿಗೆ ಗಾಯ

(ನ್ಯೂಸ್ ಕಡಬ)newskadaba.com  ಹನೂರು, ಫೆ.25. ಖಾಸಗಿ ಬಸ್ ಹಾಗೂ ಗೂಡ್ಸ್ ಆಟೋ ನಡುವೆ ಮುಖಾಮುಖಿ ಢಿಕ್ಕಿಯಾಗಿ ಐವರು ಗಾಯಗೊಂಡು ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ಎಲ್ಲೇಮಾಳ ಸಮೀಪದ ಆಂಜನೇಯ ದೇವಾಲಯದ ಬಳಿ ಸಂಭವಿಸಿದೆ. ಮೈಸೂರಿನ ಜನತಾ ನಗರದ ನಿವಾಸಿಗಳಾದ ಒಂದೇ ಕುಟುಂಬದ ಪವಿತ್ರ(10), ಪೂಜಾ(23), ಮಹದೇವಮ್ಮ(40), ಜಯಲಕ್ಷ್ಮಿ(18), ಸೇರಿದಂತೆ ಮಂಜುಳಾ (40)ರವರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.  

ಖಾಸಗಿ ಬಸ್ ಮತ್ತು ಆಟೋ ನಡುವೆ ಮುಖಾಮುಖಿ ಢಿಕ್ಕಿ     ➤  ಹಲವರಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಸತ್ತ ಡಾಲ್ಫಿನ್ ಮೀನು ತಣ್ಣೀರು ಬಾವಿ ಕಿನಾರೆಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.25. ನಗರದ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಡಾಲ್ಫಿನ್ ಮೀನಿನ ಮೃತದೇಹ ಪತ್ತೆಯಾಗಿದೆ. ಮಧ್ಯಾಹ್ನ ಎರಡು ಗಂಟೆಯ ವೇಳೆ ಅಲೆಗಳ ಜೊತೆಯಲ್ಲಿ ಮೀನಿನ ಮೃತದೇಹ ದಡಕ್ಕೆ ಸೇರಿದೆ. ಸಂಜೆ ವೇಳೆ ಹೊಂಡ ತೋಡಿ ಸಮುದ್ರದ ಬದಿಯಲ್ಲೇ ಹೂತು ಹಾಕಲಾಯಿತು. ಫಾತಿಮಾ ಚರ್ಚ್‌ ಭಾಗದಲ್ಲಿ ಭಾರಿ ಗಾತ್ರದ ಮೀನು ದಡಕ್ಕೆ ಬಂದು ಬಿದ್ದಾಗ ಅಲ್ಲಿದ್ದವರು ಕುತೂಹಲದಿಂದ ಅದರತ್ತ ಓಡಿದ್ದರು. ಫೆರಿ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಬ್ಲೂ ಫ್ಲ್ಯಾಗ್ ಯೋಜನೆಯ ಕಾರ್ಮಿಕರು, ತಣ್ಣೀರು ಬಾವಿ ಬೀಚ್‌

ಮಂಗಳೂರು: ಸತ್ತ ಡಾಲ್ಫಿನ್ ಮೀನು ತಣ್ಣೀರು ಬಾವಿ ಕಿನಾರೆಯಲ್ಲಿ ಪತ್ತೆ Read More »

ಕರಾವಳಿ

ಮೊಬೈಲ್‌ ಕಳವು ಪತ್ತೆಗೆ ಬಂತು ಪೋರ್ಟಲ್‌

(ನ್ಯೂಸ್ ಕಡಬ)newskadaba.com ದಾವಣಗೆರೆ, ಫೆ.25. ಇನ್ನು ಮುಂದೆ ಯಾರದ್ದಾದರೂ ಮೊಬೈಲ್ ದೂರವಾಣಿ ಸಲಕರಣೆ ಕಳ್ಳತನಕ್ಕೆ ಒಳಗಾದರೆ, ‘ಅಯ್ಯೋ ದುಬಾರಿ ಮೊತ್ತದ ಮೊಬೈಲ್‌ ಕಳೆಯಿತು’, ‘ಸಂಪರ್ಕ ಸಂಖ್ಯೆಗಳು ಹೋದವು’, ‘ಪ್ರಮುಖ ಫೋಟೊಗಳು, ದಾಖಲೆಗಳು ಹೋದವು’ ಎಂದೆಲ್ಲ ಕೊರಗಬೇಕಿಲ್ಲ. ಕಳೆದು ಹೋದ ಮೊಬೈಲ್‌ ಪತ್ತೆಗೆ ಹೊಸ ವೆಬ್‌ ಪೋರ್ಟಲ್‌ ಬಂದಿದೆ. ಈ ಪೋರ್ಟಲ್‌ ಮೂಲಕ ನೀವು ನಿಮ್ಮ ಮೊಬೈಲ್‌ ಪತ್ತೆ ಮಾಡಬಹುದಾಗಿದೆ.

ಮೊಬೈಲ್‌ ಕಳವು ಪತ್ತೆಗೆ ಬಂತು ಪೋರ್ಟಲ್‌ Read More »

ಕರ್ನಾಟಕ

ಮಾನಸಿಕ ಅಸ್ವಸ್ಥ ಮಹಿಳೆಗೆ ಚಿಕಿತ್ಸೆ        ➤  ಮಾನವೀಯತೆ ಮೆರೆದ ಸಾಮಾಜಿಕ ಕಾರ್ಯಕರ್ತರು

(ನ್ಯೂಸ್ ಕಡಬ)newskadaba.com  ಉಡುಪಿ, ಫೆ.25.  45 ದಿನಗಳ ಹಿಂದೆ ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅವರಿಂದ ರಕ್ಷಿಸಲ್ಪಟ್ಟು ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿರುವ ಆಂಧ್ರ ಮೂಲದ ಅನು (29) ಎಂಬ ಮಹಿಳೆಯ ವಾರೀಸುದಾರರು ಪತ್ತೆಯಾಗದ ಕಾರಣ ತಾತ್ಕಾಲಿಕವಾಗಿ ಮಂಜೇಶ್ವರದ ಸ್ನೇಹಾಲಯಕ್ಕೆ ವಿಶು ಶೆಟ್ಟಿ ದಾಖಲಿಸಿದ್ದಾರೆ. ಮಹಿಳೆಗೆ 45 ದಿನಗಳ ಕಾಲ ಚಿಕಿತ್ಸೆ ನೀಡಿ ಬಾಳಿಗಾ ಆಸ್ಪತ್ರೆ ವಿಶೇಷ ರಿಯಾಯಿತಿ ಸೇವೆ ನೀಡಿ ಸಹಕರಿಸಿದೆ.  

ಮಾನಸಿಕ ಅಸ್ವಸ್ಥ ಮಹಿಳೆಗೆ ಚಿಕಿತ್ಸೆ        ➤  ಮಾನವೀಯತೆ ಮೆರೆದ ಸಾಮಾಜಿಕ ಕಾರ್ಯಕರ್ತರು Read More »

ಕರಾವಳಿ, ಕರ್ನಾಟಕ

ಕುಡಿಯಲು ಹಣ ನೀಡದ ಪತ್ನಿ ಕೊಂದ ಪತಿರಾಯ       ➤  ಆರೋಪಿ ಅಂದರ್

(ನ್ಯೂಸ್ ಕಡಬ)newskadaba.com  ಕಲಬುರಗಿ, ಫೆ.25. ಮದ್ಯ ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣದಿಂದ ಪತ್ನಿಯನ್ನು ಪತಿ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ದಾರುಣ ಘಟನೆ ಕಾಳಗಿ ತಾಲೂಕಿನ ತೆಂಗಳಿ ಗ್ರಾಮದಲ್ಲಿ ನಡೆದಿದೆ. ಈರಮ್ಮ ಶಿವಯ್ಯ ಮಠಪತಿ ( 37) ಕೊಲೆಯಾದ ಮಹಿಳೆ. ಆಕೆಯ ಪತಿ ಶಿವಯ್ಯ ಮಠಪತಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  

ಕುಡಿಯಲು ಹಣ ನೀಡದ ಪತ್ನಿ ಕೊಂದ ಪತಿರಾಯ       ➤  ಆರೋಪಿ ಅಂದರ್ Read More »

ಕರ್ನಾಟಕ

ಸಿಇಟಿ ಪ್ರವೇಶ ಪರೀಕ್ಷೆ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.25. ಎಂಜಿನಿಯರಿಂಗ್‌ ಸಹಿತ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆಸಲಾಗುವ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳಾಪಟ್ಟಿ ಶುಕ್ರವಾರ ಪ್ರಕಟಗೊಂಡಿದ್ದು, ಮೇ 20 ಮತ್ತು 22ರ ವರೆಗೆ ನಡೆಯಲಿವೆ. ಮಾರ್ಚ್‌ 1ರಿಂದ ಈ ಸಂಬಂಧದ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದ್ದು, 20 ಮತ್ತು 21ರಂದು ಎಂಜಿನಿಯರಿಂಗ್‌, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಆಯುಷ್‌, ಯೋಗ, ಯುನಾನಿ ಮತ್ತಿತರ ಕೋರ್ಸ್‌ ಗಳ ಪ್ರವೇಶಕ್ಕೆ ಪರೀಕ್ಷೆ ನಡೆಯಲಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಸಿಇಟಿ ಪ್ರವೇಶ ಪರೀಕ್ಷೆ ವೇಳಾಪಟ್ಟಿ ಪ್ರಕಟ Read More »

ಕರ್ನಾಟಕ

ಮೂವರು ಪೊಲೀಸ್ ಸಿಬ್ಬಂದಿಯ ಹತ್ಯೆಗೈದ ನಕ್ಸಲರು

(ನ್ಯೂಸ್ ಕಡಬ)newskadaba.com  ಛತ್ತೀಸ್ ಗಢ, ಫೆ.25. ನಕ್ಸಲೀಯರೊಂದಿಗಿನ ಎನ್‌ಕೌಂಟರ್‌ನಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್‌ಐ) ಸೇರಿದಂತೆ ಮೂವರು ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಸಿಬ್ಬಂದಿ ಹತರಾಗಿರುವ ಘಟನೆ ಛತ್ತೀಸ್‌ ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಎಎಸ್ಐ ರಾಮುರಾಮ್ ನಾಗ್, ಸಹಾಯಕ ಕಾನ್ಸ್ಟೇಬರ್ ಕುಂಜಮ್ ಜೋಗಾ ಮತ್ತು ವಂಜಮ್ ಭೀಮಾ ಎಂದು ಗುರುತಿಸಲಾಗಿದೆ.  

ಮೂವರು ಪೊಲೀಸ್ ಸಿಬ್ಬಂದಿಯ ಹತ್ಯೆಗೈದ ನಕ್ಸಲರು Read More »

ರಾಷ್ಟ್ರೀಯ ನ್ಯೂಸ್
Scroll to Top