News Kadaba

➤ ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಕುಸಿದು ಬಿದ್ದು ಯುವಕ ಮೃತ್ಯು..

(ನ್ಯೂಸ್ ಕಡಬ) newskadaba.com. ತೆಲಂಗಾಣ .  ಫೆ.28. ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿರುವಾಗ ಕುಸಿದುಬಿದ್ದು, 19 ವರ್ಷದ ಯುವಕನೋರ್ವ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಯುವಕ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯವನೆಂದು ತಿಳಿದುಬಂದಿದೆ. ತನ್ನ ಸಂಬಂಧಿಕರ ಮದುವೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೈದರಾಬಾದ್​ನಿಂದ 200 ಕಿ.ಮೀ ದೂರದಲ್ಲಿರುವ ನಿರ್ಮಲ್ ಜಿಲ್ಲೆಯ ಪಾರ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ. ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಯುವಕ ಡಿಜೆಯಲ್ಲಿ ಹಾಡಿ ಕುಣಿಯುತ್ತಿದ್ದ. […]

➤ ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಕುಸಿದು ಬಿದ್ದು ಯುವಕ ಮೃತ್ಯು.. Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಡುಪಿ: ಅವಧಿ ಮೀರಿ ಡಿಜೆ ಸೌಂಡ್   ➤ ಮೆಹಂದಿ ಕಾರ್ಯಕ್ರಮದ ಮನೆಗೆ ಪೊಲೀಸ್ ದಾಳಿ

(ನ್ಯೂಸ್ ಕಡಬ)newskadaba.com ಉಡುಪಿ, ಫೆ. 28. ಮೆಹಂದಿ ಕಾರ್ಯಕ್ರಮದಲ್ಲಿ ಅವಧಿ ಮೀರಿ ಅತೀ ಕರ್ಕಶವಾದ ಡಿ.ಜೆ ಸೌಂಡ್‌ ಹಾಕಿದ್ದ ಮನೆಗೆ ಪೊಲೀಸರು ದಾಳಿ ಮಾಡಿದ ಘಟನೆ ಕುಂಜಿಬೆಟ್ಟು ಪರಿಸರದಲ್ಲಿ ನಡೆದಿದೆ. ಕುಂಜಿಬೆಟ್ಟು ಪರಿಸರದಲ್ಲಿ ಫೆ. 26ರಂದು ತಡರಾತ್ರಿ 1.30ರ ಸುಮಾರಿಗೆ ಮೆಹಂದಿ ಕಾರ್ಯಕ್ರಮದಲ್ಲಿ ಅತೀ ಕರ್ಕಶವಾದ ಡಿಜೆ ಸೌಂಡ್‌ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನ ಮೇರೆಗೆ ರೌಂಡ್ಸ್‌ ಕರ್ತವ್ಯದಲ್ಲಿದ್ದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ 76 ಬಡಗಬೆಟ್ಟು ಗ್ರಾಮದ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದ

ಉಡುಪಿ: ಅವಧಿ ಮೀರಿ ಡಿಜೆ ಸೌಂಡ್   ➤ ಮೆಹಂದಿ ಕಾರ್ಯಕ್ರಮದ ಮನೆಗೆ ಪೊಲೀಸ್ ದಾಳಿ Read More »

ಕರಾವಳಿ

ಸುರತ್ಕಲ್: ಗಾಂಜಾ ಅಮಲಿನಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ ➤ ಮೂವರ ಬಂಧನ

(ನ್ಯೂಸ್ ಕಡಬ)newskadaba.com ಸುರತ್ಕಲ್, ಫೆ.28. ಗಾಂಜಾ ಅಮಲಿ ನಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿ, ರಿಕ್ಷಾಕ್ಕೆ ಹಾನಿ ಮಾಡಿದ ಘಟನೆಗೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಪಣಂಬೂರು ಮೋಗವೀರ ಮಹಾಸಭಾ ವ್ಯಾಪ್ತಿಯ ಸಮುದ್ರ ತೀರದಲ್ಲಿ ಘಟ‌ನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆದಿತ್ಯವಾರ ಪ್ರತೀಕ್ ಎಂಬಾತನನ್ನು ಬಂಧಿಸಲಾಗಿತ್ತು. ನಿನ್ನೆ ಅಮಲ್ ಅಜಯನ್ ಮತ್ತು ನಿಶಾಂತ್ ಗೆ ಬಂಧಿಸಲಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಸುನಿಲ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ.

ಸುರತ್ಕಲ್: ಗಾಂಜಾ ಅಮಲಿನಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ ➤ ಮೂವರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

2023 ಐಸಿಸಿ ಮಹಿಳಾ ಟಿ20 ವಿಶ್ವಕಪ್ ➤ ಟೀಂ ಇಂಡಿಯಾದಿಂದ ಓರ್ವ ಆಟಗಾರ್ತಿಯ ಆಯ್ಕೆ!

(ನ್ಯೂಸ್ ಕಡಬ) newskadaba.com.ಬೆಂಗಳೂರು. ಫೆ.27. 2023ರ ಮಹಿಳಾ ಟಿ20 ವಿಶ್ವಕಪ್​ಗೆ ಅದ್ಧೂರಿ ತೆರೆಬಿದ್ದಿದೆ. ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಮತ್ತೊಮ್ಮೆ ಚಾಂಪಿಯನ್ ಆಗುವ ಮೂಲಕ ಟಿ20 ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 16 ರನ್​ಗಳಿಂದ ಮಣಿಸಿದ ಆಸೀಸ್ ವನಿತಾ ತಂಡ 6ನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಿತು. ಈ ಮೂಲಕ ಟೂರ್ನಿಗೂ ತೆರೆ ಬಿದ್ದಿತ್ತು. ಇದೀಗ ಐಸಿಸಿ ಅತ್ಯುತ್ತಮ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿದ್ದು, ಈ ತಂಡದಲ್ಲಿ ಟೀಂ ಇಂಡಿಯಾದ ಓರ್ವ

2023 ಐಸಿಸಿ ಮಹಿಳಾ ಟಿ20 ವಿಶ್ವಕಪ್ ➤ ಟೀಂ ಇಂಡಿಯಾದಿಂದ ಓರ್ವ ಆಟಗಾರ್ತಿಯ ಆಯ್ಕೆ! Read More »

ಕರ್ನಾಟಕ, ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

➤ ಸಂಜೆ ವಾಕ್ ಮಾಡುವಾಗ ಹಾವು ಕಚ್ಚಿ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com. ನೆಲಮಂಗಲ. ಫೆ.27. ಲೇಔಟ್ ಒಂದರಲ್ಲಿ ಸಂಜೆ ವೇಳೆ ವಾಕ್ ಮಾಡ್ತಿದ್ದ ವ್ಯಕ್ತಿಯೊರ್ವರಿಗೆ   ನಾಗರ ಹಾವೊಂದು ಕಚ್ಚಿತ್ತು.  ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸುವ ವೇಳೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ.  ಮೃತರನ್ನು ಸೈಯದ್ ಸಮೀವುಲ್ಲಾ(38)  ಎಂದು ಗುರುತಿಸಲಾಗಿದೆ. ನೆಲಮಂಗಲ  ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಲೂರು ಗ್ರಾಮದ ನಿವಾಸಿ. ನಿನ್ನೆ ರಾತ್ರಿ ವೇಳೆ ವಾಕ್ ಮಾಡುತ್ತಿದ್ದ ಈತ ಹಾವು ಕಡಿತಕ್ಕೊಳಗಾಗಿ ದಾರುಣ ಸಾವನ್ನಪಿದ್ದಾನೆ. 40 ದಿನದ ಹಿಂದಷ್ಟೆ ಮಗುವಿಗೆ ತಂದೆಯಾಗಿದ್ದ ಈತ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದು,

➤ ಸಂಜೆ ವಾಕ್ ಮಾಡುವಾಗ ಹಾವು ಕಚ್ಚಿ ವ್ಯಕ್ತಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ!

(ನ್ಯೂಸ್ ಕಡಬ) newskadaba.com. ನವದೆಹಲಿ ಫೆ.27. ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ. ಮಧ್ಯ ಹಗರಣ ಕೇಸ್ ಗೆ ಸಂಬಂಧಿಸಿ ಈ ಹಿಂದೆ ಸಿಬಿಐ ಈ ಪ್ರಕರಣದಲ್ಲಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಮನೀಶ್ ಅಬಕಾರಿ ನೀತಿಯನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಕೆಲವು ಸೂಚನೆಗಳನ್ನು ನೀಡಿದ್ದರು ಎಂದು ಅವರು ಹೇಳಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ. ಮನೀಶ್‌ ಸಿಸೋಡಿಯಾ ಅವರು ಸಿಬಿಐ ವಿಚಾರಣೆಗೆ ಆಗಮಿಸಬೇಕಿತ್ತು. ವಿಚಾರಣೆಗೆ ಬರುವಂತೆ ಸಿಬಿಐಯು ಇವರನ್ನು

➤ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ! Read More »

ರಾಷ್ಟ್ರೀಯ ನ್ಯೂಸ್

➤ ವಾಲಿಬಾಲ್ ಆಡುವಾಗ ಕುಸಿದು ಬಿದ್ದು ಯುವಕ ಮೃತ್ಯು.!

(ನ್ಯೂಸ್ ಕಡಬ) newskadaba.com. ಕಾರ್ಕಳ.  ಫೆ.27.  ವಾಲಿಬಾಲ್ ಆಟವಾಡುವಾಗ ಕುಸಿದು ಬಿದ್ದು,ಯುವಕ ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದ ದುರ್ಗಾ ಅನುದಾನಿತ ಶಾಲೆಯ ಬಳಿ ನಡೆದಿದೆ. ಸಂತೋಷ (34) ಮೃತ ದುರ್ದೈವಿ. ಸಂತೋಷ್ ನಿನ್ನೆ ಸಂಜೆ ವಾಲಿಬಾಲ್‌ ಆಡುತ್ತಿರುವಾಗ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕಾರ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

➤ ವಾಲಿಬಾಲ್ ಆಡುವಾಗ ಕುಸಿದು ಬಿದ್ದು ಯುವಕ ಮೃತ್ಯು.! Read More »

ಕರಾವಳಿ, ಕ್ರೈಮ್ ನ್ಯೂಸ್

➤ ಪ್ರೇಯಸಿಗಾಗಿ ತನ್ನ ಗೆಳೆಯನನ್ನೆ ಕ್ರೂರವಾಗಿ ಕೊಂದ ಆಸಾಮಿ

(ನ್ಯೂಸ್ ಕಡಬ) newskadaba.com. ಹೈದರಾಬಾದ್. ಫೆ.27.  ತನ್ನ ಗೆಳತಿಗೆ ಸಂದೇಶ ಕಳುಹಿಸಿದ್ದಕ್ಕಾಗಿ ಮತ್ತು ಕರೆ ಮಾಡಿದ ಎಂಬ ಕಾರಣಕ್ಕಾಗಿ  ತನ್ನ ಸ್ನೇಹಿತನನ್ನು ಕ್ರೂರವಾಗಿ ಕೊಂದ ಘಟನೆ  ಹೈದರಾಬಾದ್ ನಲ್ಲಿ ನಡೆದಿದೆ. ಇಲ್ಲಿ ನವೀನ್ (22) ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹರಿಹರ ಕೃಷ್ಣಾ ಎಂಬಾತ ಕೃತ್ಯವನ್ನು ನಡೆಸಿದ್ದಾನೆ ಎನ್ನಲಾಗಿದೆ.   ನವೀನ್ ನನ್ನು ಕೊಲೆ ಮಾಡಿ, ಆತನ ತಲೆ ಕಡಿದು,ಆತನ ಹೃದಯ ಮತ್ತು ಖಾಸಗಿ ಭಾಗಗಳನ್ನು ತೆಗೆದು, ಬೆರಳುಗಳನ್ನು ಕತ್ತರಿಸಿ, ನಂತರ ಪೊಲೀಸರಿಗೆ ಆರೋಪಿ ಶರಣಾಗಿದ್ದಾನೆಂದು ಹೇಳಾಗಿದೆ. ಆರೋಪಿಯ ಹೇಳಿಕೆ

➤ ಪ್ರೇಯಸಿಗಾಗಿ ತನ್ನ ಗೆಳೆಯನನ್ನೆ ಕ್ರೂರವಾಗಿ ಕೊಂದ ಆಸಾಮಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೆಹಲಿ ಅತಿಕ್ರಮಣ ವಿರೋಧಿ ಅಭಿಯಾನ ➤ ಮಸೀದಿ ಮತ್ತು ದೇವಸ್ಥಾನಗಳ ನೆಲಸಮ

(ನ್ಯೂಸ್ ಕಡಬ) newskadaba.com. ನವದೆಹಲಿ .ಫೆ.27.  ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯು  ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ಮಧ್ಯ ದೆಹಲಿಯ ಕಾಲುದಾರಿಯಲ್ಲಿದ್ದ ಮಸೀದಿ ಮತ್ತು ದೇವಾಲಯ ಸೇರಿದಂತೆ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸಿದೆ. ಪಾದಚಾರಿ ಮಾರ್ಗದಲ್ಲಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ ಮತ್ತು ಅವುಗಳನ್ನು ಕೆಡವಲು ನ್ಯಾಯಾಲಯ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವ ಬಗ್ಗೆ ಪಿಟಿಐ ವರದಿ ಮಾಡಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ಮಾತನಾಡಿ, ಪಾದಚಾರಿ ಮಾರ್ಗದಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಚಾಲನೆ ನೀಡಲಾಗುತ್ತಿದೆ, ಈ ಕುರಿತು ನ್ಯಾಯಾಲಯದ ಆದೇಶವಿದೆ

ದೆಹಲಿ ಅತಿಕ್ರಮಣ ವಿರೋಧಿ ಅಭಿಯಾನ ➤ ಮಸೀದಿ ಮತ್ತು ದೇವಸ್ಥಾನಗಳ ನೆಲಸಮ Read More »

ರಾಷ್ಟ್ರೀಯ ನ್ಯೂಸ್

ವಿಟ್ಲ ವ್ಯಕ್ತಿಯ ಅನುಮಾನಸ್ಪದ ಸಾವು ➤ದೂರು ದಾಖಲು

(ನ್ಯೂಸ್ ಕಡಬ) newskadaba.com. ವಿಟ್ಲ.  ಫೆ.27. ನಿದ್ರಿಸುತ್ತಿದ್ದ ವ್ಯಕ್ತಿ ಬೆಳಗ್ಗೆ ಏಳದಿರುವುದನ್ನು ಗಮನಿಸಿ ಆಸ್ಪತ್ರೆಗೆ ಕರೆ ತಂದ ಸಂದರ್ಭ  ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅನುಮಾನಸ್ಪದ ಸಾವಿನ ಕುರಿತು ದೂರು ದಾಖಲಾದ ಹಿನ್ನಲೆಯಲ್ಲಿ ವಿಟ್ಲ ಪೊಲೀಸರು ವಿಶೇಷ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಮೃತ ವ್ಯಕ್ತಿ. ಇಡ್ಕಿದು ಗ್ರಾಮದ ಅರ್ಕೆಚ್ಚಾರು ಕುಮೇರು ಎಂಬಲ್ಲಿ ವಾಸದ ಮನೆಯ ಕೋಣೆಯಲ್ಲಿ ಮಲಗಿದ್ದಲ್ಲಿಯೇ ಇದ್ದುದನ್ನು ಗಮನಿಸಿದ ಪತ್ನಿಆಶಾ, ಪತ್ನಿಯ ತಂದೆ ಹಾಗೂ ಕೆಲವು ವ್ಯಕ್ತಿಗಳು ಸೇರಿಕೊಂಡು

ವಿಟ್ಲ ವ್ಯಕ್ತಿಯ ಅನುಮಾನಸ್ಪದ ಸಾವು ➤ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top