ಖಾಸಗಿ ಬಸ್ ಮತ್ತು ಆಟೋ ನಡುವೆ ಮುಖಾಮುಖಿ ಢಿಕ್ಕಿ     ➤  ಹಲವರಿಗೆ ಗಾಯ

(ನ್ಯೂಸ್ ಕಡಬ)newskadaba.com  ಹನೂರು, ಫೆ.25. ಖಾಸಗಿ ಬಸ್ ಹಾಗೂ ಗೂಡ್ಸ್ ಆಟೋ ನಡುವೆ ಮುಖಾಮುಖಿ ಢಿಕ್ಕಿಯಾಗಿ ಐವರು ಗಾಯಗೊಂಡು ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ಎಲ್ಲೇಮಾಳ ಸಮೀಪದ ಆಂಜನೇಯ ದೇವಾಲಯದ ಬಳಿ ಸಂಭವಿಸಿದೆ.

ಮೈಸೂರಿನ ಜನತಾ ನಗರದ ನಿವಾಸಿಗಳಾದ ಒಂದೇ ಕುಟುಂಬದ ಪವಿತ್ರ(10), ಪೂಜಾ(23), ಮಹದೇವಮ್ಮ(40), ಜಯಲಕ್ಷ್ಮಿ(18), ಸೇರಿದಂತೆ ಮಂಜುಳಾ (40)ರವರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

 

Scroll to Top